ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಹಿಳೆಯರು ಕನಸು ಕಟ್ಟಿಕೊಂಡು ಧೈರ್ಯದಿಂದ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಮುನ್ನುಗ್ಗಿದರೆ ಸಮಾಜ ತಾನಾಗೇ ಗುರುತಿಸಲಿದೆ. ನಿಮ್ಮ ಅಸ್ತಿತ್ವ ಉಳಿಯಲಿದೆ ಎಂದು ಕಸಾಪ ಡಾ.ಕೋಡಿರಂಗಪ್ಪ ತಿಳಿಸಿದರು.ನಗರ ಹೊರವಲಯದದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಮಹಿಳೆಗೆ ಈ ಮೊದಲು ಶಿಕ್ಷಣ ಮರೀಚಿಕೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ದೊರೆತ ಶಿಕ್ಷಣದ ಫಲವಾಗಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ದೊರೆತ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ. ಮಹಿಳೆಯನ್ನು ಇಂದು ಕೇವಲ ಗೃಹಿಣಿಯಾಗಿ ಮಾತ್ರ ಕಾಣಲಾಗದು. ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಡಾ.ವಸುಂಧರ, ಪ್ರಾಂಶುಪಾಲ ಜಿ.ಡಿ. ಚಂದ್ರಯ್ಯ ಮಾತನಾಡಿದರು. ವಿವಿಧ ವೃತ್ತಿಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಕೆ.ಎಂ.ರೆಡ್ಡಪ್ಪ, ಸರ್ದಾರ್ ಚಾಂದ್ ಪಾಶ, ಪ್ರೇಮಲೀಲಾ ವೆಂಕಟೇಶ್, ನಗರಸಭಾ ಸದಸ್ಯೆ ಅಣ್ಣಮ್ಮ, ಚಂದ್ರಶೇಖರ್, ಸೇರಿದಂತೆ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.
ಸಿಕೆಬಿ-2 ನಗರ ಹೊರವಲಯದ ಮಹಿಳಾ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಮಾಜ ಸೇವೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿವಿಧ ವೃತ್ತಿಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.