ಪ್ರಾಚೀನ ಮತ್ತು ದೇಶಿ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ದೈಹಿಕ, ಮಾನಸಿಕ ಸದೃಢತೆಗಾಗಿ ಸಹಕಾರಿಯಾಗಲಿದೆ.

ಮುಂಡರಗಿ: ಕಬಡ್ಡಿಯನ್ನು ಕೇವಲ ಶಕ್ತಿಯಿಂದ ಮಾತ್ರವಲ್ಲ, ಯುಕ್ತಿಯಿಂದಲೂ ಆಡಬೇಕಾಗುತ್ತದೆ ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಅನ್ನದಾನೀಶ್ವರ ಯಾತ್ರಾ ಮಹೋತ್ಸವದ ಪ್ರಯುಕ್ತ ಮೃಡಗಿರಿ ಅನ್ನದಾನೀಶ್ವರ ಪ್ರೊ ಕಬಡ್ಡಿ ಲೀಗ್ ವತಿಯಿಂದ ಆಯೋಜಿಸಿದ್ದ ಪ್ರೊ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಾಚೀನ ಮತ್ತು ದೇಶಿ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ದೈಹಿಕ, ಮಾನಸಿಕ ಸದೃಢತೆಗಾಗಿ ಸಹಕಾರಿಯಾಗಲಿದೆ. ಈ ದಿಸೆಯಲ್ಲಿ ಎಲ್ಲರೂ ಕ್ರೀಡಾಪಟುಗಳಿಗೆ ಶಕ್ತಿಯಾಗಿ ಪ್ರೋತ್ಸಾಹಿಸುವಂತಾಗಬೇಕು. ಶ್ರೀಮಠದ ಯಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಬಡ್ಡಿ ಪಂದ್ಯಾವಳಿಯಿಂದ ತಾಲೂಕಿಗೆ ಮೆರುಗು ಬಂದಿದೆ ಎಂದರು.ಜಿಪಂ ಮಾಜಿ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ಭಾರತದ ದೇಶಿ ಕ್ರೀಡೆಗಳಲ್ಲಿ ಇದೊಂದು ಪ್ರಮುಖ ಕ್ರೀಡೆ. ಈ ಆಟಗಳಿಗೆ ಪ್ರೋತ್ಸಾಹ ನೀಡಬೇಕು. ಯುವ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತ ಗುರಿಯತ್ತ ಮುನ್ನುಗ್ಗಬೇಕು ಎಂದರು.

ಕಬಡ್ಡಿ ಲೀಗ್ ಅಧ್ಯಕ್ಷ ನಾಗರಾಜ ಹೊಂಬಳಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಪ್ರತಿಭಾವಂತ ಕಬಡ್ಡಿ ಪಟುಗಳಿಗೆ ಪ್ರೋತ್ಸಾಹಿಸುವ ಸ್ಪರ್ಧೆ ನಿರಂತರ ನಡೆಯಲಿದೆ ಎಂದರು.ಅಳ್ವಾಸನ ಕೋಚ್ ಸತೀಶ ನಾಯಕ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು. ಸಿಪಿಐ ಯಶವಂತ ಬಿಸನಳ್ಳಿ, ಕುಮಾರಸ್ವಾಮಿ ಹಿರೇಮಠ, ಎಸ್.ಡಿ. ಮಕಾನದಾರ, ಡಿ.ಡಿ. ಮೋರನಾಳ ಮಾತನಾಡಿದರು.ಈ ಕಬಡ್ಡಿ ಪಂದ್ಯಾವಳಿಯಲ್ಲಿ 10 ತಂಡಗಳ ಮಾಲೀಕರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕರಬಸಪ್ಪ ಹಂಚಿನಾಳ, ರಾಮಚಂದ್ರ ಕಲಾಲ್, ಎಸ್.ವಿ. ಪಾಟೀಲ್, ರಜನಿಕಾಂತ ದೇಸಾಯಿ, ಎಸ್.ಆರ್. ಗೌಡರ, ದಸ್ತಗೀರಸಾಬ ಹೊಸಮನಿ, ವಕುಮಾರ ಕುರಿ, ಪವನ್ ಮೇಟಿ, ರಾಜು ಡಾವಣಗೆರೆ, ರಾಜಾಭಕ್ಷಿ ಬೆಟಗೇರಿ, ಪ್ರಹ್ಲಾದ್ ಹೊಸಮನಿ, ಪ್ರಶಾಂತ ಗುಡದಪ್ಪನವರ, ಮಂಜುನಾಥ ಸಂಜಿವಣ್ಣವರ, ಶರಣಪ್ಪ ಅಂಗಡಿ, ಫಕೀರೇಶ ಚೌಡಕಿ, ದೇವು ಹಡಪದ, ಅಶೋಕ ಕಬ್ಬೇರಹಳ್ಳಿ, ನಿಂಗರಾಜ ಹಾಲಿನವರ, ಮಂಜುನಾಥ ಹಟ್ಟಿ, ದ್ಯಾಮಣ್ಣ ವಾಲಿಕಾರ, ಪ್ರೊ ಕಬಡ್ಡಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲೀಗ್ ಸಂಸ್ಥಾಪಕ ವೈ.ಎಚ್. ಬಚನಳ್ಳಿ ನೇತೃತ್ವವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಸುರೇಶ ರಾಮೇನಹಳ್ಳಿ ಸ್ವಾಗತಿಸಿದರು, ಗುಡದೀರಪ್ಪ ಲಿಂಗಶೆಟ್ಟರ ನಿರೂಪಿಸಿದರು.