ಪ್ರಸಾದದಿಂದ ಆರೋಗ್ಯ ಪ್ರಯೋಜನವಿದೆ: ಡಾ.ವಿಶ್ವಪ್ರಭುದೇವ

| Published : Nov 10 2025, 03:15 AM IST

ಪ್ರಸಾದದಿಂದ ಆರೋಗ್ಯ ಪ್ರಯೋಜನವಿದೆ: ಡಾ.ವಿಶ್ವಪ್ರಭುದೇವ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂದಗಿ: ಪ್ರಸಾದ ಸೇವೆ ಎಂದರೆ ದೇವರಿಗೆ ನೈವೇದ್ಯ ಅರ್ಪಿಸಿ, ನಂತರ ಭಕ್ತರಿಗೆ ಆಶೀರ್ವಾದದ ರೂಪದಲ್ಲಿ ಹಂಚುವುದು. ಇದು ಹಿಂದೂ ಧಾರ್ಮಿಕ ಪದ್ಧತಿಯಾಗಿದ್ದು, ಭಕ್ತರು ದೇವರಿಗೆ ಸಮರ್ಪಿಸಿದ ಆಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಇದು ಶ್ರೇಷ್ಠ ಸೇವೆ ಎಂದು ಪಟ್ಟಣದ ಸಾರಂಗಮಠದ ಉತ್ತರಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ನೀಲಗಂಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಸಾದ ಸೇವನೆಯಿಂದ ಮನಸ್ಸಿನಲ್ಲಿ ಧನಾತ್ಮಕ ಭಾವನೆ ಮೂಡುತ್ತವೆ. ಪ್ರಸಾದವು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಏಕೆಂದರೆ ಅದರಲ್ಲಿ ವಿವಿಧ ಪೋಷಕಾಂಶಗಳು ಇರುತ್ತವೆ. ಇದು ನಿರಂತರವಾಗಿ ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಡಾ.ಎಂ.ಎಂ.ಪಡಶೆಟ್ಟಿ, ದೇವಸ್ಥಾನದ ಧರ್ಮದರ್ಶಿ ಸುನೀಲಗೌಡ ದೇವರಮನಿ, ಮಹಾಂತೇಶ್ ಪಟ್ಟಣಶೆಟ್ಟಿ, ಅಶೋಕ ವಾರದ, ಜಿ.ಕೆ.ಪಡಗಾನೂರ, ಸಿದ್ದು ಪಾಟೀಲ, ಬಸವರಾಜ ತಾಳಿಕೋಟಿ, ಶಿವಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಪಟ್ಟಣಶೆಟ್ಟಿ, ಚಂದ್ರಕಾಂತ್ ಬೊಮ್ಮಣ್ಣಿ, ಚನ್ನಪ್ಪ ಗೋಣಿ, ಕುಮಾರ್ ಪಟ್ಟಣಶೆಟ್ಟಿ, ರವಿ ಗವಸಾನಿ, ಅನೀಲ ಪಟ್ಟಣಶೆಟ್ಟಿ, ಮುತ್ತು ಪಟ್ಟಣಶೆಟ್ಟಿ, ಡಾ.ಶರಣಬಸವ ಜೋಗೂರ, ರಾಜು ಪತ್ತಾರ, ಸಂತೋಷ ಪಟ್ಟಣಶೆಟ್ಟಿ, ಸುಧೀರ ದೇವರಮನಿ, ರುದ್ರು ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಕುಮಾರ ಕಿಣಗಿ, ಪ್ರಶಾಂತ ಪಟ್ಟಣಶೆಟ್ಟಿ, ಸಿದ್ದಲಿಂಗ ಕಿಣಗಿ, ಬಾಬು ರೇಬಿನಾಳ, ಪ್ರಕಾಶ ಗುಣಾರಿ, ಬಸಲಿಂಗಪ್ಪ ಕಿಣಗಿ, ನಿಂಗಪ್ಪ ಮುಂಡೇವಾಡಗಿ, ಶ್ರೀಧರ್ ಬೊಮ್ಮಣ್ಣಿ, ಬಸವರಾಜ್ ಜೋಗೂರ, ವಿಶ್ವನಾಥ ಭೈರಿ, ಆನಂದ ಪಟ್ಟಣಶೆಟ್ಟಿ, ಬಾಬು ಜಂಜಾ, ಪ್ರಶಾಂತ ಪತ್ತಾರ್, ರವಿ ಕಮತಗಿ, ಶಿವು ಕೆಂಭಾವಿ, ಗೊಲ್ಲಾಳ ಅಗಸರ, ಈರಣ್ಣ ಕೆಂಭಾವಿ ಇತರರು ಇದ್ದರು.