10 ರಿಂದ 19ರವರೆಗೆ 30ನೇ ಶ್ರೀರಾಮನವಮಿ ಸಂಗೀತೋತ್ಸವ

| Published : Apr 09 2024, 12:56 AM IST

10 ರಿಂದ 19ರವರೆಗೆ 30ನೇ ಶ್ರೀರಾಮನವಮಿ ಸಂಗೀತೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಏ. 10ರ ಸಂಜೆ 6ಕ್ಕೆ ಉದ್ಘಾಟನೆ ಮತ್ತು ಪ್ರವಚನ ನೆರವೇರಲಿದೆ. ಸ್ವಾಮಿ ಆದಿತ್ಯಾನಂದಾಜಿ ಅವರಿಂದ ವಸಂತ ನವರಾತ್ರಿ ವಿಷಯ ಕುರಿತು ಪ್ರವಚನ ನೀಡುವರು. ಏ. 11ರ ಸಂಜೆ 6.15ಕ್ಕೆ ಬೆಂಗಳೂರು ಸಹೋದರರು-ದ್ವಂದ್ವಗಾಯನ, ಡಾ.ಕೆ.ಟಿ. ಉದಯಕಿರಣ್- ಪಿಟೀಲು, ವಿದ್ವಾನ್ ಅನೂರ್ಅನಂತಕೃಷ್ಣಶರ್ಮ - ಮೃದಂಗ, ವಿದ್ವಾನ್ ಸುನಾದ್ ಅನೂರ್- ಘಟಂ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜಯಲಕ್ಷ್ಮೀಪುರಂನಲ್ಲಿರುವ ಶ್ರೀರಾಮಸೇವಾ ಮಂಡಳಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏ. 10 ರಿಂದ 19 ರವರೆಗೆ 30ನೇ ಶ್ರೀರಾಮನವಮಿ ಸಂಗೀತೋತ್ಸವವು ವಿ.ವಿ. ಮೊಹಲ್ಲಾದ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನೆರವೇರಲಿದೆ.

ಏ. 10ರ ಸಂಜೆ 6ಕ್ಕೆ ಉದ್ಘಾಟನೆ ಮತ್ತು ಪ್ರವಚನ ನೆರವೇರಲಿದೆ. ಸ್ವಾಮಿ ಆದಿತ್ಯಾನಂದಾಜಿ ಅವರಿಂದ ವಸಂತ ನವರಾತ್ರಿ ವಿಷಯ ಕುರಿತು ಪ್ರವಚನ ನೀಡುವರು. ಏ. 11ರ ಸಂಜೆ 6.15ಕ್ಕೆ ಬೆಂಗಳೂರು ಸಹೋದರರು-ದ್ವಂದ್ವಗಾಯನ, ಡಾ.ಕೆ.ಟಿ. ಉದಯಕಿರಣ್- ಪಿಟೀಲು, ವಿದ್ವಾನ್ ಅನೂರ್ಅನಂತಕೃಷ್ಣಶರ್ಮ - ಮೃದಂಗ, ವಿದ್ವಾನ್ ಸುನಾದ್ ಅನೂರ್- ಘಟಂ.

ಏ. 12ರಂದು ಸಂಜೆ 6.15ಕ್ಕೆ ವಿದುಷಿ ವೃಂದ ಆಚಾರ್ಯ-ಗಾಯನ, ವಿ. ಅದಿತಿ ಕೃಷ್ಣಪ್ರಕಾಶ್ ಪಿಟೀಲು, ವಿ. ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ಎಸ್. ಮಂಜುನಾಥ್- ಘಟಂ,

ಏ. 13ರ ಸಂಜೆ 6.15ಕ್ಕೆ ವಿದ್ವಾನ್ ಸಾಕೇತ್ ರಾಮನ್ ಗಾಯನ, ಡಾ. ನಿಶಾಂತ್ ಚಂದ್ರನ್ ಪಿಟೀಲು, ವಿ. ಅರ್ಜುನ್ಕುಮಾರ್ ಮೃದಂಗ, ವಿ. ಜಿ.ಎಸ್. ರಾಮಾನುಜನ್- ಘಟಂ. ಏ. 14ರ ಬೆಳಗ್ಗೆ 10.30ಕ್ಕೆ ಶ್ರೀರಾಮ ತಾರಕ ಹೋಮ, ಸಂಜೆ 6.15ಕ್ಕೆ ವಿದ್ವಾನ್ರಾಹುಲ್ ವೆಲ್ಲಾಲ್ ಗಾಯನ, ವಿ. ವೈಭವ್ ರಮಣಿ- ಪಿಟೀಲು, ವಿ. ನಾಗೇಂದ್ರ ಪ್ರಸಾದ್ ಸುಬ್ಬು- ಮೃದಂಗ, ವಿದ್ವಾನ್ ಎಸ್. ಮಂಜುನಾಥ್- ಘಟಂ. ಏ. 15ರ ಸಂಜೆ 6.15ಕ್ಕೆ ವಿದ್ವಾನ್ ಗಾಯತ್ರಿ ವೆಂಕಟರಾಘವನ್‌್- ಗಾಯನ, ಮೈಸೂರು ವಿ. ಶ್ರೀಕಾಂತ್ ಪಿಟೀಲು, ವಿದ್ವಾನ್ ಬಿ.ಸಿ. ಮಂಜುನಾಥ್ ಮೃದಂಗ, ವಿದ್ವಾನ್ ಜಿ .ಎಸ್. ರಾಮಾನುಜನ್ ಘಟಂ.

ಏ. 16ರ ಸಂಜೆ 6.15ಕ್ಕೆ ವಿದುಷಿ ಸಂಜನಾ ಕೌಶಿಕ್ ಹಿಂದೂಸ್ತಾನಿ ಗಾಯನ, ಪಂಡಿತ್ ಭೀಮಾ ಶಂಕರ್ಬಿದನೂರು- ಹಾರ್ಮೋನಿಯಂ, ಪಂಡಿತ್ ವೀರಭದ್ರಯ್ಯ ಹಿರೇಮಠ್ ತಬಲ. ಏ. 17ರ ಸಂಜೆ 6.15ಕ್ಕೆ ವಿದುಷಿ ಎಂ.ಆರ್. ಸುಧಾ-ಗಾಯನ, ವಿ. ಕೃತಿಕ್ ಕೌಶಿಕ್- ಪಿಟೀಲು, ವಿ. ಎ. ರಾಧೇಶ್- ಮೃದಂಗ, ವಿ. ವಿ.ಎಸ್. ರಮೇಶ್- ಘಟಂ.

ಏ. 18ರ ಸಂಜೆ 6.15ಕ್ಕೆ ವಿದ್ವಾನ್ ಸಂಪಗೂಡು ವಿಘ್ನರಾಜ- ಗಾಯನ, ವಿದ್ವಾನ್ ವೈಭವ್ ರಮಣಿ- ಪಿಟೀಲು, ವಿ. ಎಚ್.ಎಸ್. ಸುಧೀಂದ್ರ- ಮೃದಂಗ.

ಏ. 19ರ ಬೆಳಗ್ಗೆ 10ಕ್ಕೆ ಸೀತಾ ಸಹಸ್ರನಾಮ ಮತ್ತು ಶ್ರೀರಾಮ ಪಟ್ಟಾಭಿಷೇಕ, ಸಂಜೆ 6.15ಕ್ಕೆ ವಿದ್ವಾನ್ ಡಿ. ಬಾಲಕೃಷ್ಣ- ವೀಣೆ, ವಿದ್ವಾನ್ಟಿ.ಆರ್. ಶ್ರೀನಾಥ್ ಕೊಳಲು, ಡಾ. ಜೋತ್ಸ್ನಾ ಶ್ರೀಕಾಂತ್ ಪಿಟೀಲು, ವಿದ್ವಾನ್ ಸಿ. ಚೆಲುವರಾಜು- ಮೃದಂಗ, ವಿದ್ವಾನ್ ಎನ್. ಗುರುಮೂರ್ತಿ- ಘಟಂ ಪ್ರಸ್ತುತ ಪಡಿಸುವರು.