ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಭಾರತೀಯ ಸಂಪ್ರದಾಯಗಳು ವಿಶ್ವದಲ್ಲಿ ಶ್ರೀಮಂತವಾಗಿ ಹೊಳೆಯುವುದಕ್ಕೆ ಕಾಡುಗೊಲ್ಲ ಸಮಾಜದಂತಹ ಸಂಸ್ಕೃತಿ ರಕ್ಷಿಸುವ ಸಮುದಾಯಗಳದೇ ಪ್ರಮುಖ ಪಾತ್ರ. ಕಾಡುಗೊಲ್ಲ ಸಮುದಾಯವು ಇಂದಿಗೂ ನೈಸರ್ಗಿಕ ಜೀವನಶೈಲಿ, ನಿಷ್ಠೆ, ಸರಳತೆ, ಮಾನವೀಯತೆ ಮತ್ತು ಒಗ್ಗಟ್ಟು ಎಂಬ ಮೌಲ್ಯಗಳನ್ನು ಅತಿ ಗೌರವದಿಂದ ಕಾಪಾಡಿಕೊಂಡಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು. ಅವರು ಇಂದು ಬಡಮಂಗನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಂಗಣ್ಣ ದೇವರು, ಕರಿಯಮ್ಮ, ಮಾರಮ್ಮ, ಬೇವಿನಹಳ್ಳಮ್ಮ ದೇವರ ಉತ್ಸವದಲ್ಲಿ ಭಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಕಾಡುಗೊಲ್ಲ ಸಮಾಜವು ಶತಮಾನಗಳ ಸಂಸ್ಕೃತಿ, ಪರಂಪರೆ, ಧೈರ್ಯ, ಶ್ರಮ ಮತ್ತು ದೇವರ ಮೇಲಿನ ಅಚಲ ನಂಬಿಕೆಯ ಪ್ರತಿರೂಪವಾಗಿದೆ. ಕಾಡುಗೊಲ್ಲ ಸಮುದಾಯದ ಹಬ್ಬಗಳು, ದೈವಪೂಜೆಗಳು, ಜಾತ್ರೆಗಳು ಇವು ಕೇವಲ ಆಚರಣೆಗಳಲ್ಲ, ಕುಟುಂಬದ ಏಕತೆ, ಧೈರ್ಯ, ಸಹಕಾರ, ಪರಸ್ಪರ ಗೌರವ ಮತ್ತು ಸಮಾಜ ಸೇವೆಯ ಪಾವನ ಸಂದೇಶವನ್ನು ಹರಡುತ್ತವೆ. ಇಂದಿನ ದೇವರ ಉತ್ಸವ ಪವಿತ್ರ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ನನಗೆ ಮಹಾ ಗೌರವ ಹಾಗೂ ಸಂತೋಷದ ವಿಷಯ ಎಂದರು. ಈ ಸಂದರ್ಭದಲ್ಲಿ ಚಂಗಾವರ ಗ್ರಾ.ಪಂ. ಅಧ್ಯಕ್ಷರಾದ ನಾಗಮ್ಮ ಕಾರನಾಗಪ್ಪ, ಸದಸ್ಯ ಮೂಡಲಗಿರಿಯಪ್ಪ, ಮಾಜಿ ಸದಸ್ಯರಾದ ತಿಮ್ಮಣ್ಣ, ದೇವರಾಜ್, ಮೂಡಲಗಿರಿಯಪ್ಪ, ಮಂಜುನಾಥ್, ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))