ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ವೇಗವಾಗಿ ಬೆಳೆಯುತ್ತಿರುವ ಕಡೂರು ಪಟ್ಟಣವನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಪಟ್ಟಣದ ದೀಕ್ಷಾನಗರ ಬಡಾವಣೆಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ₹20ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಡೂರು ಹೊರವಲಯದಲ್ಲಿ ಸಾಕಷ್ಟು ಬಡಾವಣೆಗಳು ತಲೆ ಎತ್ತಿ ನೂರಾರು ಮನೆಗಳು ನಿರ್ಮಾಣಗೊಂಡಿವೆ. ಆದರೆ, ಇಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡು ತ್ತಿರುವ ಬಗ್ಗೆ ನಿವಾಸಿಗಳು ದೂರಿದ್ದಾರೆ. ಇದೊಂದು ಇಕ್ಕಟ್ಟಿನ ಪರಿಸ್ಥಿತಿ, ಸಾಕಷ್ಟು ಹೊಸ ಬಡಾವಣೆಗಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿವೆ. ಪಂಚಾಯಿತಿ ಅನುದಾನದಲ್ಲಿ ಇಲ್ಲಿ ಮೂಲಸೌಕರ್ಯ ಒದಗಿಸಲಿಕ್ಕೆ ಸಾಧ್ಯವಿಲ್ಲ. ಪುರಸಭೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಪುರಸಭೆಯವರು ಅನುದಾನ ಹಾಕಲು ಬರುವುದಿಲ್ಲ. ತುರುವನಹಳ್ಳಿ, ಮಲ್ಲೇಶ್ವರ, ಹರುವ ನಹಳ್ಳಿ, ದೊಂಬರಹಳ್ಳಿ , ಬಂಡಿಕೊಪ್ಪಲು ಹಾಗೂ ತಂಗಲಿ ಗಡಿವರೆಗೆ ಸೇರಿಸಿ ನಗರಸಭೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಡೂರು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಈ ಹಿಂದೆ ವಾರ್ಷಿಕ ನರೇಗಾ ಕ್ರಿಯಾಯೋಜನೆ ₹90ಕೋಟಿ ದಾಟುತ್ತಿರಲಿಲ್ಲ. ತಾವು ಶಾಸಕರಾದ ನಂತರ ವಾರ್ಷಿಕ ₹212 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ತಲುಪಿದೆ. ಇದಕ್ಕೆ ಆಕ್ಷೇಪಣೆಗಳು ವ್ಯಕ್ತವಾಗಿ ಆಡಿಟ್ ನಡೆದು ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಕೂಡಾ ಸಾಬೀತಾಗಿದೆ. ಇದರಿಂದ ತಾವು ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದು ಸ್ಪಷ್ಟ ವಾಗುತ್ತದೆ. ಹಂತ ಹಂತವಾಗಿ ಇಡೀ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ನಡೆಸು ವುದಾಗಿ ತಿಳಿಸಿದರು. ಈ ಬಡಾವಣೆ ಅಸ್ತಿತ್ವಕ್ಕೆ ಬಂದು 17-18 ವರ್ಷವಾಗಿದೆ. ಇಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಪೂರೈಕೆಗೆ ಕೊರತೆ ಯಾಗಿದೆ. ಇಲ್ಲಿಗೆ ಭದ್ರಾ ಕುಡಿಯುವ ನೀರು ಪೂರೈಸುವ ಬಗ್ಗೆ ಮನವಿ ಮಾಡಿದ್ದೀರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಇಲ್ಲಿಗೆ ನೀರು ಪೂರೈಕೆ ಸಾಧ್ಯವಿದೆ. ಆದರೆ ಅದಕ್ಕೆ ಇನ್ನೂ ಒಂದೆರಡು ವರ್ಷ ಬೇಕಾಗಬಹುದು, ಆದ್ದರಿಂದ ಪುರಸಭೆಯವರೊಂದಿಗೆ ಮಾತನಾಡಿ ಇಲ್ಲಿಗೆ ತಾತ್ಕಾಲಿಕ ನೀರು ಪೂರೈಕೆ ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವುದಾಗಿ ಹೇಳಿದರು. ದೀಕ್ಷಾನಗರ ಬಡಾವಣೆ ನಿವಾಸಿ ನಿವೃತ್ತ ಉಪನ್ಯಾಸಕ ಕೆಂಪಸಿದ್ದಯ್ಯ ಮಾತನಾಡಿ, ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿಸಿದ ಶಾಸಕರಿಗೆ ಇಲ್ಲಿನ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಮಳೆಗಾಲದಲ್ಲಿ ಬಡಾವಣೆ ಸಮೀಪದ ರಾಜಕಾಲುವೆ ತುಂಬಿ ಹರಿದು ನಿವಾಸಿಗಳ ಮನೆ ಬಾಗಿಲಿಗೆ ನೀರು ನುಗ್ಗುವ, ಮಕ್ಕಳು ಶಾಲೆಗೆ ತೆರಳಲೂ ತೊಂದರೆಯಾಗುವ ಸನ್ನಿವೇಶವಿದೆ. ಇದನ್ನು ಪರಿಹರಿಸಿಕೊಡುವಂತೆ ಕೋರಿದರು. ತಂಗಲಿ ಗ್ರಾಪಂ ಅಧ್ಯಕ್ಷ ರಮೇಶ್, ಸದಸ್ಯ ಹರುವನಹಳ್ಳಿ ರಘು, ನಿವಾಸಿಗಳಾದ ಆನಂದಮೂರ್ತಿ, ಪ್ರದೀಪ್, ತಾ.ಪಂ.ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ತಿಮ್ಲಾಪುರ, ಟಾಟಾ ಮಂಜುನಾಥ ಮತ್ತು ಸ್ಥಳೀಯ ಮಹಿಳೆಯರು ಇದ್ದರು.22ಕೆಕೆಡಿಯು1..ಕಡೂರು ಪಟ್ಟಣದ ದೀಕ್ಷಾ ನಗರ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))