ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಮಲ್ಲೇಶ್ವರಂ ವೃತ್ತದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಆರನೇ ಆವೃತ್ತಿಯ ಎರಡು ದಿನಗಳ ‘ಸುವರ್ಣ ಶಿಕ್ಷಣ ಎಜುಕೇಷನ್ ಎಕ್ಸ್‌ಪೋ’ಗೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.ಎರಡು ದಿನ ಕಾಲ ನಡೆದ ಎಕ್ಸ್‌ಪೋಗೆ ಸಹಸ್ರಾರು ವಿದ್ಯಾರ್ಥಿಗಳು, ಪೋಷಕರು ಆಗಮಿಸಿ ಮಾಹಿತಿ ಪಡೆದರು. ದ್ವಿತೀಯ ಪಿಯುಸಿ ನಂತರ ಉನ್ನತ ಶಿಕ್ಷಣಕ್ಕೆ ಇರುವ ಅವಕಾಶಗಳು, ಶುಲ್ಕ ವಿವರ, ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಇರುವ ಸೌಲಭ್ಯಗಳು ಮತ್ತಿತರ ಮಾಹಿತಿಗಳನ್ನು ಪಡೆದು ವಿದ್ಯಾರ್ಥಿಗಳು ಪಡೆದುಕೊಂಡರು.
ಸಿಎಂಆರ್ ವಿಶ್ವವಿದ್ಯಾನಿಲಯ, ದೊಡ್ಡಬಳ್ಳಾಪುರದ ಅಮಿಟಿ ವಿವಿ, ಕರ್ನಾಟಕ ರಾಜ್ಯ ಮುಕ್ತ ವಿವಿ, ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ರೇವಾ ವಿವಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮಂಡ್ಯದ ಪಿಇಎಸ್ ಇಂಜನಿಯರಿಂಗ್ ಕಾಲೇಜು, ಗಾರ್ಡನ್ ಸಿಟಿ ಕಾಲೇಜು, ಸಪ್ತಗಿರಿ ಎನ್‌ಪಿಎಸ್ ವಿವಿ, ಚೆನ್ನೈ ಅಮೃತ ಹೋಟೆಲ್ ಮ್ಯಾನೇಜ್‌ಮೆಂಟ್, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಮೆಂಟೊರೆ ಐಎಎಸ್ ಅಕಾಡೆಮಿ, ಡಾಕ್ಟರ್ ಅಬ್ರಾಡ್, ಏಟ್ರಿಯಾ ಕಾಲೇಜು, ರಾಜರಾಜೇಶ್ವರಿ ಕಾಲೇಜು, ಡಾನ್‌ಬಾಸ್ಕೋ, ಕೇಂಬ್ರಿಡ್ಜ್ ಸೇರಿದಂತೆ 50ಕ್ಕೂ ಅಧಿಕ ಪ್ರತಿಷ್ಠಿತ ಕಾಲೇಜು, ವಿವಿಗಳು ಎಕ್ಸ್‌ಪೋದಲ್ಲಿ ಪಾಲ್ಗೊಂಡಿದ್ದವು.ನಂದಿನಿ ಲೇಔಟ್‌ನ ಚೇತನ್ ಎಂಬ ವಿದ್ಯಾರ್ಥಿ ಸಪ್ತಗಿರಿ ಎನ್‌ಪಿಎಸ್ ವಿವಿಯಿಂದ ಆಯೋಜಿಸಿದ್ದ ಲಕ್ಕಿಡಿಪ್‌ನಲ್ಲಿ ಲ್ಯಾಪ್‌ಟಾಪ್‌ಗೆ ಭಾಜನರಾದರು. ಶನಿವಾರ ಎಕ್ಸ್‌ಪೋಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದ್ದರು. ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನ ಸಮೂಹ ಸಂಪಾದಕೀಯ ನಿರ್ದೇಶಕರಾದ ರವಿ ಹೆಗಡೆ, ನಟ ಮಾಸ್ಟರ್ ಆನಂದ್, ನಟಿ ರಂಜನಿ ರಾಘವನ್ ಮತ್ತಿತರರು ಹಾಜರಿದ್ದರು.
ಎಕ್ಸ್‌ಪೋ ಆಯೋಜಿಸಿದ್ದಕ್ಕೆ ಧನ್ಯವಾದಗಳು 36 ವರ್ಷದ ಹಳೆಯ ಸಂಸ್ಥೆ ನಮ್ಮದಾಗಿದ್ದು, ಭವಿಷ್ಯದಲ್ಲಿನ ಅವಕಾಶಗಳ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಇಂತಹ ಉತ್ತಮ ಎಜುಕೇಷನ್ ಎಕ್ಸ್‌ಪೋ ಆಯೋಜಿಸಿರುವುದಕ್ಕೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ಗೆ ಅಭಿನಂದನೆಗಳು.
- ಅಶ್ವಿತ್ ಮರುಳಕ್ಕನವರ್, ಸಿಎಂಆರ್ ವಿವಿ ಪ್ರೋಗ್ರಾಂ ಮ್ಯಾನೇಜರ್
ಕೋರ್ಸ್‌ಗಳ ಬಗ್ಗೆ ತಿಳಿಯಲು ಸಹಕಾರಿಎಂಜನಿಯರಿಂಗ್, ವೈದ್ಯಕೀಯ ಸೇರಿದಂತೆ ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಇಂತಹ ಎಕ್ಸ್‌ಪೋಗಳು ಎಲ್ಲ ತಾಲೂಕುಗಳಲ್ಲೂ ಆಯೋಜನೆಯಾದರೆ ಪೋಷಕರು, ಮಕ್ಕಳಿಗೆ ಬಹಳ ಅನುಕೂಲವಾಗುತ್ತದೆ.- ಭೀಮೇಶ್, ಕೊಪ್ಪಳ