ಸಾರಾಂಶ
ನಾನು ಶಾಸಕನಾಗಬೇಕಾದರೆ ಕುರುಬ ಸಮಾಜದ ಪಾತ್ರ ಬಹಳಷ್ಟು ದೊಡ್ಡದಿದೆ. ಹೀಗಾಗಿ ಈ ಸಮಾಜಕ್ಕೆ ನಾನು ಯಾವತ್ತಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನಾನು ಶಾಸಕನಾಗಬೇಕಾದರೆ ಕುರುಬ ಸಮಾಜದ ಪಾತ್ರ ಬಹಳಷ್ಟು ದೊಡ್ಡದಿದೆ. ಹೀಗಾಗಿ ಈ ಸಮಾಜಕ್ಕೆ ನಾನು ಯಾವತ್ತಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದರು.ಶನಿವಾರ ತಾಲೂಕು ಆಡಳಿತ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ 538ನೇ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿ, ನನ್ನಿಂದ ಸಮಾಜಕ್ಕೆ ಏನು ಸಹಾಯಬೇಕಾದರೆ, ದಿನದ 24 ಗಂಟೆಗಳ ಕಾಲ ನನ್ನ ಮನೆ ಬಾಗಿಲು ತೆರೆದಿರುತ್ತದೆ ಯಾವುದೇ ಪಕ್ಷ ಭೇದ ಮರೆತು ನನ್ನಿಂದ ಸಹಾಯ ಕೇಳಬಹುದು ಎಂದರು.
ಇದಕ್ಕೂ ಮುನ್ನ ಕೋಟೆಯಿಂದ ತೆರೆದ ವಾಹನದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಭಾವಚಿತ್ರವಿಟ್ಟು ಡೊಳ್ಳು, ನಗಾರಿಯೊಂದಿಗೆ ಮೆರವಣಿಗೆ ಮಾಡಲಾಯಿತು.ಬಸವಕಲ್ಯಾಣ ತಹಸಿಲ್ದಾರ ದತ್ತಾತ್ರೆ ಗಾದಾ ಪ್ರಾಸ್ತಾವಿಕ ಮಾತನಾಡಿದರು, ಕಾಡಾ ಅಧ್ಯಕ್ಷ ಬಾಬು ಹೊನ್ನಾ ನಾಯಕ, ನಗರಸಭೆ ಅಧ್ಯಕ್ಷ ಸಗಿರೋದ್ದಿನ್, ಮಾಜಿ ತಾ.ಪಂ ಅಧ್ಯಕ್ಷ ತುಕಾರಾಮ ಮಲ್ಲಪ್ಪ ಮೇತ್ರೆ, ಬಂಡೆಪ್ಪ ಮೇತ್ರೆ, ಇಓ ರಮೇಶ ಸುಲ್ಫಿ, ದಿಲೀಪ ಕುಮಾರ ಉತ್ತಮ ನಗರ ಸಿಪಿಐ ಅಲಿಸಾಬ್, ಪೌರಾಯುಕ್ತ ರಾಜು ಡಿ ಬಣಕಾರ, ಸಮಾಜದ ಮುಖಂಡರಾದ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬೊಕ್ಕೆ, ಚಂದ್ರಕಾಂತ ಮೇತ್ರೆ, ರಾಜೇಶ ಮೇತ್ರೆ ಸುಭಾಷ ರೇಕುಳಗೆ, ವಿಲಾಸ್ ಪೂಜಾರಿ, ಕಲ್ಯಾಣಿ ಪೂಜಾರಿ, ಈಶ್ವರ್ ಸೋನಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))