ನುಸುಳುಕೋರರಿಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ: ನಾಗರಾಜ ನಾಯಕ ಆರೋಪ

| Published : Apr 28 2024, 01:22 AM IST

ನುಸುಳುಕೋರರಿಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ: ನಾಗರಾಜ ನಾಯಕ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಪರ್ನಲ್ ಲಾ ಪ್ರಕಾರ ಅವರಿಗೆ ಪಿರ್ತಾಜಿತ ಆಸ್ತಿಗೆ ತೆರಿಗೆ ಹಾಕಲು ಬರುವುದಿಲ್ಲ. ಇದು ಕೇವಲ ಹಿಂದುಗಳಿಗೆ ಮಾತ್ರ ಅನ್ವಯವಾಗುತ್ತದೆ. ಹಿಂದೂ ವಿರೋಧಿ ನಿಲುವು ತೆಗೆದುಕೊಳ್ಳುವುದು ಕಾಂಗ್ರೆಸ್ ಜಾಯಮಾನವಾಗಿದೆ ಎಂದು ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಹಿಂದೂಗಳ ಪಿತ್ರಾರ್ಜಿತ ಆಸ್ತಿಗೆ ತೆರಿಗೆ ವಿಧಿಸುವ ಪ್ರಸ್ತಾವನೆ ಮೂಲಕ ಕಾಂಗ್ರೆಸ್ ರೊಹಿಂಗ್ಯಾಗಳಿಗೆ, ನುಸುಳುಕೋರರಿಗೆ ಪರೋಕ್ಷವಾಗಿ ಬೆಂಬಲಿಸಲು ಹವಣಿಸುತ್ತಿದೆ ಎಂದು ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸ್ಥಾಪನೆಯಾಗಿರುವುದು ಒಬ್ಬ ವಿದೇಶಿಗನಿಂದ. ಸ್ಯಾಮ್ ಪಿತ್ರೋಡಾ ಅವರ ಮೂಲಕ ತನ್ನ ಮುಂದಿನ ಉದ್ದೇಶವನ್ನು ಹಿಂದುಗಳಿಗೆ ತಿಳಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಗಾಜ್ವಾ ಎ ಹಿಂದ್ ಆಗುವುದರಲ್ಲಿ ಎರಡು ಮಾತಿಲ್ಲ. ನಮ್ಮ ಪೂರ್ವಜನರು ಬೆವರು ಹರಿಸಿ ಮಾಡಿದ ಆಸ್ತಿ ರಕ್ಷಣೆ ಮಾಡುವ ಉದ್ದೇಶವಿಲ್ಲ. ಆ ಆಸ್ತಿಗೆ ತೆರಿಗೆ ವಿಧಿಸಿ ರೊಹಿಂಗ್ಯಾಗಳಿಗೆ, ನುಸುಳುಕೋರರಿಗೆ ರೇಷನ್ ನೀಡಬೆಕು. ಇಲ್ಲಿಯೇ ಅವರನ್ನು ಉಳಿಸಬೇಕು. ಬಡ ಹಿಂದುಗಳ ಆಸ್ತಿ ಕಬಳಿಕೆ ಮಾಡಿ ಅವರಿಗೆ ಹಂಚಿಕೆ ಮಾಡಬೇಕು ಎನ್ನುವ ದುರುದ್ಧೇಶ ಹೊಂದಿದೆ ಎಂದು ಕಿಡಿಕಾರಿದರು.

ಮುಸ್ಲಿಂ ಪರ್ನಲ್ ಲಾ ಪ್ರಕಾರ ಅವರಿಗೆ ಪಿರ್ತಾಜಿತ ಆಸ್ತಿಗೆ ತೆರಿಗೆ ಹಾಕಲು ಬರುವುದಿಲ್ಲ. ಇದು ಕೇವಲ ಹಿಂದುಗಳಿಗೆ ಮಾತ್ರ ಅನ್ವಯವಾಗುತ್ತದೆ. ಹಿಂದೂ ವಿರೋಧಿ ನಿಲುವು ತೆಗೆದುಕೊಳ್ಳುವುದು ಕಾಂಗ್ರೆಸ್ ಜಾಯಮಾನವಾಗಿದೆ. ಔರಂಗಜೇಬ್ ತನ್ನ ಆಡಳಿದಲ್ಲಿ ಹಿಂದುಗಳಿಗೆ ಜಜಿಯಾ ಎನ್ನುವ ತಲೆದಂಡ ಹಾಕಿದ್ದನು. ಇದು ತೆರಿಗೆ ಸಂಗ್ರಹ ಮಾಡುವ ಉದ್ದೇಶವಾಗಿರಲಿಲ್ಲ. ಹಿಂದುಗಳನ್ನು ಮುಸಲ್ಮಾನರನ್ನಾಗಿ ಬದಲಾಯಿಸುವುದು ಅವನ ಉದ್ದೇಶವಾಗಿತ್ತು. ಕಾಂಗ್ರೆಸ್ ಕೂಡಾ ಇದೇ ಹಾದಿಹಿಡಿದಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಮೊಘಲರ, ಬ್ರಿಟಿಷರ ಕಾಲದಲ್ಲಿ ಹಿಂದುಗಳಿಗೆ ತೊಂದರೆ ಆಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಂಜಲಿ ಅವರಿಗೆ ಇತಿಹಾಸದ ಅರಿವಿಲ್ಲ. ಶಿವಾಜಿ ಮಹಾರಾಜರಿಗೆ ಸಾಕಷ್ಟು ಅನ್ಯಾಯ ಮಾಡಿದ್ದಾನೆ. ಸಾವಿರಾರು ದೇವಸ್ಥಾನಗಳನ್ನು ನೆಲೆಸಮ ಮಾಡಿದ್ದಾನೆ. ಪಂಜಾಬ್ ಸಿಖ್ ಸಮುದಾಯದವರನ್ನು ಜೀವಂತವಾಗಿ ಸಮಾಧಿ ಮಾಡಿಸಿದ್ದಾನೆ. ಬ್ರಿಟಿಷರ ಕಾಲದಲ್ಲಿ ನಾವು ತಯಾರಿಸುತ್ತಿದ್ದ ಉಪ್ಪಿಗೆ ಜಿಲ್ಲೆಯಲ್ಲೇ ಸುಂಕ ಹಾಕಲಾಗಿತ್ತು. ಅಂಜಲಿ ಎದುರು ಔರಂಗಜೇಬ ಅಥವಾ ಶಿವಾಜಿ ಎಂದು ಆಯ್ಕೆ ನೀಡಿದರೆ ಅವರು ಔರಂಗಜೇಬ ಎನ್ನಬಹುದು ಎಂದು ಹೇಳಿದರು. ನಯನಾ ನೀಲಾವರ, ನಾಗೇಶ ಕುರ್ಡೇಕರ, ಸಂಜಯ ಸಾಳುಂಕೆ, ಸಂದೆಶ ಶೆಟ್ಟಿ ಮನೋಜ ಭಟ ಇದ್ದರು.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಬೀತು: ನಾಗರಾಜ ಜೋಶಿ

ಕನ್ನಡಪ್ರಭ ವಾರ್ತೆ ಕಾರವಾರಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ವಕ್ತಾರ ನಾಗರಾಜ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ್ ಮೊಘಲರಿಂದ, ಬ್ರಿಟಿಷರಿಂದ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿರಲಿಲ್ಲ. ಬಿಜೆಪಿಯು ಅವರಿಗಿಂತ ಅಪಾಯಕಾರಿ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ಸಿನವರ ಹಿಂದೂ ವಿರೋಧಿ ನೀತಿಯನ್ನು ಸಾಬೀತು ಮಾಡಿದೆ ಎಂದರು.ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಸಮ್ಮುಖದಲ್ಲಿ ಅಂಜಲಿ ಇಂತಹ ಹಿಂದೂ ವಿರೋಧಿ ಹೇಳಿಕೆಯನ್ನು ನೀಡಿದರೂ ಅವರಿಬ್ಬರೂ ಸುಮ್ಮನಿರುವುದು ಈ ಹೇಳಿಕೆಯ ಹಿಂದೆ ಅವರದ್ದೇ ಕೈವಾಡ ಇದೆ ಎನ್ನುವ ಶಂಕೆ ಮೂಡಿದೆ ಎಂದರು.

ಈ ದೇಶದಲ್ಲಿ ನಿರಂತರವಾಗಿ ಹಿಂದುಗಳ ಮೇಲೆ ನಡೆದ ದೌರ್ಜನ್ಯ, ಮೊಘಲರು ಹಿಂದುಗಳನ್ನು ಯಾವ ರೀತಿಯಲ್ಲಿ ಹಿಂಸಿಸಿದ್ದರು ಎಂಬ ಅರಿವು ಅಂಜಲಿಗೆ ಇಲ್ಲ. ಹಿಂದುಗಳ ಸ್ವಾಭಿಮಾನ ಎತ್ತಿ ಹಿಡಿದ ಬಿಜೆಪಿಗಿಂತ ದೇವಾಲಯವನ್ನು ಉರುಳಿಸಿದ ಮೊಘಲರರು ಶ್ರೇಷ್ಠ ಎಂದು ಅಂಜಲಿ ಹೇಳುತ್ತಿದ್ದಾರೆ. ಗುರು ಗೋವಿಂದ್ ಸಿಂಗ್ ಅವರ ಮಕ್ಕಳ ಮೇಲೆ ಗೋಡೆಯನ್ನು ನಿರ್ಮಿಸಲಾಯಿತು. ಹಲವಾರು ರಜಪೂತ ಮಹಿಳೆಯರು ಬೆಂಕಿಗೆ ಹಾರಿ ತಮ್ಮ ಮಾನವನ್ನು ಮೊಘಲರಿಂದ ಉಳಿಸಿಕೊಂಡರು. ಅಂತಹ ಮೊಗಲರನ್ನು ಒಳ್ಳೆಯವರು ಎಂದು ಹೇಳುವ ಅಂಜಲಿ ಅವರ ಮನಸ್ಥಿತಿಯನ್ನು ಪ್ರಶ್ನಿಸಬೇಕಾಗಿದೆ ಎಂದರು.ಸಂಜಯ ಸಾಳುಂಕೆ, ಪ್ರಶಾಂತ ಸಾಗೇಕರ ಇದ್ದರು.