ದೇವತಗಲ್ ಸರ್ಕಾರಿ ಶಾಲೆಯಲ್ಲಿ ಗುರುವಂದನೆ

| Published : Mar 21 2024, 01:07 AM IST

ಸಾರಾಂಶ

ಕವಿತಾಳದ ದೇವತಗಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಗುರುವಂದನಾ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು.

ಕವಿತಾಳ: ದೇವತಗಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಗುರು ಶಂಭುಲಿಂಗ ಸ್ವಾಮೀಜಿ ಅಡವೀಶ್ವರ ಮಠ ಕಲ್ಲೂರ ವಹಿಸಿದ್ದರು. ಶಿಕ್ಷಕರಾದ ಶಂಕ್ರಪ್ಪ, ಶಿವಪ್ಪ, ಇಂದ್ರಪ್ಪ, ಪದ್ಮಾವತಿ, ಲಿಂಗಣ್ಣ, ನಾಗರತ್ನ, ಬಸವರಾಜ, ಹುಸೇನ್ ಬಾಷಾ, ರೇಣುಕಾ, ದೇವತಗಲ್ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಅಮರಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷರು ರಾಮಣ್ಣ ನಡಗಿನ, ಗ್ರಾಮ ಪಂಚಾಯಿತಿ ಸದಸ್ಯರಾದ ಮೌನೇಶ್, ಶಂಕ್ರಮ್ಮ ಯಲ್ಲಪ್ಪ, ಅನ್ನಪೂರ್ಣ ಶಂಕ್ರಪ್ಪ, ಹಳೆ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ, ವೆಂಕಟೇಶ್ ಶಂಕ್ರಿ, ದೇವರಾಜ, ಯಮನೂರ, ವೀರೇಶ್ ಹಾಸ್ಮಕಲ್, ಚಂದ್ರು, ಬಸವರಾಜ, ಪಂಪನಗೌಡ, ಚನ್ನಬಸವ, ವಿಶ್ವನಾಥ್, ಚಿನ್ನ ರೆಡಿ, ಮೌನೇಶ್, ಕೃಷ್ಣ, ಅಶೋಕ್, ಮಹಾಂತೇಶ, ದುರುಗಪ್ಪ, ರಂಗನಾಥ, ಅಮರೇಶ, ಅಯ್ಯಪ್ಪ, ಭಾಗವಹಿಸಿದ್ದರು ಅತಿಥಿ ಶಿಕ್ಷಕರಾದ ಸುದರ್ಶನ್, ಮಂಜುನಾಥ್, ಶಕುಂತಲಾ, ಇದ್ದರು. ಶಿಕ್ಷಕರು ಹಾಗೂ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆದುಕೊಂಡು ಬರಲಾಯಿತು.