ಸಾರಾಂಶ
ಕರಡಕೆರೆ ಪ್ರಸಿದ್ದ ಆಂಜನೇಯಸ್ವಾಮಿ ದೇವಾಲಯ ನಿರ್ಮಾಣ ಮಾಡುತ್ತಿರುವ ತಮಿಳುನಾಡು ಮೂಲದ ಕಾರ್ಮಿಕರಿಗೆ ಗುತ್ತಿಗೆ ನೀಡಲಾಗಿದೆ. ಕಲ್ಲಿನಿಂದಲೇ ನಿರ್ಮಿಸುತ್ತಿರುವ ದೇವಾಲಯದ ಕಾರ್ಯ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಭಾರತೀನಗರ
ಬಿದರಹಳ್ಳಿಯಲ್ಲಿ 40 ಲಕ್ಷ ರು.ವೆಚ್ಚದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯ ನಿರ್ಮಾಣ ಕಾರ್ಯಾರಂಭಕ್ಕೆ ಪೂಜೆ ನೆರವೇರಿಸಲಾಯಿತು.ಗ್ರಾಮದ ದೇವರ ಒಕ್ಕಲಿನ ಭಕ್ತಾದಿಗಳು ಅರೆಚಾಕನಗಳ್ಳಿ ರಸ್ತೆಯ ಸಮೀಪದ ದೇವಾಲಯದ ಭೂಮಿಯಲ್ಲಿ ನಿರ್ಮಾಣ ಕಾರ್ಯಕ್ಕೆ ಗ್ರಾಮದ ಮುಖಂಡರು ಪೂಜೆ ನೆರವೇರಿಸಿದರು.
ಕರಡಕೆರೆ ಪ್ರಸಿದ್ದ ಆಂಜನೇಯಸ್ವಾಮಿ ದೇವಾಲಯ ನಿರ್ಮಾಣ ಮಾಡುತ್ತಿರುವ ತಮಿಳುನಾಡು ಮೂಲದ ಕಾರ್ಮಿಕರಿಗೆ ಗುತ್ತಿಗೆ ನೀಡಲಾಗಿದೆ. ಕಲ್ಲಿನಿಂದಲೇ ನಿರ್ಮಿಸುತ್ತಿರುವ ದೇವಾಲಯದ ಕಾರ್ಯ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಖಂಡರೊಬ್ಬರು ತಿಳಿಸಿದರು.ಈ ವೇಳೆ ಶಿವಣ್ಣ, ರಮೇಶ್, ಪುಟ್ಟಸ್ವಾಮಿ, ರಾಜು, ಸಿದ್ದೇಗೌಡ, ಯಲದಳ್ಳಿ ದೇವರಾಜು, ಹೊಸಹಳ್ಳಿ ಬೋರೇಗೌಡ, ಚಿಕ್ಕ ಬೋರೇಗೌಡ ಉಮೇಶ್ ಬಿದರಳ್ಳಿ ಪಾಲ್ಗೊಂಡಿದ್ದರು.ಇಂದು ಶ್ರೀ ಚೌಡೇಶ್ವರಿ ಮಂಡಲ ಪೂಜೆ
ಮಂಡ್ಯ: ತಾಲೂಕಿನ ಚಂದಗಾಲು ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಶ್ರೀಚೌಡೇಶ್ವರಿ ದೇವಿ ಮಂಡಲ ಪೂಜೆ ಕಾರ್ಯಕ್ರಮ ಆ.13ರಂದು ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ದುರ್ಗಾ ಹೋಮ, ಫಲಪಂಚಾಮೃತ ಅಭಿಷೇಕ ಏರ್ಪಡಿಸಲಾಗಿದೆ. ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸುವರು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 4.30ಕ್ಕೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಸಂಜೆ 7.30ಕ್ಕೆ ಮಲ್ಲನಾಯಕನಕಟ್ಟೆ ಶ್ರೀ ಭೈರವೇಶ್ವರ ಸಾಂಸ್ಕೃತಿಕ ಕಲಾ ಸಂಘದವರಿಂದ ಚನ್ನಪ್ಪ ಚನ್ನೇಗೌಡ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.ಮಧು ಜಿ.ಮಾದೇಗೌಡ ನೇಮಕಮಂಡ್ಯ: ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ತಿನ ವ್ಯವಸ್ಥಾಪನಾ ಮಂಡಳಿ ಹಾಗೂ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಮನಿರ್ದೇಶನ ಮಾಡಿರುವುದಾಗಿ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಕೆಆರ್ ಎಸ್ ನೀರಿನ ಮಟ್ಟಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 123.00 ಅಡಿ
ಒಳ ಹರಿವು – 15,216 ಕ್ಯುಸೆಕ್ಹೊರ ಹರಿವು – 14,396 ಕ್ಯುಸೆಕ್
ನೀರಿನ ಸಂಗ್ರಹ – 46.969 ಟಿಎಂಸಿ