ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಲಿ: ಡಾ. ಬಸವರಾಜ ತಳವಾರ

| Published : Sep 19 2025, 01:01 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಾಗೂ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಅಂಗವಾಗಿ ಕಡಕೋಳ ಗ್ರಾಮದಲ್ಲಿ ರಕ್ತದಾನ ಶಿಬಿರ ನಡೆಯಿತು.

ಸವಣೂರು: ಈ ಜಗತ್ತು ಇಂದು ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಸೃಷ್ಟಿ ಮಾಡಲು ಇದುವರೆಗೂ ಯಾವ ವಿಜ್ಞಾನಿಗೂ ಸಾಧ್ಯವಾಗಿಲ್ಲ. ಇದನ್ನು ಮತ್ತೊಬ್ಬರಿಂದ ಪಡೆದುಕೊಂಡೆ ರೋಗಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಾಗೂ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಅಂಗವಾಗಿ ಕಡಕೋಳ ಗ್ರಾಮದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಯುವಕರು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ಹೇಳಿದರು.

ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ ಕರೆಪ್ಪಗೋಳ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲವ್ವ ಹುಲಗೂರು ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ರೇಣವ್ವ ತಳವಾರ, ಸದಸ್ಯರಾದ ಕಲ್ಲಪ್ಪ ಗುಂಜಳ, ಬಸಮ್ಮ ತಿಮ್ಮಯ್ಯನವರ, ನೀಲವ್ವ ಕಮ್ಮಾರ, ಈರಮ್ಮ ಜೇಕಿನಕಟ್ಟಿ, ಸುರೇಶ ಗುಜ್ಜರಿ, ಚಿಕ್ಕಪ್ಪ ಹಡಪದ, ಗ್ರಾಮಸ್ಥರಾದ ತಿಪ್ಪಣ್ಣ ಸುಬ್ಬಣ್ಣನವರ, ಶಂಬಣ್ಣ ಗುಂಜಳ, ನಾಗರಾಜ್ ಗುಜ್ಜರಿ, ರಾಜಶೇಖರ ಬಳ್ಳಾರಿ, ಮಾರುತಿ ಕಲ್ಯಾಣಿ, ಚಂದ್ರಣ್ಣ ಸಂಕದಾಳ, ರಮೇಶ ಮುಗದೂರ, ಪ್ರಾಥಮಿಕ ಅರೋಗ್ಯ ಕೇಂದ್ರ ಸಿಬ್ಬಂದಿ, ವೈದ್ಯಧಿಕಾರಿಗಳು, ಜಗದೀಶ್ ಕರಿಯಪ್ಪಗೌಡ್ರು, ಶರಣಪ್ಪ ಕಲ್ಲಮ್ಮನವರ, ಎಂ.ವೈ. ಪಟೇಲ್, ಗವಿಸಿದ್ದಪ್ಪ ದ್ಯಾವಣ್ಣನವರ, ಮೃತ್ಯುಂಜಯ ಮುಷ್ಠಿ, ಈರಣ್ಣ ಅಂಗಡಿ, ಹನುಮಂತ ಅಮರಾಪುರ, ಸತೀಶ ಗೌಳಿ, ಮಲ್ಲಿಕಾರ್ಜುನ ಅಕ್ಕೂರ, ಶರಣಪ್ಪ ಪರಮ್ಮನವರ, ಮಹಾಂತೇಶ ಹೊಳೆಮ್ಮನವರ, ಪ್ರವೀಣ ಪಾಟೀಲ್ ಉಪಸ್ಥಿತರಿದ್ದರು.ಮೆಡ್ಲೇರಿ ಪಿಡಿಒರಿಂದ ಹಣ ದುರುಪಯೋಗ: ಆರೋಪ

ರಾಣಿಬೆನ್ನೂರು: ತಾಲೂಕಿನ ಮೆಡ್ಲೇರಿ ಗ್ರಾಮ ಪಂಚಾಯಿತಿ ಪಿಡಿಒ ನಿಂಗಪ್ಪ ಲೆಕ್ಕಿಕೋನಿ ಅವರು ಗ್ರಾಪಂನಲ್ಲಿ ಲಕ್ಷಾಂತರ ರು. ಹಣ ದುರುಪಯೋಗ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಡಿಳ್ಳೆಪ್ಪ ಅಣ್ಣೇರ ಆರೋಪಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಡಿಒ ನಿಂಗಪ್ಪ ತಮ್ಮ ಅಧಿಕಾರಾವಧಿಯಲ್ಲಿ ನರೇಗಾ ಯೋಜನೆ, 15ನೇ ಹಣಕಾಸು, ಅಭಿವೃದ್ಧಿ ಅನುದಾನ ಹಾಗೂ ಇತರೆ ಯೋಜನೆಗಳಲ್ಲಿ ಲಕ್ಷಾಂತರ ಹಣ ದುರುಪಯೋಗ ಮಾಡಿ ಅಕ್ರಮ ಆಸ್ತಿ ಗಳಿಸಿದ್ದಾರೆ.

ವಾಸ್ತವವಾಗಿ ಇವರು ಶಿಕಾರಿಪುರ ತಾಲೂಕಿನ ಕಪ್ಪದಹಳ್ಳಿ ಗ್ರಾಪಂ ಪಿಡಿಒ ಆಗಿದ್ದು, ಸೇವೆ ನಿಯೋಜನೆ ಮೇರೆಗೆ ಹಾವೇರಿ ಜಿಲ್ಲೆಗೆ ಬಂದಿದ್ದಾರೆ. ರಾಣಿಬೆನ್ನೂರು ತಾಲೂಕಿನ ಕರೂರ, ಸೋಮಲಾಪುರ ಗ್ರಾಪಂಗಳಲ್ಲಿಯೂ ಕಾರ್ಯನಿರ್ವಹಿಸಿ ಸದ್ಯ ಮೆಡ್ಲೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪಿಡಿಒ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಅ. 6ರಂದು ಮೆಡ್ಲೇರಿ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.ವೀರೇಶ ಕೂನಬೇವು, ಲಕ್ಷ್ಮಣ ತಳವಾರ, ಗಣೇಶ ಕರ್ತಿಮಾಳಮ್ಮನವರ, ನಾಗರಾಜ ಬಾರ್ಕಿ, ಮಾಲತೇಶ ಭರಮಾಳದ ಸುದ್ದಿಗೋಷ್ಠಿಯಲ್ಲಿದ್ದರು.