ಹಾರೋಹಳ್ಳಿ: ಪಟ್ಟಣದ ಸ್ವಚ್ಛತೆಗಾಗಿ ಸದಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸುವುದು ಅಗತ್ಯ. ಸಮಯದ ಕೊರತೆಯಿಂದ ಅವರ ಆರೋಗ್ಯದ ಕಡೆ ನಿಗಾ ಹರಿಸುವುದು ಕಷ್ಟವಾದ್ದರಿಂದ ಅವರ ಯೋಗಕ್ಷೇಮಕ್ಕಾಗಿ ಪಟ್ಟಣ ಪಂಚಾಯತಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಹೇಳಿದರು

ಹಾರೋಹಳ್ಳಿ: ಪಟ್ಟಣದ ಸ್ವಚ್ಛತೆಗಾಗಿ ಸದಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸುವುದು ಅಗತ್ಯ. ಸಮಯದ ಕೊರತೆಯಿಂದ ಅವರ ಆರೋಗ್ಯದ ಕಡೆ ನಿಗಾ ಹರಿಸುವುದು ಕಷ್ಟವಾದ್ದರಿಂದ ಅವರ ಯೋಗಕ್ಷೇಮಕ್ಕಾಗಿ ಪಟ್ಟಣ ಪಂಚಾಯತಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಹೇಳಿದರು. ಪಟ್ಟಣ ಪಂಚಾಯತಿ ಹಾಗು ದಯಾನಂದ ಸಾಗರ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ತಾಲೂಕು ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ಅರೋಗ್ಯವನ್ನು ಪರಿಶೀಲಿಸಿಕೊಂಡು ವೈದ್ಯರು ನೀಡುವ ಸಲಹೆ ಹಾಗು ಔಷಧಿಗಳನ್ನು ನಿಯಮಿತವಾಗಿ ಪಾಲಿಸಿಕೊಂಡರೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ನಿಮ್ಮ ಕುಟುಂಬಕ್ಕೂ ಸಹಾಯವಾಗಲಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯಿನಿ ಡಾ. ಗೀತಾಂಜಲಿ ಜೆರಾಲ್ಡ್ ಮಾತನಾಡಿ, ನಗರದ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರು ಸದಾ ನಿರತರಾಗಿರುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ. ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದರು.

ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು. ವೈದ್ಯಕೀಯ ಉಪನ್ಯಾಸಕರು, ಸಿಬ್ಬಂಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಪಂಚಾಯತಿ ಸಿಬ್ಬಂಧಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

14ಕೆಆರ್ ಎಂಎನ್ 4.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಪಟ್ಟಣ ಪಂಚಾಯತಿ ಹಾಗು ದಯಾನಂದ ಸಾಗರ ಮೆಡಿಕಲ್ ಕಾಲೇಜು ವತಿಯಿಂದ ಪೌರಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.