ಸಾರಾಂಶ
ಗುಂಡ್ಲುಪೇಟೆ ಪುರಸಭೆಯ ಪ್ರಸಕ್ತ ಸಾಲಿನ ಬಜೆಟ್ ಪ್ರತಿಯನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಪುರಸಭೆ ಅಧ್ಯಕ್ಷ ಮಧು ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಪುರಸಭೆಯ ೨೦೨೫-೨೬ನೇ ಸಾಲಿಗೆ ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂದನ್ ೭೯,೮೬,೭೫೨ ಉಳಿತಾಯ ಬಜೆಟ್ ಮಂಡಿಸಿದರು.ಆದಾಯ ವಿವರ:
ಆಸ್ತಿ ತೆರಿಗೆ & ದಂಡ ೨.೭೨.೭೦ ಕೋಟಿ, ಮಳಿಗೆಗಳ ಬಾಡಿಗೆ & ದಂಡ ೪೬.೬೫ ಲಕ್ಷ, ಕಟ್ಟಡ ಪರವಾನಗಿ ೧೨.೫೦ ಲಕ್ಷ, ಅಭಿವೃದ್ಧಿ ಮತ್ತು ಸುಧಾರಣೆ ೧೨.೫೦ ಲಕ್ಷ, ಉದ್ದಿಮೆ ಪರವಾನಿಗೆ ಶುಲ್ಕಗಳು & ಇತರೆ ಪರವಾನಿಗೆ ೧೨,೮೦, ಲಕ್ಷ, ನೀರಿನ ಶುಲ್ಕಗಳು & ಠೇವಣಿ ೪೯,೨೭೦೦೦ ಲಕ್ಷ, ಘನತಾಜ್ಯ ನಿರ್ವಹಣೆ ೧೪,೦೫,೦೦೦ ಲಕ್ಷ, ರಸ್ತೆ ಆಗತ ೨ ಲಕ್ಷ, ಖಾತ ಬದಲಾವಣೆ / ಖಾತ ನಕಲು ಪ್ರತಿಗಳ ಶುಲ್ಕ ೨೭ ಲಕ್ಷ, ಬ್ಯಾಂಕ ಖಾತೆಗಳಿಂದ ಬಂದ ಬಡ್ಡಿ ೧೩ ಲಕ್ಷ, ಇತರೆ ಶುಲ್ಕಗಳು (ಪ್ರಮಾಣ ಪತ್ರಗಳು, ಜಾಹೀರಾತು ತೆರಿಗೆ, ಸ್ಟಾಂಪ್ ಶುಲ್ಕ, ೧೧ ಸಕ್ಕಿಂಗ್ ಮಷಿನ್ ಶುಲ್ಕ, ಸಂತೆ ಶುಲ್ಕ, ಟೆಂಡರ್ ಫಾರಂ, ಪ್ಲಂಬರ್ ನೋಂದಣಿ ಶುಲ್ಕ, ಇತರೆ ದಂಡಗಳು, ನೆಲ ಬಾಡಿಗೆ, ಇತರೆ) ೪.೮೭.೮೬.೫ ಕೋಟಿ.ನಿರೀಕ್ಷಿತ ಅನುದಾನ:
ಎಸ್.ಎಫ್.ಸಿ. ಮುಕ್ತನಿಧಿ ೧.೨೦ ಕೋಟಿ, ಎಸ್.ಎಫ್.ಸಿ ವೇತನ ೩.೮೦ ಕೋಟಿ ಎಸ್.ಎಫ್.ಸಿ. ವಿದ್ಯುತ್ ೪.೦೫ ಕೋಟಿ, ಎಸ್.ಎಫ್.ಸಿ ಪ್ರೋತ್ಸಾಹ ೫೬ ಲಕ್ಷ, ಪೌರಕಾರ್ಮಿಕ ಗೃಹಭಾಗ್ಯ ೨೫ ಲಕ್ಷ, ನಲ್ಮ್ ೧೫ ಲಕ್ಷ,೧೫ / ೧೬ ನೇ ಹಣಕಾಸು ೨ ಕೋಟಿ, ಸ್ವಚ್ಛ ಭಾರತ್ ಮಿಶನ್ ೧.೨೫ ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ೪೫ ಲಕ್ಷ, ಕಚೇರಿ ಕಟ್ಟಡ ನಿರ್ಮಾಣ ವಿಶೇಷ ೭.೫ ಕೋಟಿ.ವೆಚ್ಚಗಳ ವಿವರಗಳ:
ಕಚೇರಿ ಕಟ್ಟಡ ನಿರ್ಮಾಣ ೭.೫೦ ಕೋಟಿ, ಕಚೇರಿ ಅಭಿವೃದ್ಧಿ ಕಾಮಗಾರಿ ೧೫ ಲಕ್ಷ, ಕಚೇರಿ ಉಪಕರಣಗಳು/ಪಿಠೋಪಕರಣ ೧೨.೭೫ ಲಕ್ಷ, ಸ್ವಾಗತ ಕಮಾನು/ಕ್ರೀಡಾಂಗಣ ಅಭಿವೃದ್ಧಿ/ರಸ್ತೆ-ಬದಿ ಮರ‍್ಗ ಸೂಚಿ ಫಲಕಗಳ ಅಳವಡಿಕೆ ಹಾಗೂ ಇತರೆ ಕಾಮಗಾರಿಗೆ ೪೭.೫೦ ಲಕ್ಷ, ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ೪.೫೦ ಕೋಟಿ, ಬೀದಿ ದೀಪ ಕಾಮಗಾರಿಗೆ ೩೭.೫೦ ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿಗೆ ೩೭.೫೦ ಲಕ್ಷ, ಸಾರ್ವಜನಿಕರ ಶೌಚಾಲಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ೧೭.೫೦ ಲಕ್ಷ, ನೈರ್ಮಲ್ಯ ವಾಹನ, ಸಲಕರಣೆ ಖರೀದಿಗೆ ೪೨.೫೦ ಲಕ್ಷ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ೨೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಯಂತ್ರೋಪಕರಣಗಳ ಖರೀದಿ ಹಾಗೂ ಅಭಿವೃದ್ಧಿಗೆ ೧.೧೫ ಕೋಟಿ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ & ಯಂತ್ರೋಪಕರಣಗಳ ಖರೀದಿಗೆ ೧.೪೦ ಕೋಟಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ೨೦ ಲಕ್ಷ, ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ.ಗೆ ೨೫ ಲಕ್ಷ, ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ೪೦ ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದ ವರ್ಗ/ಅಂಗವಿಕಲರ ಅಭಿವೃದ್ಧಿಗೆ ೨೯.೧೫ ಲಕ್ಷ, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಮತ್ತು ಭತ್ಯೆಗಳ ಪಾವತಿಗೆ ೩.೮೭.೫೦ ಕೋಟಿ, ಕೌನ್ಸಿಲ್ ಗೌರವಧನ ವೆಚ್ಚಗಳು ೧೧.೫೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಆಧ್ಯಯನ ಪ್ರವಾಸಕ್ಕೆ ೧೭ ಲಕ್ಷ, ಎಸ್.ಎಫ್.ಸಿ ವಿದ್ಯುತ್ ಶುಲ್ಕಗಳು-ಬೀದಿದೀಪಕ್ಕೆ ೫೫ ಲಕ್ಷ, ಎಸ್.ಎಫ್.ಸಿ ವಿದ್ಯುತ್ ಶುಲ್ಕಗಳು-ನೀರು ಸರಬರಾಜು ೩.೫೦ ಕೋಟಿ, ನೈರ್ಮಲ್ಯ ಹೊರಗುತ್ತಿಗೆ ನಿರ್ವಹಣೆ/ದಾಸ್ತಾನು/ಕಾರ್ಯಕ್ರಮ/ವಾಹನಗಳ ಬಾಡಿಗೆ/ರಿಪೇರಿ/ವಿಮೆಗೆ ೧.೦೬೭೫ ಕೋಟಿ, ಹೊರಗುತ್ತಿಗೆ ಬೀದಿದೀಪ ನಿರ್ವಹಣೆಗೆ ೫೫.೫೦ ಲಕ್ಷ, ನೀರು ಸರಬರಾಜು ಕಾಮಗಾರಿ/ಹೊರಗುತ್ತಿಗೆ ನಿರ್ವಹಣೆ /ವೇತನ ವೆಚ್ಚಕ್ಕೆ ೧.೭೫.೫೦ ಕೋಟಿ, ನಲ್ಮ್ ತರಬೇತಿ ವೆಚ್ಚಗಳು/ ಸಹಾಯ ಧನಕ್ಕೆ ೧೦.೫ ಲಕ್ಷ, ಸ್ವಚ್ಛ ಭಾರತ್ ಮಿಷನ್ ಯೋಜನಾ ವೆಚ್ಚಗಳಿಗೆ ೨೫ ಲಕ್ಷ, ಪೌರ ಕಾರ್ಮಿಕ ಗೃಹಭಾಗ್ಯ ಸಹಾಯ ಧನಕ್ಕೆ ೨೫ ಲಕ್ಷ,ಕಟ್ಟಡಗಳ / ರಸ್ತೆ ಮತ್ತು ಚರಂಡಿ / ಮಳೆನೀರು ಚರಂಡಿ ಹಾಗೂ ಕಲ್ವರ್ಟ್ /ಸ್ಮಶಾನಗಳ /ಒಳಚರಂಡಿ/ ಮಾರುಕಟ್ಟೆ / ಪಾರ್ಕ್ ಮತ್ತು ಇತರೆ ದುರಸ್ತಿಗಳಿಗೆ ೯೭.೫೦ ಲಕ್ಷ, ಜಾಹೀರಾತು ವೆಚ್ಚಗಳು/ ಲೇಖನ ಸಾಮಗ್ರಿಗಳು/ ಪ್ರಯಾಣ ಭತ್ಯೆ /ಕಚೇರಿ ವೆಚ್ಚಗಳು/ ವೃತ್ತಪರ ಫೀ ಗಳು/ ಕಛೇರಿ ಉಪಕರಣಗಳ ದುರಸ್ತಿಗಳು/ ಕಾರ್ ಬಾಡಿಗೆ/ ಗಣತಿ ವೆಚ್ಚಗಳು /ಕಚೇರಿ ವಿದ್ಯುತ್ ಮತ್ತು ದೂರವಾಣಿ ವೆಚ್ಚಗಳು /ಪುರಸಭಾ ದೇಣಿಗೆ ಮತ್ತು ವಂತಿಕೆಗಳು/ ಚುನಾವಣೆ ವೆಚ್ಚಗಳು/ ರಾಷ್ಟ್ರೀಯ ಹಬ್ಬ ಮತ್ತು ಕಛೇರಿ ಸಾಮಾನ್ಯ ಸಭೆ / ಕರ‍್ಯಕ್ರಮ ವೆಚ್ಚಗಳು/ ಇತರೆ ಪುರಸಭಾ ವೆಚ್ಚಗಳಿಗೆ ೭೬.೪೫ ಲಕ್ಷ ವೆಚ್ಚವಾಗಲಿದೆ.ಬಜೆಟ್ ಸಭೆಯಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಸೇರಿದಂತೆ ಪುರಸಭೆ ಸದಸ್ಯರು ಹಾಗು ಸಿಬ್ಬಂದಿ ಇದ್ದರು.ಬೆಳಗಾವಿ ಮಾದರಿಯಲ್ಲಿ ಫುಡ್ ಜೋನ್
ಪಟ್ಟಣದಲ್ಲಿ ಬೆಳಗಾವಿ ಮಾದರಿಯಲ್ಲಿ ಫುಡ್ ಜೋನ್ ಮಾಡಬೇಕು ಎಂಬ ಆಸೆ ಇದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಬಜೆಟ್ ಸಭೆಯಲ್ಲಿ ಮಾತನಾಡಿ, ಪಟ್ಟಣ ಸುಂದರವಾಗಿಡಲು ಪುರಸಭೆ ಸ್ವಚ್ಛತೆಗೆ ಕಾಳಜಿ ಇರಬೇಕು. ಹೆದ್ದಾರಿ ಬದಿಯ ದುರಸ್ಥಿಗೂ ಅನುದಾನವಿದೆ ಬಳಕೆ ಮಾಡಿಕೊಳ್ಳಬೇಕು ಎಂದರು. ಪಟ್ಟಣದಲ್ಲಿ ಎಸ್ಸಿ, ಎಸ್ಟಿಗೆ ಪುರಸಭೆಯಲ್ಲಿ ಮೀಸಲಾದ ಅನುದಾನ ಸಾಲುತ್ತಿಲ್ಲ ಎಂಬ ಸದಸ್ಯರೊಬ್ಬ ಮನವಿಗೆ ಸ್ಪಂದಿಸಿ ಮಾತನಾಡಿ ಹೆಚ್ಚುವರಿ ಅನುದಾನ ಇಡಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣದ ಯುಜಿಡಿಗೆ ೮೮ ಕೋಟಿ ಅನುದಾನ ಬಂದಿದೆ. ಪಟ್ಟಣದ ಅಭಿವೃದ್ಧಿಗೆ ಪುರಸಭೆ ಸದಸ್ಯರು ಪಕ್ಷಬೇಧ ಮರೆತು ದುಡಿದು ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಸಲಹೆ ನೀಡಿದರು.ವಿಪಕ್ಷವೇ ಇಲ್ಲ ಎಂದ ಸದಸ್ಯ!:ಪುರಸಭೆ ಬಜೆಟ್ ಸಭೆಯಲ್ಲಿ ವಿಪಕ್ಷದವರು ಮೆಚ್ಚುಗೆ ಸೂಚಿಸಿದ್ದಾರೆ. ವಿಪಕ್ಷದ ಸದಸ್ಯರಿಗೆ ಶಾಸಕ ಗಣೇಶ್ ಪ್ರಸಾದ್ ಧನ್ಯವಾದ ಹೇಳಿದರು. ಶಾಸಕರು ಮಾತಿನ ನಡುವೆ ಮಧ್ಯ ಪ್ರವೇಶಿಸಿದ ಪುರಸಭೆ ಸದಸ್ಯ ಮಹಮದ್ ಇಲಿಯಾಸ್ (ಅಲ್ಲಾಹು) ಪುರಸಭೆಯಲ್ಲಿ ವಿಪಕ್ಷವೇ ಇಲ್ಲ ಎಂದು ಬಿಜೆಪಿಯನ್ನು ಕಾಲೆಳೆದರು. ಪಟ್ಟಣದಲ್ಲಿ ದೊಡ್ಡದೊಂದು ಪಾರ್ಕ್ ಅಭಿವೃದ್ಧಿ ಪಡಿಸಬೇಕು ಜೊತೆಗೆ ಎಸ್ಸಿ, ಎಸ್ಟಿಗಳಿಗೆ ಅನುದಾನ ಹೆಚ್ಚಳ ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ಮನವಿ ಮಾಡಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕ ಗಣೇಶ್ ಪ್ರಸಾದ್‌ರಿಗೆ ಪಟ್ಟಣದ ಅಭಿವೃದ್ಧಿಗೆ ದೂರದೃಷ್ಟಿ ಹೊಂದಿದ್ದಾರೆ. ಶಾಸಕರ ಕಾಳಜಿಯನ್ನು ಪುರಸಭೆ ಆಡಳಿತ ಮಂಡಳಿ ಬಳಸಿಕೊಂಡು ಪಟ್ಟಣದಲ್ಲಿ ಓಪನ್ ಜಿಮ್ ಮಾಡಬೇಕು. ಎಸ್ಸಿ, ಎಸ್ಟಿಗಳೇ ಪಟ್ಟಣದಲ್ಲಿ ಶೇ.೫೦ರಷ್ಟು ಇರುವ ಕಾರಣ ಎಸ್ಸಿ, ಎಸ್ಟಿಗೆ ೨ ಕೋಟಿ ಅನುದಾನ ಮೀಸಲಿಡಬೇಕು ಎಂದರು. ಆಡಳಿತ ಪಕ್ಷದ ಸದಸ್ಯ ಎನ್.ಕುಮಾರ್ ಮಾತನಾಡಿ, ಬಜೆಟ್ ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿದೆ. ಶಾಸಕರು ಸರ್ಕಾರದ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ತರುವ ಕೆಲಸ ಮಾಡಲಿ ಎಂದರು.