ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುವಿಶ್ವ ಆರೋಗ್ಯ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ದೇವರಾಯಪಟ್ಟಣದ ಶಾರದಾಂಬಾ ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ ಕಾರ್ಯಕ್ರಮ ನಡೆಸಲಾಯಿತು.ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ರಂಗಸ್ವಾಮಿ ಎಚ್.ವಿ.ಮಾತನಾಡಿ, ನನ್ನ ಆರೋಗ್ಯ ನನ್ನ ಹಕ್ಕು ಎನ್ನುವ ಈ ವರ್ಷದ ಘೋಷ ವಾಕ್ಯದ ಬಗ್ಗೆ ವಿವರಿಸಿದರು. ಭಾರತೀಯ ವೈದ್ಯ ಸಂಘದ ಹಿರಿಯ ಸದಸ್ಯರಾದ ಡಾ. ಹನುಮಕ್ಕ ಅವರು ಆಶ್ರಮದ ಫಲಾನುಭವಿಗಳಿಗೆ ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಯಶೋಧ ಆರ್.ಪಿ. ವೈದ್ಯ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ವೃದ್ಧಾಶ್ರಮದ ಎಲ್ಲಾ ೬೩ ಜನರಿಗೆ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಯಿತು. ನಂತರ ಅಗತ್ಯ ಔಷಧಿ ಮತ್ತು ಹಣ್ಣುಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಅಸಾಂಕ್ರಾಮಿಕ ರೋಗಗಳ ವಿಭಾಗ, ಹಿರಿಯರ ಆರೈಕೆ ವಿಭಾಗ ಮತ್ತು ಉಪಶಾಮಕ ವಿಭಾಗಗಳ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ತಂಡವು ಪೂರ್ವಭಾವಿ ತಪಾ ಸಣೆಯನ್ನು ಯಶಸ್ವಿಯಾಗಿ ನೆರವೇರಿಸಿ 8 ಜನರಲ್ಲಿ ಮಧುಮೇಹ, 3 ಜನರಲ್ಲಿ ರಕ್ತದೊತ್ತಡ ಮತ್ತು ಒಬ್ಬರಿಗೆ ಹೈಫೋಥೈರಾಯ್ಡ್ ರೋಗ ಇರುವ ಬಗ್ಗೆ ಶಂಕಿಸಲಾಯಿತು.
ಇದೇ ಸಂದರ್ಭದಲ್ಲಿ ನೇತ್ರ ಪರೀಕ್ಷೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಅಸಾಂಕ್ರಾಮಿಕ ರೋಗಗಳ ವಿಭಾಗದ ಡಾ. ನಾಗರಾಜ್ ಪಾಟೀಲ್, ಸಂಸ್ಥೆಯ ನಿರ್ದೇಶಕರಾದ ಯಶೋಧಮ್ಮ ಆರ್.ಪಿ., ಭಾರತೀಯ ವೈದ್ಯಕೀಯ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಡಾ.ರಂಗಸ್ವಾಮಿ ಎಚ್.ವಿ, ಗೌರವ ಕಾರ್ಯದರ್ಶಿ ಡಾ. ಮಹೇಶ್ ಜಿ, ಮಹಿಳಾ ವೈದ್ಯ ವೃಂದದ ಅಧ್ಯಕ್ಷರಾದ ಡಾ.ಅನಿತಾ ಬಿ. ಗೌಡ, ಕಾರ್ಯದರ್ಶಿ ಡಾ.ಶೃತಿ. ಕೆ, ಡಾ.ಹನುಮಕ್ಕ, ಡಾ. ಪದ್ಮಾವತಿ, ಡಾ.ಜ್ಯೋತಿ, ಡಾ.ಸವಿತಾ ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಔಷಧಿ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.