ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.
ರಾಣಿಬೆನ್ನೂರು: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಬರುವಂತಹ ಪ್ರತಿಯೊಂದು ಪಾತ್ರಗಳು ಇಂದಿಗೂ ಸಹ ಪ್ರಸ್ತುತವಾಗಿವೆ. ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತದಲ್ಲಿ ''''''''ರಾಮಾಯಣ'''''''' ಮಹಾಕಾವ್ಯವನ್ನು ರಚಿಸಿದ ಭಾರತದ ಪ್ರಾಚೀನ ಋಷಿ ಮತ್ತು ಆದಿಕವಿ. ಮೂಲತಃ ವಾಲ್ಮೀಕಿ ಬರೆದ ರಾಮಾಯಣವು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳು ಮತ್ತು ಏಳು ಖಂಡಗಳನ್ನು ಒಳಗೊಂಡಿದೆ ಎಂದರು.ಡಿವೈಎಸ್ಪಿ ಲೋಕೇಶ್ ಜೆ. ಮಾತನಾಡಿ, ಒಬ್ಬ ಠಕ್ಕನಾಗಿ ಜೀವನ ಸಾಗಿಸುತ್ತಿದ್ದ ರತ್ನಾಕರ, ಮಹಾನ್ ತಪಸ್ವಿಯ ದರ್ಶನ ಭಾಗ್ಯದಿಂದ ಶ್ರೀ ಮಹರ್ಷಿ ವಾಲ್ಮೀಕಿಯಾಗಿ ಮಹಾನ್ ರಾಮಾಯಣ ಎಂಬ ಗ್ರಂಥ ರಚಿಸಿದರು. ಅವರು ರಚಿಸಿದ ಗ್ರಂಥ ಜಗತ್ತಿಗೇ ಮಾದರಿಯಾಗಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಸಣ್ಣಬಿದರಿ ಮಾತನಾಡಿದರು. ಅಬಕಾರಿ ಇನ್ಸಪೆಕ್ಟರ್ ಶೇಖರಪ್ಪ ಉಪನ್ಯಾಸ ನೀಡಿದರು.ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ, ಮಂಜು ನಾಯಕ್, ಸಿಪಿಐಗಳಾದ ವೆಂಕಟೇಶ್, ಎನ್.ಎಂ. ಕಾಡದೇವರಮಠ, ತಾಲೂಕು ಮಹಿಳಾ ನೌಕರ ಸಂಘದ ಅಧ್ಯಕ್ಷೆ ಪುಷ್ಪಲತಾ, ಸಮಾಜದ ಮುಖಂಡರಾದ ರವೀಂದ್ರಗೌಡ ಪಾಟೀಲ, ಸಣ್ಣತಮ್ಮಪ್ಪ ಬಾರ್ಕಿ, ಶಶಿಧರ ಬಸೇನಾಯ್ಕರ, ಚಂದ್ರಣ್ಣ ಬೇಡರ, ಹನುಮಂತಪ್ಪ ಚಳಗೇರಿ, ಸುಭಾಸ ಬನಕೋಡ, ಭೀಮಣ್ಣ ಅರಳಿಕಟ್ಟಿ, ಮಂಜುನಾಥ ಓಲೇಕಾರ ಮತ್ತಿತರರಿದ್ದರು.