ವಿದ್ಯೆಯೊಂದಿಗೆ ವಿನಯ ಇದ್ದರೆ ಜೀವನದಲ್ಲಿ ಮುಂದೆಬರಲು ಸಾಧ್ಯ

| Published : Nov 28 2024, 12:34 AM IST

ಸಾರಾಂಶ

ಇಂದಿನ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಹೆಚ್ಚಾಗಿ ನೀಡಿದರೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಲು ಸಾಧ್ಯ ಎಂದು ಕೆ.ಪಿ.ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಬಿ.ಎಸ್ ಸೋಮಶೇಖರ್ ತಿಳಿಸಿದರು. ಮೊಬೈಲ್‌ಗಳನ್ನು ಬಿಟ್ಟು ಕ್ರೀಡೆಯಲ್ಲಿ ಭಾಗವಹಿಸಿ ಈ ಕಾಲೇಜನ್ನು ಹೆಚ್ಚಿನ ಸ್ಥಾನಕ್ಕೆ ಬೆಳೆಸಿ. ಇದಕ್ಕೆ ಪೋಷಕರು ಸಹಕಾರ ನೀಡಬೇಕು. ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಂದಿನ ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಹೆಚ್ಚಾಗಿ ನೀಡಿದರೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಲು ಸಾಧ್ಯ ಎಂದು ಕೆ.ಪಿ.ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಾಧ್ಯಕ್ಷ ಬಿ.ಎಸ್ ಸೋಮಶೇಖರ್ ತಿಳಿಸಿದರು.

ಹಳೇಬೀಡಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಸರ್ಕಾರಿ ಕಾಲೇಜುಗಳಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳೇ ಹೆಚ್ಚು ಕಂಡುಬಂದಿದ್ದಾರೆ. ಮಕ್ಕಳಲ್ಲಿ ಓದುವ ಹವ್ಯಾಸದ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ನೀಡಬೇಕು. ಆಗ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿನುತ ಮಾತನಾಡುತ್ತಾ, ಸರ್ಕಾರಿ ಕಾಲೇಜಿಗೆ ನಾನು ಬಂದು ಎರಡು ವರ್ಷಗಳಾಗಿದೆ. ನನ್ನ ಅವಧಿಯಲ್ಲಿ ಬಂದ ನಂತರ ಈ ಕಾಲೇಜಿಗೆ ಒಳ್ಳೆಯ ಫಲಿತಾಂಶ ಉನ್ನತ ಮಟ್ಟಕ್ಕೆ ಬೆಳೆಯುತ್ತಾ ಬರುತ್ತಿದೆ. ಇದಕ್ಕೆ ಉಪನ್ಯಾಸ ವರ್ಗದವರು, ಅಭಿವೃದ್ಧಿ ಸಮಿತಿಯ ಸಹಕಾರ ಹೆಚ್ಚಾಗಿ ಸಿಗುತ್ತಿದೆ. ಅದೇ ರೀತಿ ಮಕ್ಕಳು ಓದುವ ಹವ್ಯಾಸ ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಮೊಬೈಲ್‌ಗಳನ್ನು ಬಿಟ್ಟು ಕ್ರೀಡೆಯಲ್ಲಿ ಭಾಗವಹಿಸಿ ಈ ಕಾಲೇಜನ್ನು ಹೆಚ್ಚಿನ ಸ್ಥಾನಕ್ಕೆ ಬೆಳೆಸಿ. ಇದಕ್ಕೆ ಪೋಷಕರು ಸಹಕಾರ ನೀಡಬೇಕು. ಮಕ್ಕಳ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಎಂದು ತಿಳಿಸಿದರು.

ಕನ್ನಡ ಉಪನ್ಯಾಸಕ ರಾಘವೇಂದ್ರ ಮಾತನಾಡುತ್ತಾ, ನಮ್ಮ ಕಾಲೇಜಿನಲ್ಲಿ ಈ ಬಾರಿ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ಸಂತೋಷದ ವಿಚಾರ. ತಾಲೂಕು ಜಿಲ್ಲಾ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಕಾಲೇಜಿನ ಅಭಿವೃದ್ಧಿ ಸದಸ್ಯರಾದ ಎಚ್.ಪರಮೇಶ್, ಈಶ್ವರ್, ಉಪನ್ಯಾಸಕರಾದ ಬಸವರಾಜ್, ಲೋಕೇಶ್, ಮಹೇಶ್, ನಾಗರಾಜ್, ವೆಂಕಟೇಶ್, ರಮೇಶ್, ರಾಘವೇಂದ್ರ, ಗೋಮತಿ, ಪಾರ್ವತಮ್ಮ, ಕವಿತ, ಮನು, ಪೋಷಕ ವರ್ಗದವರು ಹಾಜರಿದ್ದರು.