ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ವಾಕರ್ಸ್ ವಿಂಗ್ ಸಂಸ್ಥೆಯ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರ್ಷ ಆಯ್ಕೆಯಾದರು. ಹಂಪಿಯ ಖಾಸಗಿ ಹೋಟೆಲ್ ನಲ್ಲಿ ಅಧ್ಯಕ್ಷ ದಿನೇಶ್ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಖಜಾಂಚಿಯಾಗಿ ಬಿ.ಕೆ. ಉದಯ್ ಕುಮಾರ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಅಧ್ಯಕ್ಷರಾದ ಎ.ಸಿ. ಶಿವಪ್ರಸಾದ್, ಎಚ್.ಸಿ. ನಾಗೇಶ್, ಪಿ.ಕೆ. ರವಿ, ಬಿ.ಎಸ್. ಸುಂದರ್, ಮೋಹನ್ ನಿಶಾಂತ್, ನವೀನ್ ಧರ್ಮಪ್ಪ, ಉದಯ ರವಿ, ಎಚ್.ಬಿ. ಹೃಶಿಕೇಶ್, ಬಿ.ಸಿ. ವೆಂಕಟೇಶ್, ಬಿ.ಎಂ. ದಿನೇಶ್, ಬಿ.ಟಿ. ತಿಮ್ಮ ಶೆಟ್ಟಿ ಇದ್ದರು.