ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕೃಷಿಯಲ್ಲಿ ಕಡಿಮೆ ಬಂಡವಾಳ ಹೂಡಿ ಹೆಚ್ಚಿನ ಇಳುವರಿ ಪಡೆಯಲು ದೇಶಿ ಕೃಷಿ ತಂತ್ರಜ್ಞಾನದಿಂದ ಮಾತ್ರ ರೈತ ಸಬಲನಾಗಲು ಸಾಧ್ಯ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರು ಜಾತ್ರಾ ಸಮಿತಿ, ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಪರಿಕರ ಮಾರಾಟಗಾರರ ಸಂಘ, ಕೆಎಲ್‌ಇ ಸಂಸ್ಥೆಯ ಕೆವ್ಹಿಕೆ ಮತ್ತಿಕೊಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಗ್ರಾಮೀಣ ಜಾಗೃತಾ ನಾಗರಿಕ ವೇದಿಕೆ, ರೋಟರಿ ಕ್ಲಬ್‌ಗಳ ಸಹಯೋಗದಲ್ಲಿ ನಡೆದ ಬೃಹತ್ ಕೃಷಿ ಮೇಳ ಹಾಗೂ ಜಾನುವಾರು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಅನ್ನ ಹಾಕುವ ರೈತ ಇಂದು ಆರ್ಥಿಕ ಸಂಕಷ್ಠದಿಂದ ಪಾರಾಗಬೇಕಿದೆ. ರೈತರು ಸಾವಯುವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.ಪ್ರಗತಿಪರ ರೈತ ಪ್ರಶಸ್ತಿ ವಿಜೇತ ಸಿದ್ದಪ್ಪ ಬಿದರಿ ಮಾತನಾಡಿ, ಇಂದಿನ ರಾಜಕಾರಣಿಗಳಿಗೆ ಕೃಷಿಕರ ಬಗ್ಗೆ ಆಸಕ್ತಿ ಇಲ್ಲ. ರೈತರ ರಕ್ತ ಹೀರಿ ಉದ್ದಿಮೆಗಳನ್ನು ಸ್ಥಾಪಿಸುತ್ತಿದ್ದಾರೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಶಿಸುತ್ತಿರುವ ಜಾನುವಾರು ಮಾರುಕಟ್ಟೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾಯಕಲ್ಪ ನೀಡಲು ಅನುದಾನ ಒದಗಿಸುವದಾಗಿ ಹೇಳಿದರು. ಅಲ್ಲದೇ, ರಾಜ್ಯದಲ್ಲಿಯೇ ಬೈಲಹೊಂಗಲ ಮಾರುಕಟ್ಟೆ ಖಾತಿಯಿತ್ತು. ಮತ್ತೆ ಅಭಿವೃದ್ದಿ ಪಡಿಸಲು ಮೇಳ ಆಯೋಜಿಸಲಾಗಿದೆ ಎಂದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಸರ್ಕಾರಗಳು ರೈತರಿಗೆ ಸೌಕರ್ಯ ಒದಗಿಸಬೇಕಿದೆ. ನೀರಾವರಿ, ವಿದ್ಯುತ್, ಬೆಳೆಗೆ ನಿಗದಿತ ಬೆಲೆ ನೀಡುವ ಮೂಲಕ ರೈತರನ್ನು ಸಬಲರನ್ನಾಗಿಸುವ ಅವಶ್ಯಕತೆ ಎಂದು ಹೇಳಿದರು.ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿದರು. ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಇಂಚಲದ ಪೂರ್ಣಾನಂದ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಭಾಅಕ್ಕ ಸಾನಿಧ್ಯ ವಹಿಸಿದ್ದರು. ವಕೀಲ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೊಳೇಕರ, ಕೃಷಿಮೇಳ ಅಧ್ಯಕ್ಷ ಶಿವರಂಜನ ಬೋಳನ್ನವರ, ಜಾನುವಾರ ಮೇಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಶಂಕರ ಮಾಡಲಗಿ, ಮಹಾಂತೇಶ ಮತ್ತಿಕೊಪ್ಪ, ಬಸವರಾಜ ಜನ್ಮಟ್ಟಿ, ಸಿ.ಕೆ.ಮೆಕ್ಕೇದ, ಮುರಗೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ, ಡಾ.ಸಿ.ಬಿ.ಗಣಾಚಾರಿ, ಸಿ.ಆರ್.ಪಾಟೀಲ, ಮಹಾಂತೇಶ ಜಿಗಜಿನ್ನಿ, ಬಾಬುಸಾಬ ಸುತಗಟ್ಟಿ, ವಿರುಪಾಕ್ಷಯ್ಯ ಕೋರಿಮಠ, ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್.ಅರಳಿಕಟ್ಟಿ, ನೂರಾರು ರೈತರು ಇದ್ದರು.ಮಹೇಶ ಬೆಲ್ಲದ ಸ್ವಾಗತಿಸಿದರು. ಚಂದ್ರು ಕಡೆಮನಿ ರೈತ ಗೀತೆ ಹಾಡಿದರು. ಮಹಾಂತೇಶ ತುರಮರಿ, ಬಸವರಾಜ ಭರಮನ್ನವರ ನಿರೂಪಿಸಿದರು. ಸಿ.ಆರ್. ಪಾಟೀಲ ವಂದಿಸಿದರು.
;Resize=(128,128))
;Resize=(128,128))
;Resize=(128,128))