ಅಕ್ರಮವಾಗಿ ಮರ ಸಾಗಿಸುತ್ತಿದ್ದ ವಾಹನಗಳ ವಶ

| Published : Aug 12 2024, 01:07 AM IST

ಅಕ್ರಮವಾಗಿ ಮರ ಸಾಗಿಸುತ್ತಿದ್ದ ವಾಹನಗಳ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಿಲ್ವರ್‌ ಮರಗಳನ್ನು ತುಂಬಿದ್ದ ಮಹಿಂದ್ರಾ ಬೊಲೆರೋ ಪಿಕ್‌ಅಪ್ ವಾಹನವನ್ನು ವಶ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇದೇ ದಿನ ರಾತ್ರಿ ಗಸ್ತು ಪಹರೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಡಗರವಳ್ಳಿ ಸಮೀಪ ಅಕ್ರಮವಾಗಿ ಕಾಡು ಜಾತಿ ಮರಗಳನ್ನು ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆಹಚ್ಚಿ ಸ್ವತ್ತು ಸಮೇತ ಕ್ಯಾಂಟರ್‌ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಅಕ್ರಮವಾಗಿ ಮರ ಸಾಗಿಸುತ್ತಿದ್ದ ವಾಹನಗಳನ್ನು ಹಿಡಿದು ಪ್ರಕರಣ ದಾಖಲಿಸಿದ್ದಾರೆ.

ಶುಕ್ರವಾರ ತಾಲೂಕಿನ ಮೂರ್ಕಣ್ಣು ಗುಡ್ಡ ಸೆಕ್ಷನ್ -೪ ಅಚ್ಚನಹಳ್ಳಿ ಸ.ನಂ ೯೨ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಿಲ್ವರ್‌ ಮರಗಳನ್ನು ತುಂಬಿದ್ದ ಮಹಿಂದ್ರಾ ಬೊಲೆರೋ ಪಿಕ್‌ಅಪ್ ವಾಹನವನ್ನು ವಶ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇದೇ ದಿನ ರಾತ್ರಿ ಗಸ್ತು ಪಹರೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕಡಗರವಳ್ಳಿ ಸಮೀಪ ಅಕ್ರಮವಾಗಿ ಕಾಡು ಜಾತಿ ಮರಗಳನ್ನು ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆಹಚ್ಚಿ ಸ್ವತ್ತು ಸಮೇತ ಕ್ಯಾಂಟರ್‌ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ಮೋಹನ್, ಮಹಾದೇವ್, ದಿನೇಶ್, ಮಂಜುನಾಥ್, ಅರಣ್ಯ ವೀಕ್ಷಕರುಗಳಾದ ಯೋಗೇಶ್, ಹನುಮಂತು, ಉಮೇಶ್, ಅರುಣ್ ಮತ್ತಿತರರು ಭಾಗಿಯಾಗಿದ್ದರು.