ಹತ್ತು ವರ್ಷಗಳ ಮೋದಿಜಿ ಆಡಳಿತದಲ್ಲಿ ಭಾರತ ಭವ್ಯವಾಗಿದೆ-ಮಾಜಿ ಶಾಸಕ ಶಿವರಾಜ ಸಜ್ಜನರ

| Published : Mar 27 2024, 01:07 AM IST

ಹತ್ತು ವರ್ಷಗಳ ಮೋದಿಜಿ ಆಡಳಿತದಲ್ಲಿ ಭಾರತ ಭವ್ಯವಾಗಿದೆ-ಮಾಜಿ ಶಾಸಕ ಶಿವರಾಜ ಸಜ್ಜನರ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ವರ್ಷಗಳ ನರೇಂದ್ರ ಮೋದಿಜಿ ಆಡಳಿತದಲ್ಲಿ ಭಾರತ ಭವ್ಯವಾಗಿದೆಯಲ್ಲದೆ, ಇಡೀ ಜಗತ್ತು ಭಾರತದ ಮಾತು ಕೇಳುವಂತಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ಹಾನಗಲ್ಲ: ಹತ್ತು ವರ್ಷಗಳ ನರೇಂದ್ರ ಮೋದಿಜಿ ಆಡಳಿತದಲ್ಲಿ ಭಾರತ ಭವ್ಯವಾಗಿದೆಯಲ್ಲದೆ, ಇಡೀ ಜಗತ್ತು ಭಾರತದ ಮಾತು ಕೇಳುವಂತಾಗಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಭಾರತ ಹೇಳಿದಂತೆ ಜಗತ್ತು ಕೇಳುತ್ತಿದೆ. ನಮ್ಮ ದೇಶದ ಸುಭದ್ರತೆ ಮತ್ತು ಸಮೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು, ಹಾವೇರಿ ಲೋಕಸಭೆ ಕ್ಷೇತ್ರ ಬಿಜೆಪಿ ಭದ್ರಕೋಟೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕೇಂದ್ರದ ಜನಪ್ರಿಯ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಜ್ಜನರ ಸಲಹೆ ನೀಡಿದರು.

ಮಾಜಿ ಸಚಿವ ಮನೋಹರ ತಹಸೀಲ್ದಾರ್ ಮಾತನಾಡಿ, ಭಾರತದ ಭವಿಷ್ಯವನ್ನು ಉಜ್ವಲಗೊಳಿಸಿದ ಪ್ರಧಾನ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವ ಮೂಲಕ ಜಗತ್ತೇ ಅಚ್ಚರಿಪಡುವ ಭಾರತದ ಅಭಿವೃದ್ಧಿಗೆ ಮುಂದಾಗಬೇಕಿದೆ. ಕೇಂದ್ರ ಸರಕಾರದ ಯೋಜನೆಗಳ ಅರಿವನ್ನು ಜನರಿಗೆ ಮುಟ್ಟಿಸುವ ಕಾರ್ಯ ಕಾರ್ಯಕರ್ತರಿಂದ ಆಗಬೇಕು. ಬಿಜೆಪಿಯ ಎಲ್ಲ ಕಾರ್ಯಕರ್ತರು ಈಗ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿರುವುದಲ್ಲದೆ ಬಿಜೆಪಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಎಲ್ಲರೂ ಒಂದಾಗಿ ಬಿಜೆಪಿ ಗೆಲ್ಲಿಸಲು ಕಂಕಣಬದ್ಧರಾಗೋಣ ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಉದಯ ವಿರುಪಣ್ಣನವರ, ರಾಜಣ್ಣ ಸಿಂಧೂರ, ಸಚೀನ್ ರಾಮಣ್ಣನವರ, ದಾನಪ್ಪ ಸಿಂಧೂರ, ಅಣ್ಣಪ್ಪ ಚಾಕಾಪೂರ ಮತ್ತಿತರರು ಇದ್ದರು.

ಬಿಜೆಪಿ ಮುಖಂಡ ಕೆ.ಟಿ. ಕಲ್ಲನಗೌಡರ ಮಾತನಾಡಿ, ದೇಶದ ಹಿತಕ್ಕಾಗಿ ಈಗ ಬಿಜೆಪಿ ಆಡಳಿತ ತೀರ ಅವಶ್ಯವಾಗಿದೆ. ಪ್ರಧಾನ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು ಪ್ರತಿ ಮನೆ ಮನಸ್ಸನ್ನು ತಲುಪಿವೆ. ಎಲ್ಲ ಸಂದರ್ಭಗಳಲ್ಲಿ ದೇಶದ ಏಕತೆ ಅಖಂಡತೆಗೆ ಕಟ್ಟಿನಿಟ್ಟಿನಿಂದ ಕೆಲಸ ಮಾಡುತ್ತಿರುವ ಮೋದಿಜಿಯಿಂದ ಭಾರತ ಇಡೀ ಜಗತ್ತಿನಲ್ಲೇ ಸುಭದ್ರ ಸರಕಾರವಾಗಿದೆ ಎಂದರು.

ನಂತರ ತಾಲೂಕಿನ ಅರಳೇಶ್ವರ, ಡೊಳ್ಳೇಶ್ವರ, ಶ್ಯಾಡಗುಪ್ಪಿ, ಗೊಂದಿ, ಹೊಂಕಣ, ಕಿರವಾಡಿ, ತಿಳವಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದವು.

ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಹುರುಪು ತುಂಬುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಭಾನುವಾರ ತಾಲೂಕಿನ ಮುಳಥಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗಳ ಆಯೋಜನೆಗೆ ಚಾಲನೆ ನೀಡಲಾಗಿದೆ.

ಭಾನುವಾರ ತಾಲೂಕಿನ ಮುಳಥಳ್ಳಿ, ಉಪ್ಪಣಶಿ, ಹೇರೂರ, ಹಿರೇಹುಲ್ಲಾಳ, ಮಲಗುಂದ, ಕಲ್ಲಾಪೂರ, ಹಾವಣಗಿ, ಬಾಳಂಬೀಡ, ಆಡೂರ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆದಿವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ ತಿಳಿಸಿದ್ದಾರೆ.