ಸಾರಾಂಶ
ಗಂಗಾನದಿ ಹಾಗೂ ಇನ್ನಿತರೆ ಪುಣ್ಯಕ್ಷೇತ್ರದಲ್ಲಿ ಸ್ನಾನಕ್ಕೆ ಹೋಗಿ ಸೋಪು, ಶಾಂಪು ಉಪಯೋಗಿಸಿ ಪ್ಲಾಸ್ಟಿಕ್, ಬಟ್ಟೆಗಳನ್ನು ಎಸೆದು ಮಲಿನ ಮಾಡಿ ಬಂದರೆ ಪಾಪ ಬರುತ್ತದೆಯೇ ಹೊರತು ಪುಣ್ಯ ಸಂಪಾದನೆ ಎಲ್ಲಿಂದ ಬರುತ್ತದೆ ಎಂದು ನಾಗಮಂಗಲದ ಯೋಗ ಹಾಗೂ ಆಯುರ್ವೇದ ಗುರು ಲಕ್ಷ್ಮಣ್ ಜೀ ಪ್ರಶ್ನಿಸಿದರು. ಆಲೋಚನೆ, ಭಾವನೆಗಳು ಇನ್ನೊಬ್ಬರಿಗೆ ನೋವು ಕೊಡದೆ ದೋಷಗಳನ್ನು ಹುಡುಕುವುದನ್ನು ಬಿಟ್ಟು ಬದುಕಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ಕಾಲಘಟ್ಟದ ದಿನಗಳ ಬಗ್ಗೆ ಪೂರ್ವಜರು ತಿಳಿಸಿದ್ದಾರೆ ತತ್ಸಂಗದ ಸಂಬಂಧವನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಗಂಗಾನದಿ ಹಾಗೂ ಇನ್ನಿತರೆ ಪುಣ್ಯಕ್ಷೇತ್ರದಲ್ಲಿ ಸ್ನಾನಕ್ಕೆ ಹೋಗಿ ಸೋಪು, ಶಾಂಪು ಉಪಯೋಗಿಸಿ ಪ್ಲಾಸ್ಟಿಕ್, ಬಟ್ಟೆಗಳನ್ನು ಎಸೆದು ಮಲಿನ ಮಾಡಿ ಬಂದರೆ ಪಾಪ ಬರುತ್ತದೆಯೇ ಹೊರತು ಪುಣ್ಯ ಸಂಪಾದನೆ ಎಲ್ಲಿಂದ ಬರುತ್ತದೆ ಎಂದು ನಾಗಮಂಗಲದ ಯೋಗ ಹಾಗೂ ಆಯುರ್ವೇದ ಗುರು ಲಕ್ಷ್ಮಣ್ ಜೀ ಪ್ರಶ್ನಿಸಿದರು.ಅವರು ಪಟ್ಟಣದ ರಾಘವೇಂದ್ರ ಮಠದ ಶ್ರೀ ವಿಶ್ವೇಶ್ವರ ಪೇಜಾವರ ಸ್ವಾಮೀಜಿ ಭವನದಲ್ಲಿ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಸ್ವಚ್ಛ ಮನಸ್ಸು, ಪರಿಸರ, ವ್ಯವಹಾರ ಇದ್ದಲ್ಲಿ ಬದುಕಿನ ಸಾರ್ಥಕ ಅರ್ಥಪೂರ್ಣವಾಗಿರುತ್ತದೆ. ಆಲೋಚನೆ, ಭಾವನೆಗಳು ಇನ್ನೊಬ್ಬರಿಗೆ ನೋವು ಕೊಡದೆ ದೋಷಗಳನ್ನು ಹುಡುಕುವುದನ್ನು ಬಿಟ್ಟು ಬದುಕಿನಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಮುಂದಿನ ಕಾಲಘಟ್ಟದ ದಿನಗಳ ಬಗ್ಗೆ ಪೂರ್ವಜರು ತಿಳಿಸಿದ್ದಾರೆ ತತ್ಸಂಗದ ಸಂಬಂಧವನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದರು.ಯೋಗ ಶಾಲೆಯ ಅಶೋಕ್ ಮಾತನಾಡಿ ಶಾಲೆಯು ವರ್ಷವಿಡಿ ನಿರಂತರವಾಗಿ ನಡೆದು ಸ್ಥಳದ ಶಕ್ತಿಯಿಂದ ಯೋಗಪಟುಗಳು ಹಲವಾರು ಕಾಯಿಲೆಗಳಿಂದ ಚೇತರಿಸಿಕೊಂಡು ಲವಲವಿಕೆಯ ಜೀವನ, ಅನುಕೂಲವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಭಾಕರ್, ನಂಜೇಗೌಡ, ಶ್ರೀಮಠದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಪೋಸ್ಟ್ ನಾಗೇಶ್ ಅತಿಥಿಗಳಾಗಿ ಮಾತನಾಡಿದರು. ಶಾಲೆಯ ಹಿರಿಯ ಯೋಗ ಪಟುಗಳಾದ ಅನಿತಾ, ವಿಜಯಲಕ್ಷ್ಮೀ ಪುಟ್ಟಣ್ಣ, ವೀಣಾ ಅವರನ್ನು ಸನ್ಮಾನಿಸಲಾಯಿತು. ಅನಿತಾ ಸ್ವಾಗತ, ಶಿವರಾಂ ನಿರೂಪಣೆ, ರಮೇಶ್ ವಂದಿಸಿದರು.
======ಫೋಟೋ:12ಎಚ್ಎಸ್ಎನ್6
ಚನ್ನರಾಯಪಟ್ಟಣದ ರಾಘವೇಂದ್ರ ಮಠದಲ್ಲಿ ಶ್ರೀ ರಾಘವೇಂದ್ರ ಯೋಗ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲೆಯ ಹಿರಿಯ ಯೋಗ ಪಟುಗಳಾದ ಅನಿತಾ, ವಿಜಯಲಕ್ಷ್ಮೀ ಪುಟ್ಟಣ್ಣ, ವೀಣಾ ಅವರನ್ನು ಸನ್ಮಾನಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))