ಸಾರಾಂಶ
ಸಾಹಿತ್ಯ ಓದುವಿಕೆಯಿಂದ ಮನುಷ್ಯನಲ್ಲಿರುವ ಅಸೂಯೆ, ಮದ, ಮತ್ಸರ, ದುರಹಂಕಾರ ನಾಶ ಮಾಡಿ ತಾಳ್ಮೆಯ, ಸಹನೆ ಹಾಗೂ ಪರೋಪಕಾರ ಗುಣ ಬೆಳೆಸುತ್ತದೆ ಎಂದು ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಹಿತ್ಯ ಓದುವಿಕೆಯಿಂದ ಮನುಷ್ಯನಲ್ಲಿರುವ ಅಸೂಯೆ, ಮದ, ಮತ್ಸರ, ದುರಹಂಕಾರ ನಾಶ ಮಾಡಿ ತಾಳ್ಮೆಯ, ಸಹನೆ ಹಾಗೂ ಪರೋಪಕಾರ ಗುಣ ಬೆಳೆಸುತ್ತದೆ ಎಂದು ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪದಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಜ್ಞಾನ ಅಭಿವೃದ್ಧಿಯ ಮೂಲ. ಶ್ರೀಮಂತಿಕೆಯ ಜ್ಞಾನಾರ್ಜನೆಗೆ ಪೂರಕವಲ್ಲ. ಸಾಹಿತ್ಯ ಸುಂದರ ಬದುಕಿನ ಮೂಲ. ನನ್ನ 5 ದಶಕಗಳಿಂದ ರಾಜಕೀಯ ಜೀವನದ ನಡೆಗೆ ಸಾಹಿತ್ಯ ಅಧ್ಯಯನ ಮಾರ್ಗದರ್ಶನವಾಯಿತು. ತಮ್ಮ ಜೀವನದ ಕತೆಯನ್ನು ಕವಿತೆಯ ಮೂಲಕ ಕವನ ವಾಚಿಸಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಎಸ್.ಜಿ.ನಂಜಯ್ಯನಮಠ ಅವರ ಜೀವನವೇ ಇತರರಿಗೆ ಸ್ಫೂರ್ತಿ. ಕವಿಗಳು. ಬರಹಗಾರರು. ವಿಮರ್ಶಕರು ಆಗಿರುವ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಎರಡು ಗ್ರಂಥಗನ್ನು ನೀಡಿದ್ದಾರೆ. ತಂದೆಯವರ ನೆನಪಿಗಾಗಿ ದತ್ತಿ ನಿಧಿ ನೀಡಿದ್ದು ಇವರ ಸಾಹಿತ್ಯಿಕ ಆಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಜಗದೀಶ ಬೋಳಸೂರ, ರಮೇಶ ಸೂಳಿಬಾವಿ, ಶ್ರೀದೇವಿ ಉತ್ಲಾಸರ, ಎಲ್.ಬಿ.ಶೇಖ, ಬಿ.ಎಂ.ಅಜೂರ, ಜಯಶ್ರೀ ಹಿರೇಮಠ, ಮಂಜುಳಾ ಕಾಳಗಿ, ರಾಜೇಶ್ವರಿ ಮೋಪಗಾರ, ಪ್ರೊ.ದೊಡ್ಡಣ ಬಜಂತ್ರಿ, ಜಿ.ಎಸ್.ಬಿಳೂರ, ರವಿ ಕಿತ್ತೂರ. ಅರ್ಜುನ ಶಿರೂರ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಸಿದ್ದಣ್ಣ ಸಾತಲಗಾಂವ, ಅನಿತಾ ಕಾಂಬಳೆ, ಶ್ರೀಧರ ಹೆಗಡೆ, ಪರಶುರಾಮ ಚಲವಾದಿ, ಅಭಿಷೇಕ ಚಕ್ರವರ್ತಿ, ಶಶಿಕಲಾ ನಾಯ್ಕೋಡಿ, ಮಹಮ್ಮದಗೌಸ್ ಹವಾಲ್ದಾರ, ಎಂ.ಬಿ.ಕಟ್ಟಿಮನಿ, ಡಾ.ಸಂಗಮೇಶ ಮೇತ್ರಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))