ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಗಣಿತ ಕ್ಷೇತ್ರಕ್ಕೆ ರಾಮಾನುಜನ್,ಆರ್ಯಭಟ,ಬ್ರಹ್ಮಗುಪ್ತ, ಭಾಸ್ಕರಾಚಾರ್ಯರಂತಹ ಗಣಿತಜ್ಞರನ್ನು ಭಾರತ ಕೊಡುಗೆಯಾಗಿ ನೀಡಿದೆ ಎಂದು ಬೆಂಗಳೂರು ನಗರ ವಿವಿ ನಿವೃತ್ತ ಗಣಿತ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಮಹದೇವನಾಯಕ್ ತಿಳಿಸಿದರು.ಬೆಂಗಳೂರು ಉತ್ತರ ವಿವಿಯ ಮಂಗಸಂದ್ರ ಸ್ನಾತಕೋತ್ತರ ಕೇಂದ್ರದ ಗಣಿತಶಾಸ್ತ್ರ ವಿಭಾಗದಿಂದ ನಡೆದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜಗತ್ತಿಗೆ ‘ಸೊನ್ನೆ’ ಕೊಡುಗೆ
ಜಗತ್ತಿನ ಗಣಿತ ಕ್ಷೇತ್ರಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ನೀಡಿದ ಭಾರತ ಮುಂಚೂಣಿಯಲ್ಲಿದೆ ಎಂದ ಅವರು, ಭಾರತದವರಾದ ರಾಮಾನುಜನ್ ಅವರ ಹುಟ್ಟುಹಬ್ಬವನ್ನು ಭಾರತ ಮಾತ್ರವಲ್ಲ ಇಂದು ಇಡೀ ವಿಶ್ವವೇ ಆಚರಿಸುತ್ತಿದೆ, ಕೇಂಬ್ರಿಡ್ಸ್ ವಿವಿಯಲ್ಲಿ ಈ ದಿನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ ಎಂದರು.ರಾಮಾನುಜನ್ ಅವರ ಜೀವನ ಚರಿತ್ರೆ, ಅವರ ಬದುಕಿನ ಕುರಿತು ವಿದ್ಯಾರ್ಥಿಗಳಿಗೆ ‘ರಾಮಾನುಜನ್ ಪ್ರಸೆಂಟೇಷನ್ ಮೂಲಕ ತಿಳಿಸಿಕೊಟ್ಟ ಅವರು, ಭಾರತ ಗಣಿತ ಕ್ಷೇತ್ರದಲ್ಲಿನ ಈ ಸಾಧನೆ ಇಂದು ವಿಶ್ವದಲ್ಲೇ ಭಾರತವನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸಿದೆ ಎಂದರು.ಗಣಿತ ಸ್ಫೂತಿ ಇದ್ದಂತೆಗಣಿತವನ್ನು ಸರಳಗೊಳಿಸಿ ವಿಶ್ವಖ್ಯಾತಿಯಾದ ‘ರಾಮಾನುಜನ್ಸ್ ಕ್ರೇಜಿ ಕ್ಯಾಲುಕೇಷನ್ಸ್ ಅಂಡ್ ಬೆಸೆಲ್ ಪ್ರಾಬ್ಲಂ’ ವಿಷಯದ ಕುರಿತು ಮಾಹಿತಿ ನೀಡಿದ ಅವರು, ಗಣಿತವನ್ನು ನೀವು ಸ್ಫೂರ್ತಿಯಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಗಣಿತ ವಿಶ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ ಎಂದ ಅವರು, ಗಣಿತವನ್ನು ಪ್ರೀತಿಸಿ, ಗೌರವಿಸಿ, ನಾನು ಒಬ್ಬ ರಾಮಾನುಜನ್ ಆಗಬೇಕು ಎಂಬ ಸ್ಪೂರ್ತಿಯಿಂದ ಮುನ್ನಡೆಯಿರಿ ಎಂದು ಪಿಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಣಿತ ಶಿಕ್ಷಣ ಪಡೆದವರಿಗೆ ಇಂದು ಅತಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದೆ ಎಂದ ಅವರು ಕಂಪನಿಗಳಲ್ಲಿ ಮಾತ್ರವಲ್ಲ, ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಲ್ಲೂ ಎಂಎಸ್ಸಿ ಗಣಿತ ಮಾಡಿದವರಿಗೆ ಬೇಡಿಕೆ ಇದೆ. ಗಣಿತ ಐಸೋಲೇಟೇಡ್ ವಿಷಯವಲ್ಲ, ಇದು ವಿಜ್ಞಾನ,ಅರ್ಥಶಾಸ್ತ್ರ ಸೇರಿದಂತೆ ಎಲ್ಲಾ ವಿಷಯಗಳೊಂದಿಗೆ ಸಂಬಂಧ ಹೊಂದಿದೆ ಎಂದರು.ಗಣಿತ ಸುಲಭವಾಗಿಸಿಕೊಳ್ಳಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ಡಿ.ಕುಮುದಾ, ಶೇ.೫೬ ರಷ್ಟು ಯುವಕರಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ, ಕೌಶಲ್ಯ ನೀಡುವುದು ಬಹು ದೊಡ್ಡ ಸವಾಲಾಗಿದ್ದು, ಅಂತಹ ಹೊಣೆಯನ್ನು ವಿಶ್ವವಿದ್ಯಾಲಯಗಳು ನಿರ್ವಹಿಸಲಿವೆ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬದುಕು ಕಲಿಸುವ ಕೆಲಸವೂ ಆಗಬೇಕಿದೆ ಗಣಿತ ನಿಮ್ಮ ಬದುಕಿಗೆ ದಾರಿದೀಪವಾಗಲಿ ಎಂದು ಈ ವಿಶೇಷ ಉಪನ್ಯಾಸ ವಿವಿ ಏರ್ಪಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.ಬಹುಮಾನ ವಿತರಣೆಗಣಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗಣಿತ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದರು.ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರ ವಿಭಾಗದ ಸಂಯೋಜಕ ಜೆ.ಎಂ.ಶಿವರಾಜ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿ.ಎಸ್.ಶ್ರೀಲತಾ, ದಾಕ್ಷಾಯಿಣಿ, ನಾಗಾರ್ಜುನ್ ಇದ್ದರು. ಪೂಜಶ್ರೀ ತಂಡ ಪ್ರಾರ್ಥಿಸಿ, ವಿದ್ಯಾರ್ಥಿ ಸಾದಿಕ್‌ಬಾಬಾ ನಿರೂಪಿಸಿ, ಉಪನ್ಯಾಸಕ ನಾಗಾರ್ಜುನ್ ವಂದಿಸಿದರು.