ಯಲಬುರ್ಗಾ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿಯಾಗಿವೆ. ಯೋಜನೆಗಳು ನಿರಂತರವಾಗಿ ಮುಂದುವರೆಯಲಿವೆ
ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.ಪಟ್ಟಣದ 7ನೇ ವಾರ್ಡ್‌ನಲ್ಲಿ ಜೆಸ್ಕಾಂ ಇಲಾಖೆಯಿಂದ ಹಮ್ಮಿಕೊಂಡಿದ್ದ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನಾ ಅರ್ಜಿ ಸಲ್ಲಿಕೆ ಕುರಿತು ವೀಕ್ಷಣೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಎಲ್ಲ ವರ್ಗದ ಬಡವರಿಗೆ ಅನುಕೂಲಕರವಾಗಿದೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಇದರಲ್ಲಿ ಪರಿಷ್ಕಣೆ ಮಾತ್ರ ಮಾಡಲಾಗುತ್ತಿದೆ. ಫಲಾನುಭವಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು. ಕ್ಷೇತ್ರದ ಮನೆ ಮನೆಗೂ ಜೆಸ್ಕಾ ಇಲಾಖೆ ನೌಕರರ ಭೇಟಿ ನೀಡಿದ್ದಾರೆ. ಗೃಹ ಜ್ಯೋತಿ ಫಲಾನುಭವಿಗಳು ಪರಿಶೀಲನೆ ಅರ್ಜಿ ಸಲ್ಲಿಸಬೇಕು. ಇದರಿಂದ ಅನುಕೂಲವಾಗಲಿದೆ. ಇತ್ತೀಚಿಗೆ ಈ ಯೋಜನೆಯಿಂದ ಕೆಲವರು ಕಮರ್ಷಿಯಲ್ ಆಗಿ ಉಪಯೋಗ ಮಾಡುತ್ತಿದ್ದಾರೆ. ಅಂತವರಿಗೆ ಅವಕಾಶ ಇರುವುದಿಲ್ಲ. ಬಾಡಿಗೆ ಮನೆ ಇದ್ದವರಿಗೆ ಮನೆ ಮಾಲೀಕರು ಒಪ್ಪಂದ ಪತ್ರ ಕೊಟ್ಟು ಸೌಲಭ್ಯ ಪಡೆಯಬಹುದು ಸರ್ಕಾರದ ಈ ಮಹತ್ವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗುವ ಉದ್ದೇಶದಿಂದ ಇಂತಹ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಗೃಹಜ್ಯೋತಿ ಯೋಜನೆಯಿಂದ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ದೊರಕುತ್ತಿರುವುದು ಆರ್ಥಿಕ ಹೊರೆ ಇಳಿಸುತ್ತಿದೆ. ಇಲಾಖೆಯ ನೌಕರರ ಮನೆ ಮನೆಗೆ ಬಂದಾಗ ಅಗತ್ಯ ದಾಖಲೆ ನೀಡಿ ಸಹಕರಿಸಬೇಕು ಎಂದರು.ಉಭಯ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ, ಸಂಗಮೇಶ ಗುತ್ತಿ ಮಾತನಾಡಿದರು.
ಮನೆಗೆ ಭೇಟಿ: ಪಟ್ಟಣದ 75ನೇ ಬೂತ್‌ನಲ್ಲಿ ಎಸ್ಐಆರ್ ಕುರಿತು ಗ್ಯಾರಂಟಿ ಯೋಜನೆ ಸಮಿತಿಯ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಸದಸ್ಯ ಮಲ್ಲಿಕಾರ್ಜುನ, ಜೆಸ್ಕಾಂ ಎಇಇ ಮಹ್ಮದ್ ಖಲೀಮುದ್ದೀನ್, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ನೌಕರರಾದ ಅಮರೇಶ್ವರ ರಡ್ಡಿ, ಮಹೇಶ ಹುಬ್ಬಳ್ಳಿ, ಧನಿಯಪ್ಪ ಬಣಕಾರ, ವೀರೇಶ ಬಣಕಾರ ಹಾಗೂ ಇಲಾಖೆ ಸಿಬ್ಬಂದಿ ಸೇರಿ ಇತರರು ಹಾಜರಿದ್ದರು.