ಪಂಚ ಗ್ಯಾರಂಟಿಗಳಿಂದ ಇಂದಿರಾ ಕನಸು ನನಸು: ಎಸ್‌.ಜಿ. ನಂಜಯ್ಯನಮಠ

| Published : Jan 25 2024, 02:05 AM IST

ಪಂಚ ಗ್ಯಾರಂಟಿಗಳಿಂದ ಇಂದಿರಾ ಕನಸು ನನಸು: ಎಸ್‌.ಜಿ. ನಂಜಯ್ಯನಮಠ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯಾಗಿಸಿದೆಯಾ? ೫ ಗ್ಯಾರಂಟಿಗಳನ್ನು ನೀಡಿ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿ ಇಂದಿರಾ ಗಾಂಧಿಯವರ ಕನಸು ನನಸು ಮಾಡುವಲ್ಲಿ ಸಿಎಂ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು. ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ದೊಡ್ಡ ಉದ್ಯಮಿಗಳ ₹ ೧೨ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೇವಲ ₹ ೮೦ ಸಾವಿರ ಕೋಟಿ ಹಂಚಿಕೆ ಮಾಡಿದ್ದರಿಂದ ರಾಜ್ಯ ಹಾಳಾಗುತ್ತದೆಯಾ? ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯಾಗಿಸಿದೆಯಾ? ೫ ಗ್ಯಾರಂಟಿಗಳನ್ನು ನೀಡಿ ಜನಸಾಮಾನ್ಯರ ವಿಶ್ವಾಸಕ್ಕೆ ಪಾತ್ರವಾಗಿ ಇಂದಿರಾ ಗಾಂಧಿಯವರ ಕನಸು ನನಸು ಮಾಡುವಲ್ಲಿ ಸಿಎಂ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.

ಬನಹಟ್ಟಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ದೊಡ್ಡ ಉದ್ಯಮಿಗಳ ₹ ೧೨ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೇವಲ ₹ ೮೦ ಸಾವಿರ ಕೋಟಿ ಹಂಚಿಕೆ ಮಾಡಿದ್ದರಿಂದ ರಾಜ್ಯ ಹಾಳಾಗುತ್ತದೆಯಾ? ಎಂದು ಪ್ರಶ್ನಿಸಿದರು.

೫ ಗ್ಯಾರಂಟಿಗಳಿಂದ ೩.೫ ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ೧.೨೮ ಕೋಟಿ ಮನೆಗೆ ಗೃಹಲಕ್ಷ್ಮೀ ಯೋಜನೆ ಹಣ ತಲುಪುತ್ತಿದೆ. ೪೫.೩ ಲಕ್ಷ ಕುಟುಂಬಗಳಿಗೆ ಗೃಹ ಜ್ಯೋತಿ, ೫.೬ ಲಕ್ಷ ಯುವಕರಿಗೆ ಯುವ ನಿಧಿ ಯೋಜನೆ ತಲುಪಿದೆ. ಬಡವರ ಬಾಳಿಗೆ ಬಿಜೆಪಿ ಕಂಟಕವಾಗಿದ್ದು, ಅವರಂತೆ ನಾವು ಅಂಬಾನಿ, ಅದಾನಿಯಂಥ ಶ್ರೀಮಂತರಿಗೆ ಕೊಟ್ಟಿಲ್ಲ. ಬಡಜನತೆಯ ಉದ್ಧಾರಕ್ಕೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ ಎಂದರು.

ಜನರ ಭಾವನೆ, ಜಾತಿ ಮಧ್ಯೆ ವಿಷಬೀಜ ಬಿತ್ತುವ ಮೂಲಕ ರಾಜಕಾರಣ ಮಾಡುವ ಬಿಜೆಪಿ ವಿರುದ್ಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನತೆಯ ವಿಶ್ವಾಸ ಗಳಿಸುತ್ತದೆ. ಬಿಜೆಪಿಯಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಗ್ಯಾರಂಟಿಗಳನ್ನು ಬೂತ್ ಮಟ್ಟದಲ್ಲಿ ಇನ್ನುಳಿದ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳ ತಲುಪಿಸಲು ಶ್ರಮಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದರು.

ಭೀಮಶಿ ಮಗದುಮ್, ಹಣಮಂತ ಕೊಣ್ಣೂರ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ನೀಲಕಂಠ ಮುತ್ತೂರ, ಸಂಜು ಜೋತಾವರ, ನಶೀಮ್‌ ಮೊಕಾಶಿ, ರಫೀಕ್ ಬಾರಿಗಡ್ಡಿ, ರಾಹುಲ್ ಕಲಾಲ್‌, ಸಂತೋಷ ಬಗಲಿ, ಬಸವರಾಜ ಕೊಕಟನೂರ, ನೀಲಕಂಠ ಮುತ್ತೂರ, ಹಾರೂನ ಬೇವೂರ, ನೇಮಣ್ಣ ಸಾವಂತನವರ, ಶಂಕರ ಕೆಸರಗೊಪ್ಪ, ಮಹಮದ್ ಭಾಷಾ, ಬುಡಾನ್ ಜಮಾದಾರ, ಪರಸಪ್ಪ ಮಾಸ್ತಿ,ಮಹಿಳಾ ಘಟಕದ ಧುರಿಣೆಯರಾದ ರೇಣುಕಾ ಮಡಿಮನಿ, ವಿದ್ಯಾ ಬಿಳ್ಳೂರ,ಗೀತಾ ಕಾವೇರಿ, ರಿಯಾಜ್ ಪೆಂಡಾರಿ ಸೇರಿದಂತೆ ಅನೇಕರಿದ್ದರು.