ಶಿವಮೊಗ್ಗ: ಹಿರಿಯ ಪತ್ರಕರ್ತ ಪಿ. ಜೇಸುದಾಸ್ ಅವರಿಗೆ ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ ಒಲಿದಿದೆ. ದಕ್ಷಿಣ ಭಾರತದ ಅತಿದೊಡ್ಡ ಮಾಧ್ಯಮ ಪ್ರಶಸ್ತಿಯಾಗಿರುವ, ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್‌ನಲ್ಲಿ ಈ ಸಲ ಟಿವಿ ಮತ್ತು ಪತ್ರಿಕಾ ರಂಗದ ಸುಮಾರು 80 ಸಾಧಕರಿಗೆ ಪ್ರಶಸ್ತಿ ಪ್ರದಾನವಾಗುತ್ತಿದ್ದು, ಜೇಸುದಾಸ್ ಅವರು ''''''''''''''''ಬೆಸ್ಟ್ ರಿಪೋರ್ಟರ್ ಆರ್ಒಕೆ '''''''''''''''' ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಇವರು, ತಮ್ಮ ವರದಿಗಳ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಕಳೆದ 20 ವರ್ಷಗಳಿಗೂ ಅಧಿಕ ಕಾಲದಿಂದ ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ''''''''ಈ-ಟಿವಿ'''''''', ''''''''ಕಸ್ತೂರಿ ನ್ಯೂಸ್ 24'''''''', ''''''''ಪ್ರಜಾ ಟಿವಿ''''''''ಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು ''''''''ಝೀ ಕನ್ನಡ ನ್ಯೂಸ್'''''''', ''''''''ಎಎನ್ಐ'''''''' ಸುದ್ದಿ ಸಂಸ್ಥೆಯ ಶಿವಮೊಗ್ಗದ ಹಿರಿಯ ವರದಿಗಾರರಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇವರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಪ್ರಸ್ತುತ ''''''''''''''''ಮಲೆನಾಡು ಟುಡೆ'''''''''''''''' ಎಂಬ ಹೆಸರಿನ ಸ್ಥಳೀಯ ಸುದ್ದಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.-----------------------
ಪತ್ರಕರ್ತ ಜೇಸುದಾಸ್ಗೆ ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್
Journalist Jesudas Receives TNIT South India Media Award
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.