ಮಾನವ ಸರಪಳಿ ನಿರ್ಮಾಣ ಯಶಸ್ವಿಗೆ ಜಾಗೃತಿ ಜಾಥ

| Published : Sep 14 2024, 01:56 AM IST

ಮಾನವ ಸರಪಳಿ ನಿರ್ಮಾಣ ಯಶಸ್ವಿಗೆ ಜಾಗೃತಿ ಜಾಥ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ಶಾಲಾ ವಿದ್ಯಾರ್ಥಿಗಳು ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದೊಂದಿಗೆ ಜಾಗೃತಿ ಜಾಥ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸೆ.15ರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಇದೇ ಮೊದಲಬಾರಿಗೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಣೆ ಮಾಡುತ್ತಿದ್ದು, ಸಾರ್ವಜನಿಕರು ಸಹ ಮುಕ್ತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಮ್ಮ ದೇಶದ ಸಂಪೂರ್ಣ ಆಡಳಿತ ಪ್ರಜಾಪ್ರಭುತ್ವದ ಮೇಲಿದೆ. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಗೌರವಿಸುವ, ಉಳಿಸುವ ಕಾರ್ಯವನ್ನು ಮಾಡಬೇಕಿದೆ. ವಿಶ್ವದಲ್ಲೇ ಭಾರತದ ಪ್ರಜಾಪ್ರಭುತ್ವ ವಿಶೇಷ ಮನ್ನಣೆಯನ್ನು ಗಳಿಸಿದೆ. ನಮ್ಮನ್ನು ಆಳುವ ಸರ್ಕಾರವನ್ನು ನಾವೇ ಆರಿಸುವ ಅಧಿಕಾರಿವನ್ನು ನಮಗೆ ನೀಡಲಾಗಿದೆ ಎಂದರು.

ನೈರ್ಮಲ್ಯ ಇಂಜಿನಿಯರ್ ಕೆ.ಬಿ. ನರೇಂದ್ರಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ವಿನಯ್, ಸಹಾಯಕ ಇಂಜಿನಿಯರ್ ಕೆ. ಲೋಕೇಶ್, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿಕಾರಿ ಸತೀಶ್, ಸಮುದಾಯ ಅಧಿಕಾರಿ ಭೂತಣ್ಣ, ಪ್ರೋಗ್ರಾಂ ಅಧಿಕಾರಿ ಸಂದೀಪ್, ಹರೀಶ್, ಓಬಳೇಶ್, ಚೇತನ್, ನಾಗರಾಜು, ರಾಜೇಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಗಣೇಶ್, ಸುನೀಲ್, ಗೀತಾಕುಮಾರಿ, ರುದ್ರಮುನಿ, ಎಚ್. ತಿಪ್ಪೇಸ್ವಾಮಿ, ವಿಶ್ವನಾಥ, ಎಸ್.ಎಲ್. ಮಂಜಣ್ಣ, ಗುರುಪ್ರಸಾದ್, ವೆಂಕಟೇಶ್ ಮುಂತಾದವರು ಜಾಗೃತಿ ಜಾಥದಲ್ಲಿ ಭಾಗವಹಿಸಿದ್ದರು.