ಸಾರಾಂಶ
ನರಸಿಂಹರಾಜಪುರ, ನರೇಗ ಯೋಜನೆಯಡಿ ಕೆಲಸ ಮಾಡುತ್ತಿರುವ ರೈತರು, ಕಾರ್ಮಿಕರಿಗೆ ಸರ್ಕಾರ ಕ್ರೀಡೆಗಳನ್ನು ಏರ್ಪಡಿಸಿರುವುದು ಸಕಾಲಿಕವಾಗಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ತಿಳಿಸಿದರು.
ಕಾನೂರು ಗ್ರಾಪಂನಲ್ಲಿ ಕ್ರೀಡೆ, ವೈದ್ಯಕೀಯ ತಪಾಸಣೆ-ಮಾಸಿಕ ಸಂತೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನರೇಗ ಯೋಜನೆಯಡಿ ಕೆಲಸ ಮಾಡುತ್ತಿರುವ ರೈತರು, ಕಾರ್ಮಿಕರಿಗೆ ಸರ್ಕಾರ ಕ್ರೀಡೆಗಳನ್ನು ಏರ್ಪಡಿಸಿರುವುದು ಸಕಾಲಿಕವಾಗಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ್ ತಿಳಿಸಿದರು.
ಭಾನುವಾರ ಕಾನೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನರೇಗ ದಿನಾಚರಣೆ ಅಂಗವಾಗಿ ನರೇಗ ಉದ್ಯೋಗಿಗಳಿಗೆ ವಿವಿಧ ಕ್ರೀಡೆ, ವೈದ್ಯಕೀಯ ತಪಾಸಣೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಏರ್ಪಡಿಸಿದ್ದ ಮಾಸಿಕ ಸಂತೆ ಉದ್ಘಾಟಿಸಿ ಮಾತನಾಡಿದರು. ಇದರೊಂದಿಗೆ ವೈದ್ಯಕೀಯ ತಪಾಸಣೆ, ಮಾಸಿಕ ಸಮತೆಯಂತಹ ಕಾರ್ಯಕ್ರಮ ಹೆಚ್ಚು ಸಹಕಾರಿ ಎಂದರು.ಕಾನೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ರಾಜ, ಮಹಾರಾಜರ ಕಾಲದಿಂದಲೂ ಕ್ರೀಡೆಗೆ ಮಹತ್ವ ನೀಡಲಾಗಿತ್ತು. ದಸರಾದಲ್ಲೂ ಕ್ರೀಡೆ ಏರ್ಪಡಿಸಲಾಗುತ್ತದೆ. ಸರ್ಕಾರ ನರೇಗ ಯೋಜನೆ ಉದ್ಯೋಗಿಗಳಿಗೆ ಕ್ರೀಡೆ ನಡೆಸ ಬೇಕು ಎಂಬ ಆದೇಶ ನೀಡಿದೆ. ಸದಾ ಒತ್ತಡದಿಂದ ಕೆಲಸ ಮಾಡುವ ಮಹಿಳೆಯರಿಗೆ ಕ್ರೀಡೆ ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ವಿಜಯಕುಮಾರ್, ಎನ್.ಆರ್.ಎಲ್.ಎಂ.ಯೋಜನೆ ತಾಲೂಕು ವ್ಯವಸ್ಥಾಪಕ ಸುಬ್ರಮಣ್ಯ, ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಕಾರ್ಯದರ್ಶಿ ಶೀಬಾ, ಒಕ್ಕೂಟದ ಸದಸ್ಯರು, ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನರೇಗ ಯೋಜನೆಯಡಿ 100 ದಿನ ಕೆಲಸ ಮಾಡಿದ ವಿಜಯಕುಮಾರ್ ಎಂಬುವರನ್ನು ಸನ್ಮಾನಿಸಲಾಯಿತು.ಕ್ರೀಡಾಕೂಟದಲ್ಲಿ ಗೆದ್ದವರಿಗೆ ಬಹುಮಾನ ನೀಡಲಾಯಿತು. ನರೇಗ ಯೋಜನೆ ಉದ್ಯೋಗಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು.