ಮಣಿಪಾಲ: ಇಲ್ಲಿನ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ವತಿಯಿಂದ ಇಲ್ಲಿ ಆರ್‌ಎಸ್‌ಬಿ ಸಭಾ ಭವನದ ಬಳಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಾಜಿ ಯೋಧ, ನಿವೃತ್ತ ಐಎಎಸ್ ಅಧಿಕಾರಿ ಬಿ. ಸದಾಶಿವ ಪ್ರಭು ಎಳ್ಳಾರೆ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಸಂಘದ ಅಧ್ಯಕ್ಷ ಶ್ರೀ ಉಪೇಂದ್ರ ನಾಯಕ್ ಅರ್ಬಿ, ಕಾರ್ಯದರ್ಶಿ ಸುಮಿತ್ರಾ ಎಚ್. ನಾಯಕ್, ಕೋಶಾಧಿಕಾರಿ ಶ್ರೀ ವಿಠಲ ನಾಯಕ್, ಜೊತೆ ಕಾರ್ಯದರ್ಶಿ ರಾಮದಾಸ್ ಪ್ರಭು, ಪ್ರಮುಖರಾದ ಸೂರಜ್ ನಾಯಕ್, ಎಸ್. ಗೋಪಾಲಕೃಷ್ಣ ನಾಯಕ್, ಜಯರಾಮ ಪ್ರಭು, ಆಡಳಿತ ಮಂಡಳಿಯ ಸದಸ್ಯರು, ಆರ್ ಎಸ್‌ಬಿ ಮಹಿಳಾ ವೇದಿಕೆ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.