ವನಜಾ ಜೋಶಿ ಅವರ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್.ಡಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವನಜಾ ಜೋಶಿ ಅವರ ನಕ್ಕು ಬಿಡು ಬಾನಕ್ಕಿ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಉದ್ಘಾಟಿಸಿದರು.ಕಲಬುರಗಿಯ ಎನ್.ವಿ. ಡಿಗ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಹಾಗೂ ಗಜಲ್ ಕವಿ ಡಾ. ಮಲ್ಲಿನಾಥ ಎಸ್. ತಳವಾರ ಅವರು ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು. ಸಾಹಿತಿ ಸುಮನಾ ಆರ್. ಹೇರ್ಳೆ ಪುಸ್ತಕ ಪರಿಚಯ ನೀಡಿ, ಕೃತಿಯ ಭಾವನಾತ್ಮಕ ವ್ಯಾಪ್ತಿ ಮತ್ತು ಸಂಗತಿಯನ್ನೆತ್ತಿ ಹಿಡಿದರು. ಕೃತಿಕಾರರಾದ ವನಜಾ ಜೋಶಿ ತಮ್ಮ ಬರವಣಿಗೆಯ ಅನುಭವ ಹಂಚಿಕೊಂಡರು.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತಿಸಿದರು. ಲೇಖಕಿ ಅರುಣಾ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.