ಕಕ್ಕುಂದಕಾಡು ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ

| Published : Dec 09 2024, 12:46 AM IST

ಕಕ್ಕುಂದಕಾಡು ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ
Share this Article
  • FB
  • TW
  • Linkdin
  • Email

ಸಾರಾಂಶ

ಷಷ್ಠಿ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡೆಸಲಾಯಿತು. ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಸುಬ್ರಹ್ಮಣ್ಯ

ಷಷ್ಠಿ ಹಬ್ಬವನ್ನು ಶನಿವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಷಷ್ಠಿ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು. ಈ ಸಂದರ್ಭ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಪೂಜಾ ಕಾರ್ಯಗಳನ್ನು

ನೆರವೇರಿಸಿಕೊಂಡ ಪುನೀತ ಭಾವವನ್ನು ಹೊಂದಿದರು.

ಮಧ್ಯಾಹ್ನ ಶ್ರೀ ವೆಂಕಟೇಶ್ವರನಿಗೆ ಗಂಟೆ ಜಾಗಟ ವೇದ ಘೋಷಗಳೊಂದಿಗೆ ವಿಶೇಷ ಮಹಾ ಪೂಜೆ ನೆರವೇರಿ ಮಹಾ ಮಂಗಳಾರತಿಯ ತೀರ್ಥ ಪ್ರಸಾದ ವಿತರಣೆಯ ಬಳಿಕ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಟಿ.ಆರ್. ಶ್ರೀನಿವಾಸ, ಉಪಾಧ್ಯಕ್ಷ ಟಿ.ಕೆ ಸೂರ್ಯ ಕುಮಾರ್, ಕಾರ್ಯಾಧ್ಯಕ್ಷ ಟಿ ಎನ್ ರಮೇಶ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ, ಖಜಾಂಚಿ ಎಂ.ಪಿ ಗೋಪಾಲ, ನಿರ್ದೇಶಕರಾದ ರಾಧಾಕೃಷ್ಣ ರೈ, ಸೀನ, ತಂಗ, ಮಹೇಶ್, ಮಂಜುಳಾ, ಹಿರಿಯರಾದ ಟಿ.ವಿ.ಶ್ರೀನಿವಾಸ್ ಆನಂದಸ್ವಾಮಿ ಟಿ.ಎ, ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು. ದೇವಾಲಯದ ಮುಖ್ಯ ಅರ್ಚಕ ಸುದೀರ ಪೂಜಾ ಕೈಂಕರ್ಯಗಳು ನೆರವೇರಿಸಿದರು.