ರಾಮನಗರ: ನಾವು ಪ್ರಕೃತಿಯನ್ನು ಉಳಿಸಿದರೆ ಪ್ರಕೃತಿಯು ನಮ್ಮನ್ನು ಉಳಿಸುತ್ತದೆ. ಎಲ್ಲರೂ ಆರೋಗ್ಯವಾಗಿರಬೇಕಾದರೆ ನಮಗೆ ಪರಿಸರ ಬಹಳ ಮುಖ್ಯ ಎಂದು ಜ್ಞಾನ ವಿಕಾಸ್ ವಿದ್ಯಾ ಸಂಘದ ಅಧ್ಯಕ್ಷರಾದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹೇಳಿದರು.
ಬಿಡದಿಯ ಜ್ಞಾನ ವಿಕಾಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಬದುಕಿಗೆ ಶುದ್ದವಾದ ಗಾಳಿ,ನೀರು ಮತ್ತು ಆಹಾರ ಅತ್ಯಗತ್ಯ ಇವೆಲ್ಲವನ್ನೂ ನೀಡುವುದೇ ಪರಿಸರ ಎಂದರು.ಈ ವಿಶ್ವ ಪರಿಸರ ದಿನವನ್ನು ಇಂದು ಮಾತ್ರ ಆಚರಿಸಿ ಬಿಡುವುದಲ್ಲ ನಿರಂತರ ಗಿಡಗಳನ್ನು ನೆಡುವುದು ಆ ಗಿಡಗಳಿಗೆ ನೀರು ಗೊಬ್ಬರ ಹಾಕಿ ಪೋಷಿಸಿದರೆ ಅವುಗಳು ಭವಿಷ್ಯದಲ್ಲಿ ನಮ್ಮನ್ನು ಕಾಪಾಡುತ್ತವೆ ಎಂದು ಹೇಳಿದರು.
ನಮ್ಮ ಕಾಲೇಜಿನ ಆವರಣದಲ್ಲಿ ಈಗಾಗಲೇ ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತಾ ಬಂದಿದ್ದು, ನಮ್ಮ ಕಾಲೇಜು ಆವರಣ ಹಸಿರುಮಯ ವಾತಾವರಣ ಹೊಂದಿದೆ. ಈ ದಿನವೂ ಸಹ 50 ಗಿಡಗಳನ್ನು ನೆಡಲಾಗುತ್ತಿದೆ ಎಂದು ಸಿ.ಎಂ.ಲಿಂಗಪ್ಪ ತಿಳಿಸಿದರು.ಸಂಸ್ಥೆಯ ಖಜಾಂಚಿ ಬಿ.ಎನ್ ಗಂಗಾಧರಯ್ಯ, ಕಾರ್ಯದರ್ಶಿ ರೇಣುಕಾಪ್ರಸಾದ್, ನಿರ್ದೇಶಕರಾದ ಎಲ್ ಸತೀಶ್ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ರೂಪಾ , ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಶರತ್ ಕುಮಾರ್ , ಅಧ್ಯಾಪಕರು ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಜರಿದ್ದರು.
5ಕೆಆರ್ ಎಂಎನ್ 9.ಜೆಪಿಜಿ
ಬಿಡದಿಯ ಜ್ಞಾನ ವಿಕಾಸ್ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.