ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಅಮೃತ್-2 ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ₹18.98 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಚಿಕ್ಕೋಡಿ : ಗಡಿಭಾಗದ ಬೋರಗಾಂವದಲ್ಲಿ ಶುದ್ಧೀಕರಿಸಿದ ನೀರು ಸರಬರಾಜು ಯೋಜನೆಗೆ ಆಗ್ರಹಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಅಮೃತ್-2 ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ₹18.98 ಕೋಟಿ ಅನುದಾನ ಮಂಜೂರಾಗಿದೆ. ಈ ಯೋಜನೆಯಿಂದ ಪಟ್ಟಣದ ನಾಗರಿಕರಿಗೆ 24 ಗಂಟೆ ಶುದ್ಧ ನೀರು ಸರಬರಾಜು ಆಗಲಿದ್ದು, ಗಡಿ ಭಾಗದಲ್ಲಿ ಸರ್ಕಾರದ ವಿವಿಧ ಯೋಜನೆ ಜಾರಿಗೆ ತರಲು ಶ್ರಮಿಸಲಾಗುತ್ತಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಷ್ಠಾನಗೊಳಿಸಿದ ಕೇಂದ್ರ ಪುರಸ್ಕೃತ ಅಮೃತ 2 ಯೋಜನೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮತದಾರರು ನಂಬಿಕೆಯಿಟ್ಟು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಪಾತ್ರರಾಗಿ ಗರಿಷ್ಠ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ. ಬೋರಗಾಂವದಲ್ಲಿನ ಎಲ್ಲ ಸಮಸ್ಯೆ ಬಗೆಹರಿಸಿ ಗಡಿಭಾಗದ ಈ ಪಟ್ಟಣ ಅಭಿವೃದ್ಧಿಯಲ್ಲಿ ಮಾದರಿಯಾಗಿ ಮಾಡಲು ಪ್ರಯತ್ನಿಸುವುದಾಗಿ ತಳಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷ ಭಾರತಿ ವಸವಾಡೆ, ಮುಖ್ಯಾಧಿಕಾರಿ ಸ್ವಾನಂದ ತೋಡಕರ, ಉಮೇಶ ಶೀಗಿಹಾಳಿ, ಪಪಂ ಸದಸ್ಯ ಅಭಯಕುಮಾರ ಮಗದುಮ್, ತುಳಷಿದಾಸ್ ವಸವಾಡೆ, ಸಂಗಪ್ಪ ಐದಮಾಳೆ, ಪ್ರದೀಪ ಮಾಳಿ, ದಿಗಂಬರ ಕಾಂಬಳೆ, ಜಾವೇದ್ ಮಕಾಂದಾರ, ರೋಹಿತ್ ಮಾನೆ, ರಾಜು ಮಗದುಮ್, ಶೋಭಾ ಹಾವಲೆ, ಗಿರಿಜಾ ವಠಾರೆ, ಸಂಗೀತಾ ಶಿಂಗೆ, ಬಿ.ಟಿ. ವಠಾರೆ, ಮಾಣಿಕ್ ಕುಂಬಾರ, ಮಾರುತಿ ನಿಕಂ ಇದ್ದರು.
ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ನಗರ ಪಂಚಾಯತಿ ಮತ್ತು ಪುರಸಭೆಗಳಿಗೆ ಯೋಜನೆ ಮಂಜೂರು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಪ್ರಿಯಾಂಕಾ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಯೋಜನೆ ಮಂಜೂರಾಗಿದೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನಾವು ಈಡೇರಿಸುತ್ತಿದ್ದು, ಇದಕ್ಕಾಗಿ ಜನರು ಸಹಕರಿಸುತ್ತಿದ್ದಾರೆ. ಅಭಿವೃದ್ಧಿಯಲ್ಲಿ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ.
-ಉತ್ತಮ ಪಾಟೀಲ ಕಾಂಗ್ರೆಸ್ ಮುಖಂಡ
;Resize=(128,128))
;Resize=(128,128))