ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಚಿಂತನೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.ನಗರದ ಕಾಂಗ್ರೆಸ್‌ ಕಚೇರಿ ಸಭಾಂಗಣದಲ್ಲಿ ನಡೆದ ಭಾರತದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜೀವ್ ಗಾಂಧಿ ಯುವಶಕ್ತಿಗೆ ಆದ್ಯತೆ ನೀಡಿ, ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ನೀಡಿದ ದೂರದೃಷ್ಟಿಯ ನಾಯಕ. ದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಬಗ್ಗೆ ಅವರು ಕಂಡ ಕನಸುಗಳು ಇಂದಿಗೂ ಪ್ರಸ್ತುತವಾಗಿವೆ. ದೇವರಾಜ ಅರಸು ಸಾಮಾಜಿಕ ನ್ಯಾಯದ ಪರವಾಗಿ ಐತಿಹಾಸಿಕ ಹೆಜ್ಜೆಗಳನ್ನು ಇಟ್ಟ ಜನನಾಯಕ. ಭೂ ಸುಧಾರಣೆ ಸೇರಿದಂತೆ ಹಲವು ಜನಪರ ಕ್ರಮಗಳ ಮೂಲಕ ಬಡವರು, ಹಿಂದುಳಿದವರು ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಅವಕಾಶಗಳನ್ನು ಕಲ್ಪಿಸಲು ಅವರು ಶ್ರಮಿಸಿದರು ಎಂದರು.ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಪೂಜಾರಿ, ಮುಖಂಡರಾದ ಜೋಕಿಂ ಡಿಸೋಜ, ವಿಕಾಶ್ ಶೆಟ್ಟಿ, ಅಬ್ದುಲ್ ರವೂಫ್, ಗೀತಾ ಅತ್ತಾವರ, ಶೈಲಾ ರಾಜೇಶ್, ಮಂಜುಳಾ ನಾಯಕ್, ನವೀನ್ ಡಿಸೋಜ, ಜಯಶೀಲಾ ಅಡ್ಯಾಂತಯ, ಲುಕ್ಮನ್ ಬಂಟ್ವಾಳ, ಜೆ.ಅಬ್ದುಲ್ ಸಲೀಮ್, ಪದ್ಮನಾಬ ರೈ, ಸುಹಾನ್ ಆಳ್ವಾ, ಬೇಬಿ ಕುಂದರ್, ಟಿ.ಕೆ.ಸುಧೀರ್, ಸಾರಿಕಾ ಪೂಜಾರಿ, ಟಿ.ಹೊನ್ನಯ್ಯ, ಡಿ.ಕೆ.ಅಶೋಕ್, ಸಬೀರ್ ಎಸ್., ಚಂದ್ರಕಲಾ ಜೋಗಿ, ಸುರೇಶ ಪೂಜಾರಿ, ಸಮರ್ಥ್ ಭಟ್, ನ್ಯಾನ್ಸಿ ನೊರಾನಾ, ಸೌಹಾನ್ ಎಸ್.ಕೆ., ದುರ್ಗಾ ಪ್ರಸಾದ್, ಚಂದ್ರಕಲಾ ರಾವ್, ಪ್ರಶಾಂತ್ ಪೂಜಾರಿ ಮತ್ತಿತರರು ಇದ್ದರು.

ಸಭೆಯಲ್ಲಿ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿ.ಲಕ್ಷ್ಮಣ್ ಶೆಟ್ಟಿ ಅವರಿಗೆ ಸಂತಾಪ ಕೋರಲಾಯಿತು.

ಶುಭೋದಯ ಆಳ್ವ ಸ್ವಾಗತಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.