ಕನ್ನಡಪ್ರಭ ವಾರ್ತೆ ಹಳೇಬೀಡು
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾದ ಹಳೇಬೀಡು ಜಗತ್ ಪ್ರಸಿದ್ಧವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಾಗಿರುವ ಬೇಲೂರು- ಜಾವಗಲ್ ರಸ್ತೆಯ ಶ್ರೀ ಬಸವೇಶ್ವರ ವೃತ್ತ, ಕರಿಯಮ್ಮ ಮಹಾದ್ವಾರದ ಸರ್ಕಲ್‌ನಲ್ಲಿ ವಾಹನ ಮಾಲೀಕರು ಮತ್ತು ಚಾಲಕರಿಗೆ ಸಂಚಾರದ ಸಂಚಾರಿ ನಿಯಮವಿಲ್ಲದೆ ವಾಹನಗಳನ್ನು ಅಡ್ಡಾದಡ್ಡಿ ನಿಲ್ಲಿಸಿ ಪಾದಚಾರಿಗಳಿಗೆ ಮತ್ತು ಕಟ್ಟಡದ ಅಂಗಡಿ ಮಾಲೀಕರಿಗೆ ನಿತ್ಯವು ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯವೂ ದೊಡ-ದೊಡ್ಡ ಲಾರಿಗಳು, ಪೆಟ್ರೋಲ್ ಟ್ಯಾಂಕರ್, ಪ್ರವಾಸಿಗರ ಬಸ್ಸು, ಕಾರುಗಳ ಸಂಖ್ಯೆ ಅತಿ ಹೆಚ್ಚಾಗಿ ಕಂಡುಬರುತ್ತಿದೆ ಇದರ ಮಧ್ಯೆ ಇಲ್ಲಿಯ ತರಕಾರಿ ಅಂಗಡಿಯ ವಾಹನ ಮಾಲೀಕರು, ಬೀದಿ ವ್ಯಾಪಾರಿಗಳು ತಮ್ಮ-ತಮ್ಮ ವಾಹನಗಳನ್ನು ಸಂಚಾರದ ನಿಯಮವಿಲ್ಲದೆ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಭಾರಿ ತೊಂದರೆಯಾಗಿದೆ. ಸಂಜೆ ವೇಳೆಯಲ್ಲಿ ಇಲ್ಲಿನ ತರಕಾರಿ ಅಂಗಡಿಗಳಿಗೆ ನೂರಾರು ವಾಹನಗಳು ಬಂದು ನಿಂತುಕೊಳ್ಳುತ್ತವೆ. ಅದೇ ಸಮಯದಲ್ಲಿ ಶಾಲಾ-ಕಾಲೇಜುಗಳ ಮಕ್ಕಳು, ಶಾಲಾ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದರ ಮಧ್ಯೆ ಆ್ಯಂಬುಲೆನ್ಸ್ ವಾಹನಕ್ಕೂ ಜಾಗ ಬಿಡದೆ ಕಿರಿಕಿರಿಯಾಗುತ್ತಿದೆ. ಕಟ್ಟಡ ಮಾಲೀಕರು ನಮ್ಮ ಅಂಗಡಿ ಮುಂದೆ ನಿಲ್ಲಿಸಬೇಡಿ ಎಂದರೆ ನಾವುಗಳು ರೋಡ್ ಟ್ಯಾಕ್ಸ್ ಕಟ್ಟುತ್ತೇವೆ ಎಂದು ಜಗಳವಾಡುತ್ತಾರೆ. ಇದರ ಬಗ್ಗೆ ಅಧಿಕಾರಿಗಳಿಗೂ ದೂರು ನೀಡಿದರೆ ಇದು ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ನೆಪ ಹೇಳಿ ಕಳಿಸಿಕೊಡುತ್ತಾರೆ. ಮಾಧ್ಯಮದೊಂದಿಗೆ ಮಾತನಾಡಿದ ಬೇಲೂರು ತಾಲೂಕಿನ ಎಲೆಕ್ಟ್ರಾನಿಕ್ಸ್ ಉಪಕರಣ ರಿಪೇರಿದಾರರ ಸಂಘದ ಕಾರ್ಯದರ್ಶಿ ನಂಜುಂಡ, ನಾವು ಇಲ್ಲಿನ ಕಟ್ಟಡಕ್ಕೆ ಬಾಡಿಗೆ ನೀಡುತ್ತೇವೆ. ನಮಗೆ ಬರುವ ವರ್ತಕರಿಗೆ ಸರಿಯಾದ ಮಾರ್ಗ ಇಲ್ಲದೆ ಕಿರಿಕ್ ಉಂಟಾಗಿದೆ. ವಾಹನ ನಿಲ್ಲಿಸಬೇಡಿ ಎಂದರೆ ನಮ್ಮ ಮೇಲೆ ಜಗಳ ಮಾಡುತ್ತಾರೆ ಇದರ ಬಗ್ಗೆ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ತಿಳಿಸಿದರೆ ಇದು ನಮಗೆ ಸಂಬಂಧವಿಲ್ಲ ಎಂಬ ನಿರ್ಲಕ್ಷ್ಯದ ಉತ್ತರವಾಗಿದೆ. ನಮ್ಮ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಆರ್.ಟಿ.ಓ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಗಮನಹರಿಸಿ ಈ ಸಂಚಾರದ ನಿಯಮವನ್ನು ಕ್ರಮಬದ್ಧವಾಗಿ ಮಾಡಿಸಿಕೊಡಿ ಎಂದು ಮಾಧ್ಯಮ ಮೂಲಕ ಮನವಿ. ಇಲ್ಲವಾದರೆ ಹಳೇಬೀಡು ನಾಗರಿಕರು, ಸಂಘಸಂಸ್ಥೆ, ವರ್ತಕರದಿಂದ ಉಗ್ರ ಹೋರಾಟವನ್ನು ಮಾಡಬೇಕಾಗಿದೆ ತಿಳಿಸಿದರು.===ಹೇಳಿಕೆ- 1ಹಳೇಬೀಡಿಗೆ ಕೃಷಿ ಮಾರುಕಟ್ಟೆ ಇಲ್ಲದೆ ಈ ರೀತಿ ತೊಂದರೆ ಆಗಿದೆ ಆದರೂ ಸಂತೆಯ ಮೈದಾನದಲ್ಲಿ ಮಾರುಕಟ್ಟೆ ಮಾಡಿಕೊಟ್ಟರೂ ಅಲ್ಲಿಗೆ ಯಾರು ಹೋಗದೆ ಮುಖ್ಯ ರಸ್ತೆಗಳ ಮುಂದೆ ಶೆಡ್ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನಗಳ ದಟ್ಟನೆ ಜಾಸ್ತಿಯಾಗಿದೆ. ನಮ್ಮಶಾಸಕರು ಸಮಸ್ಯೆ ಬಗೆಹರಿಸಿಕೊಡಬೇಕು.
ಮಂಜಪ್ಪ, ಅರ್ಪಿತ ಮೆಡಿಕಲ್ ಮಾಲೀಕ