ಸಾರಾಂಶ
ಜಮಖಂಡಿ ತಾಲೂಕಿನ ಕಲ್ಲಹಳ್ಳಿಯ ಸಾಹಿತಿ, ಕಾದಂಬರಿಕಾರ ಸತ್ಯಕಾಮರ ಸುಮ್ಮನೆಯ ಆವರಣದಲ್ಲಿ ಅ,5 ಭಾನುವಾರ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ವಾರ್ಷಿಕ ಸಾಮಾನ್ಯ ಸಭೆ ಮುಂದೂಡಲಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಕಲ್ಲಹಳ್ಳಿಯ ಸಾಹಿತಿ, ಕಾದಂಬರಿಕಾರ ಸತ್ಯಕಾಮರ ಸುಮ್ಮನೆಯ ಆವರಣದಲ್ಲಿ ಅ,5 ಭಾನುವಾರ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ವಾರ್ಷಿಕ ಸಾಮಾನ್ಯ ಸಭೆ ಮುಂದೂಡಲಾಗಿದೆ. ಕಸಾಪ ಸಭೆಯ ಯಶಸ್ಸಿಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಜ್ಯ ಅಧ್ಯಕ್ಷ ಡಾ.ಮಹೇಶ ಜೋಷಿ, ಬಾಗಲಕೋಟೆ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷರು ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಜಮಖಂಡಿಯ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಹಾಗೂ ತಂಡದವರು. ಝೂಮ್ ಸಭೆಯ ತಾಂತ್ರಿಕ ತಂಡದವರು ಸಭೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಕಸಾಪ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆಯನ್ನು ಸೆ.12ರಂದು ಹೊರಡಿಸಿತ್ತು. ಆದರೆ ಕಲ್ಲಹಳ್ಳಿಗ್ರಾಮದಲ್ಲಿ ಗುಂಪು ಘರ್ಷಣೆ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿರುವದರಿಂದ ಕಲಂ 163 ರ ಅನ್ವಯ ತಾಲೂಕು ದಂಡಾಧಿಕಾರಿ ಅನೀಲ ಬಡಗೇರ ಬಿಎನ್‌ಎಸ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿರುವುದರಿಂದ ಜೊತೆಗೆ ಅ.5ರಂದು ಬಾಗಲಕೋಟೆಯಲ್ಲಿ ಆರ್‌ಎಸ್ಎಸ್‌ನ ಪಥ ಸಂಚಲನ ನಡೆಯಲಿದ್ದು, ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೊಬಸ್ತ್‌ಗೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ಕಸಾಪ ವಾರ್ಷಿಕ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.