ಗಲ್ಫ್ ಮೆಡಿಕಲ್ ಯುನಿವರ್ಸಿಟಿ(ಜಿಎಂಯು) ಮೊದಲ ಬಾರಿಗೆ ಸಿಸಿಎಟಿ ಏರೋಮೆಡಿಕಲ್ ಟ್ರಾನ್ಸ್‌ಪೋರ್ಟ್ ಫೌಂಡೇಶನ್ ಕೋರ್ಸ್ ಪ್ರಾರಂಭಿಸುವ ಮೂಲಕ ಏರೋಮೆಡಿಕಲ್ ಕೋರ್ಸ್‌ನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.
ಮಂಗಳೂರು: ಗಲ್ಫ್ ಮೆಡಿಕಲ್ ಯುನಿವರ್ಸಿಟಿ(ಜಿಎಂಯು) ಮೊದಲ ಬಾರಿಗೆ ಸಿಸಿಎಟಿ ಏರೋಮೆಡಿಕಲ್ ಟ್ರಾನ್ಸ್‌ಪೋರ್ಟ್ ಫೌಂಡೇಶನ್ ಕೋರ್ಸ್ ಪ್ರಾರಂಭಿಸುವ ಮೂಲಕ ಏರೋಮೆಡಿಕಲ್ ಕೋರ್ಸ್‌ನಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ.ಅಜ್ಮಾನ್, ಯುಎಇ - ಮಧ್ಯಪ್ರಾಚ್ಯದ ವೇಗವಾಗಿ ಬೆಳೆಯುತ್ತಿರುವ ಅಕಾಡೆಮಿಕ್ ಹೆಲ್ತ್ ಸೈನ್ಸಸ್ ಸಂಸ್ಥೆಗಳಲ್ಲಿ ಒಂದಾದ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಡಿಸೆಂಬರ್ ೪ ರಿಂದ ೯ರ ವರೆಗೆ ಅಜ್ಮಾನ್ ಕ್ಯಾಂಪಸ್ನಸ್‌ನಲ್ಲಿ ನಡೆಸಿದ ಮೊದಲ ಸಿಸಿಎಟಿ ಏರೋ ಮೆಡಿಕಲ್ ಟ್ರಾನ್ಸ್‌ಪೋರ್ಟ್ ಫೌಂಡೇಶನ್ ಲೆವೆಲ್ ಕೋರ್ಸ್‌ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಏರೋಮೆಡಿಕಲ್ ಕೋರ್ಸ್‌ಗೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬೇಡಿಕೆ ಮತ್ತು ಸೀಮಿತ ಸೀಟುಗಳ ಅವಕಾಶದ ಕಾರಣದಿಂದ ಮುಂದಿನ ಬ್ಯಾಚ್ ಜೂನ್ ೨೦೨೬ರಲ್ಲಿ ಆರಂಭವಾಗಲಿದೆ.
ಏರೋ ಮೆಡಿಕಲ್ ಕೋರ್ಸ್‌ನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಆರು ದಿನಗಳ ತೀವ್ರ ತರಬೇತಿ ನೀಡುವ ಮೂಲಕ ವೈದ್ಯರು, ನರ್ಸ್‌ಗಳು, ಪ್ಯಾರಾಮೆಡಿಕ್ಸ್ ಮತ್ತು ರೋಗಿಗಳ ಸಾಗಾಣಿಕೆ, ಮೆಡಿಕಲ್ ಎವಾಕ್ಯುಯೇಷನ್, ಏರ್ ಆಂಬ್ಯುಲೆನ್ಸ್ ಕಾರ್ಯಾಚರಣೆ ಹಾಗೂ ಗ್ಲೋಬಲ್ ಮೆಡಿಕಲ್ ರಿಪ್ಯಾಟ್ರಿಯೇಷನ್‌ನಲ್ಲಿ ತೊಡಗಿರುವ ಆರೋಗ್ಯ ವೃತ್ತಿಪರರಿಗೆ ವಿನ್ಯಾಸಗೊಳಿಸಲಾಗಿತ್ತು. ವೇಗವಾಗಿ ಬೆಳೆಯುತ್ತಿರುವ ಏರೋ ಮೆಡಿಕಲ್ ಮತ್ತು ರಿಟ್ರೀವಲ್ ಮೆಡಿಸಿನ್ ಕ್ಷೇತ್ರಕ್ಕೆ ತಜ್ಞರನ್ನು ಸಿದ್ಧಗೊಳಿಸುವ ಮಹತ್ವದ ಹಂತವಾಗಿ ಈ ಕಾರ್ಯಕ್ರಮ ಕಾಣಿಸಿದೆ.ಯುನೈಟೆಡ್ ಕಿಂಗ್‌ಡಮ್ ಸಿಸಿಎಟಿನ ಜಾಗತಿಕ ಏರೋ ಮೆಡಿಕಲ್ ತಜ್ಞರ ಸಹಯೋಗದಲ್ಲಿ ಹಾಗೂ ಕೋರ್ಸ್ ನಿರ್ದೇಶಕ ಪ್ರೊ. ಡಾ. ಟೆರಿ ಮಾರ್ಟಿನ್ ಮಾತನಾಡುತ್ತಾ, ಜಾಗತಿಕವಾಗಿ ವೈದ್ಯಕೀಯ ಪ್ರವಾಸಿಗರ ಸಂಖ್ಯೆಯ ಏರಿಕೆಯಿಂದ, ಮಾನವೀಯತೆಯ ಕಾರ್ಯಕ್ರಮಗಳ ವೃದ್ಧಿಯಿಂದ ಮತ್ತು ಮಧ್ಯಪೂರ್ವದಲ್ಲಿ ವಿಮಾನ ಆಂಬ್ಯುಲೆನ್ಸ್‌ಗಳ ಅವಲಂಬನೆ ಮೇಲೆ ಹೆಚ್ಚಿದ ಹೂಡಿಕೆಗಳಿಂದ ಏರೋಮೆಡಿಕಲ್ ಸೇವೆಗಳ ಸಂಶೋಧನೆಗಾಗುವ ಜಾಗತಿಕ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ತರಬೇತಿ ಕಾರ್ಯಕ್ರಮಗಳ ತಕ್ಷಣದ ಅಗತ್ಯ ಇದೆ ಎಂದರು.ಜಿಎಂಯು ಚಾನ್ಸಲರ್ ಪ್ರೊ. ಡಾ. ಮಂಡ ವೆಂಕಟರಮಣ ಮಾತನಾಡಿ, ಜಿಎಂಯು ಇಂದಿಗೆ ಬದಲಾಗುತ್ತಿರುವ ಜಗತ್ತಿನ ವಾಸ್ತವಿಕತಗಳಿಗೆ ತಕ್ಕಂತೆ ಆರೋಗ್ಯಸೇವೆ ವೃತ್ತಿಪರರನ್ನು ತಯಾರಿಸುವುದು. ಪ್ರಸಕ್ತ ಸನ್ನಿವೇಶದಲ್ಲಿ ಏರೋ ಮೆಡಿಕಲ್ ಕೇರ್ ಅತ್ಯಂತ ಗಂಭೀರ ಕ್ಷೇತ್ರ. ಈ ಕಾರ್ಯಕ್ರಮ ನಮ್ಮ ಪ್ರದೇಶಕ್ಕೆ ತುರ್ತು ಪರಿಸ್ಥಿತಿಗಳನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಎದುರಿಸಲು ಪರಿಣತಿಯನ್ನು ನೀಡುತ್ತದೆ ಎಂದರು.ಏರೋ ಮೆಡಿಕಲ್ ಟ್ರಾನ್ಸ್ಪೋರ್ಟ್ ಇಂದು ಆಯ್ಕೆಯಲ್ಲ. ಇದು ಅಂತಾರಾಷ್ಟ್ರೀಯ ಆರೋಗ್ಯ ಸೇವೆ, ಮೆಡಿಕಲ್ ಎವಾಕ್ಯುವೇಷನ್ ಮತ್ತು ತುರ್ತು ಪ್ರತಿಕ್ರಿಯೆಗೆ ಅನಿವಾರ್ಯ ಎಂದು ತುಂಬೆ ಗುಂಪಿನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಹೇಳಿದರು.
ಈ ಕೋರ್ಸ್ ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಉತ್ತರ ಅಮೆರಿಕದಿಂದ ತರಬೇತಿಗಾಗಿ ಬಂದವರನ್ನು ಆಕರ್ಷಿಸಿತು. ಕೋರ್ಸ್ ಪೂರ್ಣಗೊಳಿಸಿದವರಿಗೆ ಸಿಸಿಎಟಿ, ಜಿಎಂಯು ಮತ್ತು ಇಂಡಸ್ಟ್ರಿ ಪಾಲುದಾರರಿಂದ ಸಂಯುಕ್ತ ಪ್ರಮಾಣಪತ್ರ ನೀಡಲಾಯಿತು.ಈ ಯಶಸ್ಸಿನ ನಂತರ ಜಿಎಂಯು ಜೂನ್ ೨೦೨೬ರಲ್ಲಿ ಏರೋ ಮೆಡಿಕಲ್ ತರಬೇತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ವಿಮಾನ ವೈದ್ಯಕೀಯ, ಮಾನವೀಯ ಆರೋಗ್ಯ ಮತ್ತು ಕ್ರಿಟಿಕಲ್ ಕೇರ್ ಟ್ರಾನ್ಸ್‌ಪೋರ್ಟ್ ಶಿಕ್ಷಣದಲ್ಲಿ ತನ್ನ ನಾಯಕತ್ವವನ್ನು ಇನ್ನಷ್ಟು ಬಲಪಡಿಸುತ್ತಿದೆ.ನೂತನ ಕೋರ್ಸಿಗೆ ಸೇರಲು ಅವಕಾಶಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ www.gmu.ac.ae ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.