ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗಕ್ಕೆ ಬೇಡ ಜಂಗಮರ ಮಾಹಿತಿ ಸಲ್ಲಿಕೆ

| Published : May 24 2025, 12:20 AM IST

ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗಕ್ಕೆ ಬೇಡ ಜಂಗಮರ ಮಾಹಿತಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಡ ಜಂಗಮ ಸಾಮಾಜಿಕ ಜಾತಿ ಗಣತಿಯಲ್ಲಿ ಗಣಕೀಕರಣ ಮಾಡಿಸುವಾಗ ಇಲ್ಲಸಲ್ಲದ ಕಾನೂನುಬಾಹಿರವಾದ ಸೂಚನೆಗಳನ್ನು ನೀಡುವ ಮೂಲಕ ಸ್ವಾಯುತ್ತವಾಗಿ ಕಾರ್ಯನಿರ್ವಹಿಸುವ ಆಯೋಗದ ಕಾರ್ಯದಲ್ಲಿ ಸಮಸ್ಯೆ ಉಂಟು ಮಾಡಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ತಿಳಿಸಿದೆ.

ಹೈದರಾಬಾದ್‌ ಕ. ಸಮಾಜ ಸಂಸ್ಥೆ ಮಾಹಿತಿ

ಯಾದಗಿರಿ: ಬೇಡ ಜಂಗಮ ಸಾಮಾಜಿಕ ಜಾತಿ ಗಣತಿಯಲ್ಲಿ ಗಣಕೀಕರಣ ಮಾಡಿಸುವಾಗ ಇಲ್ಲಸಲ್ಲದ ಕಾನೂನುಬಾಹಿರವಾದ ಸೂಚನೆಗಳನ್ನು ನೀಡುವ ಮೂಲಕ ಸ್ವಾಯುತ್ತವಾಗಿ ಕಾರ್ಯನಿರ್ವಹಿಸುವ ಆಯೋಗದ ಕಾರ್ಯದಲ್ಲಿ ಸಮಸ್ಯೆ ಉಂಟು ಮಾಡಲಾಗುತ್ತಿದೆ ಎಂದು ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ತಿಳಿಸಿದೆ.

ಏಕ ಸದಸ್ಯ ವಿಚಾರಣಾ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಮನವಿ ಸಲ್ಲಿಸಿರುವ ಸಂಸ್ಥೆಯ ಪದಾಧಿಕಾರಿಗಳು, ಕಲಬುರಗಿ ವಿಭಾಗೀಯ ಸಮಾಜ ಕಲ್ಯಾಣ ಅಧಿಕಾರಿಗಳಿಂದ ಆಯೋಗದ ಸ್ವತಂತ್ರ ಕಾರ್ಯದಲ್ಲಿ ಮೂಗು ತೂರಿಸುತ್ತಿರುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದೆ. ಹೈದರಾಬಾದ್ ಕರ್ನಾಟಕ ಬೇಡ ಜಂಗಮರ ಚಾರಿತ್ರಿಕ, ವಾಸ್ತವಿಕ, ಕಾನೂನು ಮತ್ತು ಸಂವಿಧಾನದ ಅಂಶಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಮನವಿ ಸಲ್ಲಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಬರೆದ ಮನವಿಯನ್ನೂ ಹೈದರಾಬಾದ್ ಕರ್ನಾಟಕ ಪ್ರದೇಶದ ನಿಯೋಗವು ಸಲ್ಲಿಸಿತು. ಇದುವರೆಗೆ ಬೇಡ ಜಂಗಮರಿಗೆ ತಮ್ಮ ಮೂಲ ಜಾತಿ ಪ್ರಮಾಣಪತ್ರ ಪಡೆಯಲು ಅಡ್ಡಿ ಪಡಿಸುತ್ತಿರುವ ಕೃತ್ಯಗಳು ನಡೆಯುತ್ತಿರುವ ಬಗ್ಗೆಯೂ ವಿವರಿಸಿರುವ ನಿಯೋಗ, ನವ ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರದಿಂದ ಸಮಸ್ಯೆ ಸೃಷ್ಟಿಸಲಾಗುತ್ತಿದೆ ಎಂದು ವಿವರಿಸಿದರು.

ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಕಲಬುರಗಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಕಳ್ಳೀಮಠ ಹಾಗೂ ಬೆಂಗಳೂರಿನ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ವಿಶ್ವನಾಥ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿ ಕಾನೂನುಬಾಹಿರ ಕ್ರಮಗಳನ್ನು ಆಯೋಗದ ಕೆಲಸ ಕಾರ್ಯಗಳಲ್ಲಿ ತೂರಿಸುವಂತಹ ಕೆಲಸ ಆಗುತ್ತಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು.