ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಪಿಐಗೆ ಲೋಕಾ ಶಾಕ್‌

| Published : Nov 13 2025, 04:15 AM IST

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿಪಿಐಗೆ ಲೋಕಾ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸಲು ₹ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರಗೆ ಲೋಕಾಯುಕ್ತರು ಶಾಕ್‌ ನೀಡಿದ್ದು, ದೂರಿನ ಮೇರೆಗೆ ಠಾಣೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬುವವರಿಗೆ ಮೀರಸಾಬ ಮುಜಾವರ್‌ತೆಂಬಾತ ನಿವೇಶನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ₹ 20 ಲಕ್ಷ ಕೊಟ್ಟಿದ್ದರು.

ಕನ್ನಡಪ್ರಭ ವಾರ್ತೆ ಅಥಣಿ

ಸೈಟ್ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯಿಂದ ದೂರುದಾರನಿಗೆ ಹಣ ಕೊಡಿಸಲು ₹ 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಥಣಿ ಸಿಪಿಐ ಸಂತೋಷ ಹಳ್ಳೂರಗೆ ಲೋಕಾಯುಕ್ತರು ಶಾಕ್‌ ನೀಡಿದ್ದು, ದೂರಿನ ಮೇರೆಗೆ ಠಾಣೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬುವವರಿಗೆ ಮೀರಸಾಬ ಮುಜಾವರ್‌ತೆಂಬಾತ ನಿವೇಶನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ₹ 20 ಲಕ್ಷ ಕೊಟ್ಟಿದ್ದರು. 2 ಸೈಟ್ ಕೊಡಿಸುವುದಾಗಿ ಹೇಳಿ ಅನುಪಕುಮಾರ್‌ ಹಣ ಪಡೆದು, ಅವಧಿಯೊಳಗೆ ಸೈಟ್ ನೀಡದಿದ್ದಾಗ ಮೀರಸಾಬ ಮುಜಾವರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಅನುಪಕುಮಾರನಿಂದ ಮೀರಸಾಬಗೆ ಹಣವನ್ನು ಮರಳಿ ಕೊಡಿಸುವಲ್ಲಿ ಸಿಪಿಐ ಸಂತೋಷ ಹಳ್ಳೂರ ಸಹಾಯ ಮಾಡಿದ್ದರು. ಹಣ ವಾಪಸ್ ಕೊಡಿಸಿದ್ದಕ್ಕೆ ₹ 1 ಲಕ್ಷ ನೀಡುವಂತೆ ಸಿಪಿಐ ಮೀರಸಾಬ ಬಳಿ ಬೇಡಿಕೆ ಇಟ್ಟಿದ್ದರು. ಈ ಕುರಿತಾಗಿ ಸಿಪಿಐ ಮಾತನಾಡಿದ ಆಡಿಯೋದೊಂದಿಗೆ ಮೀರಸಾಬ್‌ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ದೂರು ದಾಖಲಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಭತರ ರೆಡ್ಡಿ ನೇತೃತ್ವದ ತಂಡ ಬುಧವಾರ ಅಥಣಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಸಿಪಿಐ ಸಂತೋಷ ಹಳ್ಳೂರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯ ಕಚೇರಿ ಹಾಗೂ ಅವರ ಮನೆಯಲ್ಲಿ ಪರಿಶೀಲಿಸಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.