ಶ್ರಮಪಟ್ಟರೆ ಬಂಗಾರದಂತಹ ಜೀವನ ನಿಮ್ಮದಾಗಲಿದೆ: ಡಾ.ಮಹಾಂತೇಶ

| Published : Nov 10 2025, 03:15 AM IST

ಶ್ರಮಪಟ್ಟರೆ ಬಂಗಾರದಂತಹ ಜೀವನ ನಿಮ್ಮದಾಗಲಿದೆ: ಡಾ.ಮಹಾಂತೇಶ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಎನ್ನುವ ನಾಣ್ಣುಡಿ ಪ್ರಕಾರ ನಿಜವಾಗಲೂ ಶ್ರಮಪಟ್ಟರೆ ಅದು ಬಂಗಾರದಂತಹ ಜೀವನ ಆಗುತ್ತದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕಲಾದಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಮಹಾಂತೇಶ ಎಚ್. ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್., ರೆಡ್ ಕ್ರಾಸ್‌, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಲ್ಲಯ್ಯ ಮಾತನಾಡಿ, ಕರುನಾಡಿನ ಚರಿತ್ರೆ ಹಾಗೂ ಕನ್ನಡ ಭಾಷೆ ಬೆಳೆದು ಬಂದ ಹಾದಿ ವಿವರಿಸಿದರು. ವಿಶೇಷ ಸಾಧನೆ ಮೆರೆದ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶಿವಾನಂದ ಬಗಲಿ, ಕಾಲೇಜು ಸಿಬ್ಬಂದಿಯಾದ ಮಳೆಪ್ಪ ಗಾಣಗೇರ, ಸಿದ್ದರಾಮಪ್ಪ ಗಾಣಗೇರ, ಗಾದಿಲಿಂಗಪ್ಪ, ಮೂರ್ತಿ ಎಸ್. ಸಂತೋಷ ಕುಮಾರ, ಮೂರ್ತಿ ಆರ್.ಎಂ., ಶಿವಕುಮಾರ ನಂದಿಕೊಲಮಠ, ಪ್ರತಿಕ್ಷಾ ರುದ್ರಾಕ್ಷಿ, ಮಲ್ಲಿಕಾರ್ಜುನ ಅಂಗಡಿ, ಹನುಮಂತ ನಿಂಗನಗೌಡರ ಇದ್ದರು. ಗಾದಿಲಿಂಗಪ್ಪ ನಿರೂಪಿಸಿದರು. ತಿಮ್ಮಾರೆಡ್ಡಿ ವಂದಿಸಿದರು.