ಕೀರ್ತನೆ ಮೂಲಕ ಸಾಮಾಜಿಕ ಮಡಿವಂತಿಕೆ ವಿರೋಧಿಸಿದ ಕನಕರು: ದಂಡಿನಶಿವರ ಕುಮಾರ್

| Published : Nov 09 2025, 01:30 AM IST

ಕೀರ್ತನೆ ಮೂಲಕ ಸಾಮಾಜಿಕ ಮಡಿವಂತಿಕೆ ವಿರೋಧಿಸಿದ ಕನಕರು: ದಂಡಿನಶಿವರ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಿ, ವೈರಾಗ್ಯ, ಭಜನೆ, ಜಾತಿ ತಾರತಮ್ಯ ವಿರೋಧ, ಆಧ್ಯಾತ್ಮಿಕ ಅಂಶಗಳು ಕನಕದಾಸರ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿವೆ. ಶ್ರೀ ಕೃಷ್ಣನ ಪರಮ ಭಕ್ತನಾಗಿ ಭಕ್ತಿ ಪಾವಿತ್ರ್ಯತೆ ಹೇಗಿರಬೇಕೆಂದು ತೋರಿಸಿಕೊಟ್ಟ ಧೀಮಂತ ಭಕ್ತ ಕನಕದಾಸರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ಕನಕದಾಸರ ಕೀರ್ತನೆಗಳು ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯ ಸಾರುತ್ತವೆ. 12ನೇ ಶತಮಾನದ ಬವಣ್ಣನವರ ನಂತರ ಭಕ್ತಿ ಮತ್ತು ದಾಸ ಪಂಥದ ವಿವಿಧ ಕೀರ್ತನಕಾರರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಮರ ಸಾರಿ ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಮಡಿವಂತಿಕೆಯನ್ನು ವಿರೋಧಿಸಿದ್ದಾರೆ ಎಂದು ಜಿಲ್ಲಾ ಡಿಎಸ್‌ಎಸ್‌ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್‌ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ನಡೆದ ಕನಕದಾಸರ ಜಯಂತಿ ವೇಳೆ ಅವರು ಮಾತನಾಡಿ,

ಭಕ್ತಿ, ವೈರಾಗ್ಯ, ಭಜನೆ, ಜಾತಿ ತಾರತಮ್ಯ ವಿರೋಧ, ಆಧ್ಯಾತ್ಮಿಕ ಅಂಶಗಳು ಕನಕದಾಸರ ಕೀರ್ತನೆಗಳಲ್ಲಿ ಹಾಸುಹೊಕ್ಕಾಗಿವೆ. ಶ್ರೀ ಕೃಷ್ಣನ ಪರಮ ಭಕ್ತನಾಗಿ ಭಕ್ತಿ ಪಾವಿತ್ರ್ಯತೆ ಹೇಗಿರಬೇಕೆಂದು ತೋರಿಸಿಕೊಟ್ಟ ಧೀಮಂತ ಭಕ್ತ ಕನಕದಾಸರು ಎಂದು ಅವರು ಹೇಳಿದರು.

ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಮಾತನಾಡಿ ಕನಕದಾಸರ ಕೀರ್ತನೆಗಳು ಕನ್ನಡ ಸಾಹಿತ್ಯಕ್ಕೆ ನೀಡಿo ವೈಶಿಷ್ಟ್ಯಪೂರ್ಣವಾದ ಕೊಡುಗೆಗಳಾಗಿವೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿ ಮಾಯೆಯೊಳಗೊ ನಿನ್ನೊಳು ಮಾಯೆಯೊ ಇಂತಹ ನೂರಾರು ಕೀರ್ತನೆಗಳ ಮೂಲಕ ಅಂದು ಭಕ್ತಿಯ ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ಅವರು ಪ್ರಯತ್ನಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ವಾಲ್ಮೀಕಿ ಸಮಾಜದ ಅಧ್ಯಕ್ಷ ವಸಂತಕುಮಾರ್‌, ಕುರುಬ ಸಮುದಾಯದ ಮುಖಂಡರಾದ ಭೋಜರಾಜು, ರೇವಣ್ಣ, ಅಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.