ಕನ್ನಡಪ್ರಭ ವಾರ್ತೆ ಭದ್ರಾವತಿ

ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮದೇವಿ ಜಾತ್ರಾ ಮಹೋತ್ಸವ`ಊರ ಹಬ್ಬ ಏ.೨೦ ರಿಂದ ೨೬ರವರೆಗೆ ನಡೆಯಲಿದ್ದು, ಧಾರ್ಮಿಕ ಕಾರ್ಯಗಳ ಜೊತೆಗೆ ಹಲವು ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಕೆ ಲಕ್ಷ್ಮಣ್ ಕೋರಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಜಾತ್ರಾ ಮಹೋತ್ಸವದ ವಿಶೇಷ ಎಂದರೆ ಎಲ್ಲಾ ಜಾತಿ, ಧರ್ಮದವರು ಸೇರಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಏ.೨೦ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಹೊಸ ಸಿಡಿ ಮರ ಪ್ರತಿಷ್ಠಾಪನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೨೧ರ ಮಂಗಳವಾರ ಬೆಳಿಗ್ಗೆ ೮ ಗಂಟೆಗೆ ದೇವರುಗಳಿಗೆ ಅಭಿಷೇಕ, ಮಧ್ಯಾಹ್ನ ೧೧ ಗಂಟೆಗೆ ಮಹಾಮಂಗಳಾರತಿ ನಂತರ ಅನ್ನದಾನ ನಡೆಯಲಿದೆ ಎಂದರು.

ರಾತ್ರಿ ೮ ಗಂಟೆಗೆ ವಿಶೇಷ ಆಕರ್ಷಕ ಜಾನಪದ ಕಲಾ ತಂಡಗಳೊಂದಿಗೆ`ಶ್ರೀ ದೇವರುಗಳ ರಾಜಬೀದಿ ಉತ್ಸವ ನಡೆಯಲಿದೆ. ನಂತರ ಆಯೋಜಿಸಲಾಗಿರುವ ಸಭಾ ಕಾರ್ಯಕ್ರಮ ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಬಲ್ಕೀಶ್ ಬಾನು, ಸಮಾಜ ಸೇವಕ ಸಿ. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸುವರು. ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಸದಸ್ಯರಾದ ಅನುಪಮ ಚನ್ನೇಶ್ ಮತ್ತು ಆರ್. ಶ್ರೇಯಸ್(ಚಿಟ್ಟೆ) ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.


೨೨ರ ಬುಧವಾರ ಬೆಳಿಗ್ಗೆ ೫ ಗಂಟೆಗೆ ಭದ್ರಾ ನದಿಯಲ್ಲಿ`ಗಂಗೆ ಪೂಜೆ ಮತ್ತು ೬.೩೦ಕ್ಕೆ ದೇವರುಗಳ ದೇವಸ್ಥಾನ ಪ್ರವೇಶ, ಪೂಜೆ, ಮಂಗಳಾರತಿ, ಗದ್ದಿಗೆ ಪೂಜೆ ಸಮರ್ಪಣೆ ಜರುಗಲಿವೆ. ೨೩ರ ಗುರುವಾರ ಬೆಳಿಗ್ಗೆ ೬ ಗಂಟೆಗೆ`ದೇವರ ಸಿಡಿ ಉತ್ಸವ ಹಾಗೂ ಮಕ್ಕಳ ತೊಟ್ಟಿಲು ಸಿಡಿ ಉತ್ಸವ ನಡೆಯಲಿದ್ದು, ಸಮಾಜ ಸೇವಕ ಸಿ. ಮಹೇಶ್ ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ವಲಯ ಆಯುಕ್ತರಾದ ಸುನೀತಾ ಕುಮಾರಿ, ಉಪ ಅರಣ್ಯಾಧಿಕಾರಿ ದಿನೇಶ್ ಕುಮಾರ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸೂಡಾ ಸದಸ್ಯೆ ಅರುಣ ಕೆ.ಪಿ ಗಿರೀಶ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸಂಜೆ ೬.೩೦ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ರಸಮಂಜರಿ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ಬಿ.ಎಸ್ ಗಣೇಶ್, ಟಿಪ್ಪು ಸುಲ್ತಾನ್, ಮಹೇಶ್, ಚಂದ್ರು, ಸಂದೀಪ್, ಪ್ರಶಾಂತ್, ಮೆಹಬೂಬ್, ಫೀರ್‌ಷರೀಫ್, ಸೌಮ್ಯ ನಟರಾಜ್, ರಾಜೇಶ್ವರಿ ರಾಜು, ಪ್ರಸನ್ನ, ಕೃಷ್ಣ(ಕೋಟಿ), ಪರಶುರಾಮ, ಸಂದೀಪ್ ಹೊನ್ನವಿಲೆ, ಕಿರಣ್, ಕೇಶವ ಕೆಂಚಪ್ಪ, ಎಂ.ಎ ಅಜಿತ್, ಬಿ.ಕೆ ಲಕ್ಷ್ಮಣ್, ವೀಣಾ ಕೃಷ್ಣಮೂರ್ತಿ, ವೈ. ಸತ್ಯನಾರಾಯಣ, ಹೇಮಾವತಿ ಶಿವಾನಂದ್, ಸೋಮಶೇಖರ್, ಶಿವು ಪಾಟೀಲ್ ಮತ್ತು ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

೨೪ರ ಮಧ್ಯಾಹ್ನ ೩.೩೦ಕ್ಕೆ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ರಾಷ್ಟ್ರಿಯ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುನೀಲ್ ಬಿ. ತೇಲಿ ಮತ್ತು ಹಿರಿಯ ಮಾಜಿ ಪೈಲ್ವಾನರು ಉಪಸ್ಥಿತರಿರುವರು ಎಂದರು.

ಸಂಜೆ ೬.೩೦ಕ್ಕೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಶಿವಕುಮಾರ್, ಉಮೇಶ್, ಶಾಂತಮ್ಮ ಹೊನ್ನೂರಪ್ಪ, ಡಾ. ಅಶ್ವಥ್ ನಾರಾಯಣ, ಜಯಮ್ಮ ಯಲ್ಲಪ್ಪ, ವಿ.ಟಿ ವಿಜಯಣ್ಣ, ಗೀತಮ್ಮ ನಾಗರಾಜ್, ಸಂಜಯ್, ಸರೋಜಮ್ಮ ಬಸಣ್ಣ, ಲಕ್ಷ್ಮೀಕಾಂತ, ಗಣೇಶ್ ಸಾಮಿಲ್, ವೆಂಕಟೇಶ್, ಅಶೋಕ್, ಗಿರೀಶ್, ನೇತ್ರಮ್ಮ ಮತ್ತು ಮಕ್ಕಳು, ನಾಗರತ್ನ ವಿರುಪಾಕ್ಷಪ್ಪ, ಪ್ರಮೋದ್, ಮೋಹನ್, ಚಂದ್ರಣ್ಣ, ರಂಜಿತ್, ಚಂದ್ರಮ್ಮ ಪರಶುರಾಮ್, ಮಂಜೇಶ್ ಮತ್ತು ಮಂಜುನಾಥ್ ಸೇರಿದಂತೆ ಇನ್ನಿತರರಿಗೆ ಸನ್ಮಾನ ನಡೆಯಲಿದೆ. ಕುಸ್ತಿ ಪಂದ್ಯಾವಳಿ ೨೪ ರಿಂದ ೨೬ರವರೆಗೆ ೩ ದಿನಗಳ ಕಾಲ ಮಧ್ಯಾಹ್ನ ೩ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ನಡೆಯಲಿದೆ. ಈ ಬಾರಿ ವಿಶೇಷ ಎಂದರೆ ಎರಡು ಬೆಳ್ಳಿ ಗದೆಯ ಕುಸ್ತಿಯನ್ನು ಆಯೋಜಿಸಲಾಗಿದೆ. ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಬಿ.ಎಂ ಸಂತೋಷ್, ಉಪಾಧ್ಯಕ್ಷ ಮಂಜುನಾಥ್, ಜಂಟಿ ಕಾರ್ಯದರ್ಶಿ ಕೆ.ಟಿ ಶ್ರೀನಿವಾಸ್, ಖಜಾಂಚಿ ಜಯಪ್ರಕಾಶ್ ಪವಾರ್, ನಿರ್ದೇಶಕರಾದ ಕೃಷ್ಣಪ್ಪ, ಮಾರುತಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.