ಕನ್ನಡ ಸಾಹಿತ್ಯ ಅತ್ಯಂತ ಉತ್ಕೃಷ್ಟ

| Published : Sep 29 2024, 01:32 AM IST

ಸಾರಾಂಶ

ಕನ್ನಡ ಸಾಹಿತ್ಯವು 8 ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ದೇಶದ ಸಾಹಿತ್ಯಕ್ಕೆ ಉತ್ಕೃಷ್ಟ ಸಾಹಿತ್ಯದ ನೆಲೆಗಟ್ಟು

ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯ ಅತ್ಯಂತ ಉತ್ಕೃಷ್ಟ ಸಾಹಿತ್ಯವಾಗಿದೆ. ಕನ್ನಡ ಭಾಷೆಯ ಸೊಗಡು ಎಲ್ಲ ಭಾಷೆಗಳಿಗಿಂತ ಭಿನ್ನವಾಗಿ ಮಧುರವಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಮಹಾಕವಿ ಪಂಪ ವೃತ್ತದಲ್ಲಿ ಶನಿವಾರ ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯವು ಅತ್ಯಂತ ಪುರಾತನ ಸಾಹಿತ್ಯವಾಗಿ ಭಾರತದ ಸಾಹಿತ್ಯಿಕ ವಲಯದಲ್ಲಿ ಗುರುತಿಸಿಕೊಂಡಿದೆ. ಕನ್ನಡ ಭಾಷೆಯು ತನ್ನ ವಿಶಿಷ್ಟ ಮಾಧುರ್ಯ ಪ್ರಧಾನವಾದ ಭಾಷೆಯಾಗಿ ಗುರುತಿಸಿಕೊಂಡಿದೆ ಎಂದರು.

ಕನ್ನಡ ಸಾಹಿತ್ಯವು ರಾಘವಾಂಕ, ಪಂಪ, ಹರಿಹರ, ಕುಮಾರವ್ಯಾಸ, ನಯಸೇನ, ರನ್ನ, ಷಡಕ್ಷರಿ, ಪೊನ್ನ, ಜನ್ನ, ಮಧುಸೂದನ, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಅತ್ತಿಮಬ್ಬೆ, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಭಾಷೆಯು ಅಮೋಘವಾಗಿ ಬೆಳೆಯುವ ಮೂಲಕ ನಾಡಿಗೆ ಉತ್ತಮ ಹಾಗೂ ಎಂದೂ ಮರೆಯದ ಸಾಹಿತ್ಯ ನೀಡಿರುವ ಹೆಮ್ಮೆ ಕನ್ನಡ ಭಾಷೆಗೆ ಇದೆ. ಕನ್ನಡ ಸಾಹಿತ್ಯವು 8 ಜ್ಞಾನಪೀಠ ಪ್ರಶಸ್ತಿ ಪಡೆಯುವ ಮೂಲಕ ದೇಶದ ಸಾಹಿತ್ಯಕ್ಕೆ ಉತ್ಕೃಷ್ಟ ಸಾಹಿತ್ಯದ ನೆಲೆಗಟ್ಟು ಒದಗಿಸಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಈ ವರ್ಷ ಮಂಡ್ಯದಲ್ಲಿ ನಡೆಯಲಿದ್ದು. ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.

ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್‌ ಮಾತನಾಡಿ, ಕನ್ನಡ ಜ್ಯೋತಿ ರಥವು ಲಕ್ಷ್ಮೇಶ್ವರ ಪಟ್ಟಣಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭಾಷಾ ಬೆಳವಣಿಗೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ಕೊಡುಗೆ ಅಪಾರವಾಗಿದೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ತಹಸೀಲ್ದಾರ್‌ ವಾಸುದೇವ ಸ್ವಾಮಿ, ತಾಪಂ ಇಓ ಕೃಷ್ಣಪ್ಪ ಧರ್ಮರ ಮಾತನಾಡಿದರು.

ಪುರಸಭೆ ಉಪಾಧ್ಯಕ್ಷ ಪಿರ್ಧೋಶ್ ಆಡೂರು, ಬಿಇಒ ಎಚ್.ಎನ್. ನಾಯಕ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಪ್ರವೀಣ ಬಾಳಿಕಾಯಿ, ಸಿ.ಜಿ. ಹಿರೇಮಠ, ಪುರ್ಣಾಜಿ ಕರಾಟೆ, ಎಸ್.ಎನ್. ಮಳಲಿ, ಪ್ರೊ. ಪರಶುರಾಮ ಬಾರ್ಕಿ, ಪ್ರೋ.ಹಯವದನ, ಬಸಣ್ಣ ಬೆಂಡಿಗೇರಿ, ಬಸವರಾಜ ಬಾಳೇಶ್ವರಮಠ, ಎಂ.ಬಿ. ಹೊಸಮನಿ, ನಿರ್ಮಲಾ ಅರಳಿ, ರತ್ನಾ ಕರ್ಕಿ, ಬಸವರಾಜ ಹರ್ಲಾಪೂರ, ಜೆ.ಎಸ್.ರಾಮಶೆಟ್ಟರ, ಪಿಎಸ್ಐ ಈರಣ್ಣ ರಿತ್ತಿ, ಎಸ್.ಎಫ್. ಕೊಡ್ಲಿ, ಮಂಜುನಾಥ ಅಮಾಸಿ, ಕರವೇ ಅಧ್ಯಕ್ಷ ಶರಣು ಗೋಡಿ, ರಮೇಶ ರಿತ್ತಿ, ಗಂಗಾಧರ ಶಿರಹಟ್ಟಿ, ಬಿಳೆಯಲಿ, ಈರಣ್ಣ ಗಾಣಿಗೇರ, ಶಕ್ತಿ ಕತ್ತಿ, ಟಾಕಪ್ಪ ಸಾತಪೂತೆ, ಮಂಜುನಾಥ ಚಾಕಲಬ್ಬಿ, ದೇವಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ, ಎಸ್.ಬಿ. ಅಣ್ಣಿಗೇರಿ, ನಾಗರಾಜ ಮಜ್ಜಿಗುಡ್ಡ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಕನ್ನಡ ತಾಯಿ ಭುವನೇಶ್ವರಿ ರಥದ ಮೆರವಣಿಗೆಯು ಗೊಜನೂರ ಮಾರ್ಗವಾಗಿ ಮಾಗಡಿಯ ಮೂಲಕ ಶಿರಹಟ್ಟಿ ತಾಲೂಕಿನ ಕಡೆಗೆ ಸಾಗಿತು.