ಚಾ.ನಗರದಲ್ಲಿ ಐರೆಪ್ ನೂತನ ಶಾಖೆ ಉದ್ಘಾಟನೆ

| Published : Sep 13 2024, 01:32 AM IST

ಸಾರಾಂಶ

ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು ಎದುರು ಐರೆಪ್ ಕ್ರೆಡಿಟ್ ಕ್ಯಾಪಿಟಲ್ ಸಂಸ್ಥೆಯ ನೂತನ ಶಾಖೆಯನ್ನು ಭಾರತೀಯ ಸಹಕಾರ ಬ್ಯಾಂಕ್ ಕಾರ್ಯಪರ ನಿರ್ದೇಶಕ ಸುಬ್ಬು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜು ಎದುರು ಐರೆಪ್ ಕ್ರೆಡಿಟ್ ಕ್ಯಾಪಿಟಲ್ ಸಂಸ್ಥೆಯ ನೂತನ ಶಾಖೆಯನ್ನು ಭಾರತೀಯ ಸಹಕಾರ ಬ್ಯಾಂಕ್ ಕಾರ್ಯಪರ ನಿರ್ದೇಶಕ ಸುಬ್ಬು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಯಾವುದೇ ಹಣಕಾಸು ಸಂಸ್ಥೆಯ ಉದ್ದೇಶ ಜನರಿಗೆ ತಲುಪುವಂತಾಗಿದೆ. ಇದು ರಾಜ್ಯದ 5ನೇ ಶಾಖೆಯಾಗಿದ್ದು, ಈ ಸಂಸ್ಥೆಯು ಉತ್ತುಂಗಕ್ಕೆ ಬೆಳೆಯಲಿ ಎಂದು ಆಶಿಸಿದರು.ಐರೆಪ್ ಡೆಪ್ಯೂಟಿ ಸಿಇಒ ಸಂಜೀವ್ ವರ್ಮಾ ಮಾತನಾಡಿದರು. ಜನವರಿ 2018ರಲ್ಲಿ ಐರೆಪ್ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ 6 ಶಾಖಾ ಕಚೇರಿಗಳೊಂದಿಗೆ ಚಿಲ್ಲರೆ ಸಾಲ ನೀಡುವ ಕಾರ್ಯಾಚರಣೆಗಳನ್ನು ಪ್ರಾರಂಭಿಸುತ್ತದೆ. ಏಪ್ರಿಲ್ 2018 ಹೈದರಾಬಾದ್‌ನಲ್ಲಿ ಹಬ್ ಆಫೀಸ್ ಉದ್ಘಾಟನೆ. ನಂತರದಲ್ಲಿ ನಮ್ಮ ಸಂಸ್ಥೆಯ 5ನೇ ಶಾಖೆಯನ್ನು ನಗರದಲ್ಲಿ ಪ್ರಾರಂಭಿಸಲಾಗಿದೆ. ಇದರ ಉದ್ದೇಶ ಜನರಿಗೆ ಆರ್ಥಿಕ ಸಾಲ ಸೌಲಭ್ಯ ಒದಗಿಸುವುದಾಗಿದೆ. ರಾಜ್ಯದಲ್ಲಿ 25 ಶಾಖೆ ಆರಂಭವಾಗಲಿದೆ. ಜನರು ಇದರ ಸದುಪಯೋಗ ಪಡಿಸಿಕೊಂಡು ಶಾಖೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮಹಿಳಾ ಸಬಲೀಕರಣದಲ್ಲಿ ಗಮನಹರಿಸುವುದರೊಂದಿಗೆ ಆರ್ಥಿಕ ಸೇರ್ಪಡೆ, ಸಾಮಾಜಿಕ ಸ್ಪಂದಿಸುವಿಕೆ ಮತ್ತು ಗ್ರಾಹಕರ ಸಂತೋಷ ಕಡೆ ಕರೆದೊಯ್ಯುವುದು ಸಂಸ್ಥೆ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಐರೆಪ್ ರಾಜ್ಯ ಮುಖ್ಯಸ್ಥ ಸಚಿನೇಂದ್ರ, ಶಾಖಾ ವ್ಯವಸ್ಥಾಪಕ ಎಚ್.ಬಿ. ಮಹೇಂದ್ರ, ಕ್ರೆಡಿಟ್ ವ್ಯವಸ್ಥಾಪಕ ಪುನೀತ್ ಇತರರು ಹಾಜರಿದ್ದರು.