ರಾಣಿಬೆನ್ನೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಖಾಸಗಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವಹೇಳನಕಾರಿ ಹೇಳಿಕೆ ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಸೋಮವಾರ ನಗರದ ಪಿ.ಬಿ. ರಸ್ತೆಯ ಪಾಂಡುರಂಗ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿ ರಾಕೇಶ್ ಶೆಟ್ಟಿ ಪ್ರತಿಕೃತಿ ದಹಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆದರೆ ಖಾಸಗಿ ವಾಹಿನಿಯ ಮುಖ್ಯಸ್ಥರು ಸ್ಟಿಂಗ್ ಆಪರೇಷನ್ ಮೂಲಕ ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸದೆ, ಜೆಡಿಎಸ್ ಸಾಮಾಜಿಕ ಜಾಲತಾಣ ಘಟಕದ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ. ಸ್ಟಿಂಗ್ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಿ, ಜೆಡಿಎಸ್ ಮೇಲೆ ಹೊಣೆ ಹೊರಿಸಲು ಗೃಹ ಇಲಾಖೆ ಮೂಲಕ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ಗ್ರಾಮೀಣ ಘಟಕ ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ನಿಂಗಪ್ಪ ಹೊನ್ನಾಳಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ರಾಜ್ಯ ಕಮಿಟಿ ಸದಸ್ಯೆ ಲಕ್ಷ್ಮೀ ಕದರಮಂಡಲಗಿ, ಉಷಾ ಜಾಡಮಲಿ, ಪೂಜಾ ದೈವಜ್ಞ, ಕಸ್ತೂರಿ ಅರ್ಕಸಾಲಿ, ಪರಮೇಶ ಚಿನ್ನನವರ, ಮಂಜು ಲಿಂಗದಹಳ್ಳಿ, ಶಿವಪುತ್ರಪ್ಪ ನಡುವಿನಮನಿ, ಮಾಲತೇಶ ಬಡಿಗೇರ, ಮೌನೇಶ ಬಡಿಗೇರ, ಶಿವು ಕರಿಯಪ್ಪನವರ, ಸುನ್ನಾಖಾನ್, ಇಬ್ರಾಹಿಂ ಯಲಗಚ್ಚ, ರವೀಂದ್ರ ಶಿವಪ್ಪನವರ, ಈರಣ್ಣಗೌಡ ಕಡೂರ, ಬಸವರಾಜ ಕವಲೆತ್ತು, ಉಮೇಶ ತಳವಾರ, ಮಂಜಣ್ಣ ನಲವಾಗಲ, ನಾಗಭೂಷಣ ಹಲಗೇರಿ, ನಾಗರಾಜ ಲಮಾಣಿ, ಮುಕ್ತಿಯಾರ ರಾಣಿಬೆನ್ನೂರ, ಹನುಮಂತಪ್ಪ ಬಿಷ್ಟಣ್ಣನವರ, ಕುಮಾರ ಚಲವಾದಿ, ಬೀರೇಶ ಬಾರ್ಕಿ, ನಿಂಗಣ್ಣ ಸಣ್ಣಕೊಟ್ರಪ್ಪನವರ, ಗುರುರಾಜ ಗೋಜನವರ, ನಟರಾಜ ಕೋಟಿಹಾಳ, ಪರಶುರಾಮ ಕಸವಾಳ, ಬಸಣ್ಣ ಗಲಗಲಿ, ಶಿವಾನಂದ ಹಲಗೇರಿ, ರುದ್ರಣ್ಣ ಕೋಡಿಹಳ್ಳಿ, ತಿಮ್ಮಣ್ಣ ವೆಂಕಣ್ಣನವರ, ಚಂದ್ರಪ್ಪ ಕ್ಯಾತಮನೂರ ಪ್ರತಿಭಟನೆಯಲ್ಲಿದ್ದರು.