ಸಾರಾಂಶ
ಕುಂದಗೋಳ: ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಹಾಗೂ ಪೂರಕ ವಾತಾವರಣ ನಿರ್ಮಾಣವಾಗಲು ಮೂಲ ಸೌಕರ್ಯಗಳ ಜತೆಗೆ ಸ್ಮಾರ್ಟ್ ಕ್ಲಾಸ್, ಡೆಸ್ಕ್ ಉತ್ತಮ ಕೊಠಡಿಗಳು ಸಹ ಮುಖ್ಯವಾಗಿರುತ್ತದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪುರ)ದಲ್ಲಿ ಶನಿವಾರ ಸಿಎಸ್.ಆರ್. ಫಂಡ್‌ನ ಅಡಿ ₹41.7 ಲಕ್ಷದಲ್ಲಿ ನಿರ್ಮಾಣವಾದ 3 ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹೀಗೆ ಮೂಲ ಸೌಕರ್ಯಗಳು ಸರಿಯಾದ ರೀತಿಯಲ್ಲಿ ಇದ್ದಾಗ ಒಳ್ಳೆಯ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶಾಲೆಗಳಿಗೆ ಸಿಎಸ್ಆರ್ ಫಂಡ್‌ನ ಅಡಿ ಬಣ್ಣದರ್ಪಣೆ, ಸ್ಮಾರ್ಟ್ ಕ್ಲಾಸ್, ಡೆಸ್ಕ್ ಹೀಗೆ ಅನೇಕ ಮೂಲಸೌಕರ್ಯ ಒದಗಿಸುವಲ್ಲಿ ತಾಲೂಕಿಗೆ ಆದ್ಯತೆ ನೀಡಿದ್ದಾರೆ ಎಂದರು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿದರು. ನಂತರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಶನಿವಾರದಂದು ನಡೆಯುವ ಜಾನುವಾರು ಸಂತೆಗೆ ಶಾಸಕ ಎಂ.ಆರ್. ಪಾಟೀಲ ಚಾಲನೆ ನೀಡಿದರು.ಈ ವೇಳೆ ಪಂಚಗೃಹ ಹಿರೇಮಠದ ಶಿಥಿಕಂಠೇಶ್ವರ ಶಿವಾಚಾರ್ಯರು ಹಾಗೂ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ಆಶೀರ್ವಚನ ನೀಡಿದರು.ಪಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸದಸ್ಯರಾದ ಹನುಮಂತಪ್ಪ ಮೇಲಿನಮನಿ, ಗಂಗಮ್ಮ ಬಂಡಿವಾಡ, ಗಣೇಶ ಕೋಕಾಟೆ, ಸಿದ್ದಪ್ಪ ಇಂಗಳಹಳ್ಳಿ, ಬಿ.ಟಿ. ಗಂಗಾಯಿ, ಲಕ್ಷ್ಮಣ ಚುಳಕಿ, ಸಿದ್ದಪ್ಪ ಅರಳಿಕಟ್ಟಿ, ಶಿದ್ದಪ್ಪ ಇಂಗಳಹಳ್ಳಿ, ಬಸವರಾಜ ಕೊಪ್ಪದ, ವಾಗೀಶ ಮಣಕಟ್ಟಿಮಠ, ನಾಗರಾಜ ಶಿಬರಗಟ್ಟಿ, ಬಸವರಾಜ ಬಾಳಿಕಾಯಿ, ಅಡಿವೇಪ್ಪ ಬಂಡಿವಾಡ ಸೇರಿದಂತೆ ಹಲವರಿದ್ದರು.