ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಅಲ್ಲದೇ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ರಾಜ್ಯಶಾಸ್ತ್ರ ಬಹಳ ಅನಿವಾರ್ಯವಾಗಿ ಬೇಕಿರುವ ಮುಖ್ಯ ವಿಷಯವಾಗಿದೆ. ಹಾಗಾಗಿ ರಾಜ್ಯಶಾಸ್ತ್ರ ವಿಷಯ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯಶಾಸ್ತ್ರ ವಿಷಯ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದ ವಿಷಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಭಿಪ್ರಾಯಪಟ್ಟರು.

ನಗರದ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಕಾಡೆಮಿಯಿಂದ ಜರುಗಿದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಅಲ್ಲದೇ, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ರಾಜ್ಯಶಾಸ್ತ್ರ ಬಹಳ ಅನಿವಾರ್ಯವಾಗಿ ಬೇಕಿರುವ ಮುಖ್ಯ ವಿಷಯವಾಗಿದೆ. ಹಾಗಾಗಿ ರಾಜ್ಯಶಾಸ್ತ್ರ ವಿಷಯ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಇಂತಹ ಕಾರ್ಯಾಗಾರಗಳು ಅವಶ್ಯಕ. ವಿದ್ಯಾರ್ಥಿಗಳನ್ನು ಪರೀಕ್ಷಾ ದೃಷ್ಟಿಯಿಂದ ಅಣಿಗೊಳಿಸುವಲ್ಲಿ ಅಕಾಡೆಮಿಯು ಕೈಗೊಂಡಿರುವ ಕಾರ್ಯವನ್ನು ಶ್ಲಾಘಿಸಿದರು.

ಅಕಾಡೆಮಿ ಅಧ್ಯಕ್ಷ ವಿ.ಎಂ.ರವಿ ಮಾತನಾಡಿ, ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರು ಉತ್ತಮ ಫಲಿತಾಂಶ ಕೊಡುವ ಮೂಲಕ ಜಿಲ್ಲೆಯ ದ್ವಿತೀಯ ಪಿಯು ಫಲಿತಾಂಶ ೧೪ ನೇ ಸ್ಥಾನದಿಂದ ೮ ನೇ ಸ್ಥಾನದ ಒಳಗೆ ಬರುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸೋಣ ಎಂದರು.

ಸಂಪನ್ಮೂಲ ವ್ಯಕ್ತಿ ರಮೇಶ್ ಪ್ರಶ್ನೆಕೋಠಿ ಬಗ್ಗೆ ತಿಳಿಸಿದರೆ, ಉಪನ್ಯಾಸಕ ಮನು ಗೊರವಾಲೆ ನೀಲಿನಕ್ಷೆ ಬಗ್ಗೆ ತಿಳಿಸಿದರು.

ಕಾರ್ಯಾಗಾರದಲ್ಲಿ ಪದೋನ್ನತಿ ಹೊಂದಿದ ನಿವೃತ್ತಿ ಹೊಂದಿದ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಶೇ.೧೦೦ ಫಲಿತಾಂಶ ತಂದುಕೊಟ್ಟ ಉಪನ್ಯಾಸಕರನ್ನು, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಸಾಪ, ಸಾವಿತ್ರಿಬಾಯಿ ಬಾಪುಲೆ ಟ್ರಸ್ಟ್‌ನಿಂದ ರಾಜ್ಯೋತ್ಸವ- ಸಾಧಕರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಂಡ್ಯದ ಸಾವಿತ್ರಿಬಾಯಿ ಪುಲೆ ಟ್ರಸ್ಟ್‌ ಹಾಗೂ ಸಾವಿತ್ರಿಬಾಯಿ ವೃದ್ಧಾಶ್ರಮದ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿತ್ತು.

ಬಸವೇಶ್ವರ ರಾಜಯೋಗ ಮಠದ ಶ್ರೀ ತೋತಪುರಿ ಸೋಮಶೇಖರ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು.

ಸಾವಿತ್ರಿಬಾಯಿ ಬಾಪುಲೆ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸಿ.ಎಲ್‌. ಜಗದೀಶ್‌, ಉಪಾಧ್ಯಕ್ಷೆ ಡಿ.ಎಂ. ಪ್ರೀತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ಜಿಲ್ಲಾ ಕಸಾಪ ಉಪಾಧ್ಯಕ್ಷ ಟಿ. ತ್ಯಾಗರಾಜು, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ನಟ ಶಿವಕುಮಾರ್‌ ಆರಾಧ್ಯ ವಿಶೇಷ ಆಹ್ವಾನಿತರಾಗಿದ್ದರು. ಅಲೆಯನ್ಸ್‌ ಕ್ಲಬ್‌ ಜಿಲ್ಲಾ ರಾಜ್ಯಪಾಲ ಎಸ್‌. ವೆಂಕಟೇಶ್‌, ಮಂಡ್ಯ ಮಮತಾ ನರ್ಸಿಂಗ್‌ ಹೋಮ್‌ನ ಡಾ.ಆನಂದ್‌, ಬೆಂಗಳೂರಿನ ಡಾ.ಉಮಾ ಬುಗ್ಗಿ, ಕೇಂದ್ರ ಕಾರಾಗೃಹ ಸಂದರ್ಶಕ ಮಂಡಳಿ ಸದಸ್ಯ ಪವನ್‌ ಸಿದ್ದರಾಮ ಮುಖ್ಯಅತಿಥಿಯಾಗಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು:

ಡೊಳ್ಳು ಕುಣಿತ, ಸಮರ್ಥನಾ ಸೇವಾ ಟ್ರಸ್ಟ್‌ ಅಂಧ ಮಕ್ಕಳಿಂದ ನೃತ್ಯ, ಮೈಸೂರಿನ ಅರುಣೋದಯ ಟ್ರಸ್ಟ್‌, ಕೂಗು ಸೇವಾ ಟ್ರಸ್ಟ್‌ ಮಕ್ಕಳಿಂದ ಕಾರ್ಯಕ್ರಮ, ಚನ್ನರಾಯಪಟ್ಟಣ ಉಗ್ರ ನರಸಿಂಹ ಯೋಗ ನೃತ್ಯರೂಪಕ, ಕೊರಿಯೋಗ್ರಾಫರ್‌ ಮಂಜುನಾಥ್‌ ಕೆ. ಅಡಗೂರು ತಂಡದ ವಿಸ್ಮಿತಾ, ತಾರುಣ್ಯ, ವಿಥುನ್‌, ಮೋನಿಷಾ, ನಿಸರ್ಗ ಲಿಪಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಶಸ್ತಿ ಪುರಸ್ಕೃತರು:

ಮೈಸೂರಿನ ಬಿ.ಎಂ. ಮೂರ್ತಿ, ಜಿ. ಪ್ರವೀಣ್‌ ಕುಮಾರ್‌, ಲಯನ್‌ ಕುಮಾರ್‌, ರವೀಂದ್ರ, ನಾಗರತ್ನಮ್ಮ, ನಾಗೇಶ್‌, ಎಸ್‌. ಪ್ರಜ್ವಲ್‌, ಶ್ರೀಕಾಂತ್‌, ಸರಳಾದೇವಿ, ರಾಯಚೂರಿನ ಮಂಜುನಾಥ್‌ ಗಾಣೇಗೇರ, ಸಿಂಧನೂರಿನ ಹೊಸಗೇರಪ್ಪ ಗೊರೆಬಾಳ, ಹೂವಿನ ಹಡಗಲಿಯ ಚಮನ್‌ ಸಾಬ್‌, ಬೆಂಗಳೂರಿನ ಮಲ್ಲಿಕಾರ್ಜುನ ಕೊಂಗೆ, ಮೂರ್ತಿ. ಲಕ್ಷ್ಮೀಕಾಂತ ಪೂಜಾರಿ, ನವೀನ್‌ ಕುಮಾರ್‌, ಸಿ. ಪಿಳ್ಳರಾಜು, ವಸಂತಕುಮಾರ್‌, ಅಂದಲಿ, ಬಿ.ಎಸ್‌. ಅನಿಲ್‌ ಕುಮಾರ್‌, ಜಿ.ಜೆ. ನಂಜುಂಡಪ್ಪ, ಎಂ. ಸಾವಿತ್ರಮ್ಮ, ಹಾಸನದ ರೂಪತಾರಾ, ಚಿತ್ರದುರ್ಗದ ರತ್ನಾ, ಬಾಗಲಕೋಟೆಯ ಮುತ್ತಯ ವಡ್ಡರ,. ಕೊಣನೂರಿನ ಜಮೀರ್‌ ಅಹಮದ್‌, ನಂದೀಶ್‌ ಈಚರೆಗೆ, ಮಮಕಾ ಗೆಜ್ಜಗಳ್ಳಿ, ಗುರುಮಲ್ಲು, ಎಚ್‌.ಡಿ. ಕೋಟೆಯ ಮಣಿಕಂಠ, ರಾಮನಗರದ ರೇಣುಕಾಪ್ರಸಾದ್‌, ಲೋಕೇಶ್‌, ಬಸವರಾಜು ಬಸಪ್ಪ ಹುಣಸೆಮರ ಅವರಿಗೆ ಸಾವಿತ್ರಿಬಾಯಿ ಪುಲೆ, ಹೆಮ್ಮೆಯ ಕನ್ನಡಿಗ, ಹೆಮ್ಮೆಯ ಕನ್ನಡತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.