ಸಾರಾಂಶ
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಪಂಗೆ ಅಧ್ಯಕ್ಷೆಯಾಗಿ ಸುಮಿತ್ರಾ ಉಮೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಬುಧವಾರ ಘೋಷಿಸಿದರು.
ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಪಂಗೆ ಅಧ್ಯಕ್ಷೆಯಾಗಿ ಸುಮಿತ್ರಾ ಉಮೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಬುಧವಾರ ಘೋಷಿಸಿದರು.ಹೊಳವನಹಳ್ಳಿ ಗ್ರಾಪಂಯು ಒಟ್ಟು 19 ಸದಸ್ಯರ ಬಲ ಹೊಂದಿದ್ದು, ಈ ಹಿಂದೆ ಅಧ್ಯಕ್ಷರಾಗಿದ್ದ ಗುಲ್ಜಾರ್ ಬಾನು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಮರುಡಪ್ಪ ಹಾಗೂ ಸುಮಿತ್ರಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಮರುಡಪ್ಪ ೬ , ಸುಮಿತ್ರಾ ಉಮೇಶ್ ೧೩ ಮತ ಪಡೆದು ಜಯಗಳಿಸಿದ್ದಾರೆ.ಅಧ್ಯಕ್ಷೆ ಸುಮಿತ್ರಾ ಉಮೇಶ್ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಜೊತೆಗೂಡಿ ಶ್ರಮಿಸುತ್ತೇವೆ. ಎಂದರು.
ಗ್ರಾಪಂ ಪಿಡಿಒ ವಸಂತಕುಮಾರ್, ಉಪಾಧ್ಯಕ್ಷ ರಾಮು ಸದಸ್ಯರಾದ ಗುಲ್ಜಾರ್ ಬಾನು, ಮರುಡಪ್ಪ, ಶಹೇದಾ ಬಾನು, ಕುಂಬಿನರಸಿಂಹಯ್ಯ, ಭಾಗ್ಯಮ್ಮ, ರವಿಕುಮಾರ್, ಭಾಗ್ಯಲಕ್ಷ್ಮಿ, ಅಬ್ದುಲ್ ಸುಬಾನ್, ನಾಗರತ್ನಮ್ಮ, ಭಾಗ್ಯಮ್ಮ, ದೇವರಾಜು, ಮಾಲಾಶ್ರೀ, ಶಬ್ ನಮ್‌ಜಹೇರಾ ಇದ್ದರು.