ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಗಿಡ ನೆಡುವ ಮೂಲಕ ಕನ್ನಡಾಂಬೆ ರಕ್ಷಣಾ ವೇದಿಕೆಯು ಭಾವಪೂರ್ಣ ನಮನ ಸಲ್ಲಿಸಿತು.ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ. ರಾಜಶೇಖರ್ ಮಾತನಾಡಿ, 114 ವರ್ಷಗಳ ತುಂಬು ಜೀವನ ನಡೆಸಿ, ಹಸಿರಿನಿಂದ ತುಂಬಿದ ಬದುಕುನ್ನು ನಡೆಸಿದ ಅವರು, ಮನುಕುಲಕ್ಕೆ ನಿಸರ್ಗದ ಮಹತ್ವವನ್ನು ತನ್ನದೇ ಆದ ಕಾರ್ಯಗಳಿಂದ ಮರೆಮಾಡಲಾಗದಂತೆ ಸಾರಿದ ಮಹಾನ್ ಆತ್ಮ ನಮ್ಮೊಂದಿಗಿಲ್ಲ. ತಿಮ್ಮಕ್ಕ ಅವರು ತಮ್ಮ ಬದುಕಿನಂತೆಯೇ ಅಂತಿಮ ಕ್ಷಣಗಳಿಗೂ ಕೂಡ ಪ್ರೇರಣೆಯ ಒಂದು ಸಂಕೇತವಾಗಿಯೇ ಉಳಿದಿರುವುದಾಗಿ ಹೇಳಿದರು.ತಮ್ಮ ಸರಳ ಬದುಕಿನಲ್ಲಿ ಸಾವಿರಾರು ಮರಗಳನ್ನು ಮಕ್ಕಳಂತೆ ಸಾಕಿದ ಅವರು ನಿಸರ್ಗವನ್ನು ನೋಡಿಕೊಳ್ಳುವುದು ಮಾನವನ ಧರ್ಮ ಎಂಬುದನ್ನು ಪದಗಳಿಲ್ಲದೆ ಕೃತ್ಯಗಳಿಂದ ಸಾಬೀತುಪಡಿಸಿರುವುದಾಗಿ ತಿಳಿಸಿದರು.ತಮ್ಮ ಕೈಗಳಿಂದ ಬೆಳೆದ ಪ್ರತೀ ಮರ ಇಂದಿಗೂ ನಮ್ಮ ಸಮಾಜಕ್ಕೆ ಉಸಿರಾಗಿದ್ದು ಅವರ ಸೇವೆ ಮತ್ತು ಸಮರ್ಪಣೆ ಅನೇಕ ಪೀಳಿಗೆಗಳಿಗೆ ಸ್ಫೂರ್ತಿಯಾಗಿ ಉಳಿಯಲಿದೆ. ಮಾನವತೆ ಕರುಣೆ ಪರಿಸರಪ್ರೇಮ ಇವನ್ನೆಲ್ಲ ಒಟ್ಟಾಗಿ ಮೈಗೂಡಿಸಿಕೊಂಡ ಮಹಾನ್ ವ್ಯಕ್ತಿತ್ವವನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ದೊಡ್ಡ ನಷ್ಟ. ವೃಕ್ಷಮಾತೆ ತಿಮ್ಮಕ್ಕ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಅವರು ನೆಟ್ಟ ಮರಗಳು ಶತಮಾನಗಳವರೆಗೆ ಅವರ ಕಥೆಯನ್ನು ಹೇಳುತ್ತಲೇ ಇರುತ್ತವೆ ಎಂದು ಅವರು ತಿಳಿಸಿದರು.ನಗರದ ನ್ಯಾಯಾಲಯದ ಎದುರಿನ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ವೇದಿಕೆ ಖಜಾಂಚಿ ನಂಜುಂಡ, ಸಿಂಧುವಳ್ಳಿ ಶಿವಕುಮಾರ್, ಹೊನ್ನೇಗೌಡ, ನಾಗರಾಜ್, ಗೌತಮ್, ಮನುಗೌಡ, ಶಿವು ಈರಪ್ಪನಕೊಪ್ಪಲು, ಕಿರಣ್, ಮಹದೇವಸ್ವಾಮಿ, ಕರುನಾಡು ಲಾರಿ ಚಾಲಕರ ಸಂಘದ ಅಧ್ಯಕ್ಷ ಲೋಕೇಶ್, ಶ್ರೀನಿವಾಸ್, ಭಾಗ್ಯ, ಲಕ್ಷ್ಮೀ, ಸೌಭಾಗ್ಯ ಮೊದಲಾದವರು ಇದ್ದರು.
;Resize=(128,128))
;Resize=(128,128))